ಚಿಕ್ಕಮಗಳೂರು : ದಿನಾಂಕ 21.10.2024ರ ಸೋಮವಾರದಂದು ಚಿಕ್ಕಮಗಳೂರಿನಲ್ಲಿ ಡಿಸ್ಟಿಕ್ ಲೆವೆಲ್ ಬ್ಯಾಂಕರ್ಸ್ ಕಮಿಟಿ ಸಭೆಯನ್ನು ಆಯೋಜಿಸಲಾಗಿತ್ತು.

ಸಂಸದರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಾಸಕರಾದ ಸನ್ಮಾನ್ಯ ತಮ್ಮಯ್ಯ ನವರು ಉಪಸಭಾಪತಿಗಳಾದ ಎಂ ಕೆ ಪ್ರಾಣೇಶ್ ರವರು, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ರವರು, ಚಿಕ್ಕಮಗಳೂರು ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು, ಕಾಫಿ ಮಂಡಳಿ ಅಧ್ಯಕ್ಷರಾದ ಎಂ,ಜೆ ದಿನೇಶ್‍ರವರು ಕೆ.ಜಿ.ಎಫ್ ಅಧ್ಯಕ್ಷರಾದ ಡಾ. ಹೆಚ್ ಟಿ ಮೋಹನ್ ಕುಮಾರ್ ರವರು,ಪ್ರಧಾನ ಕಾರ್ಯದರ್ಶಿಗಳಾದ ಕೆ.ಬಿ ಕೃಷ್ಣಪ್ಪ ರವರು, ಬೆಳೆಗಾರ ಪತ್ರಿಕೆ ಸಂಪಾದಕರಾದ ಟಿ ಪಿ ಸುರೇಂದ್ರ ರವರು ಹಾಗೂ ಹೆಚ್ ಡಿ ಪಿ ಎ ಗೌರವ ಕಾರ್ಯದರ್ಶಿ ಕೆ ಬಿ ಲೋಹಿತ್ ರವರು, ಕೆಜಿಎಫ್ ನ ಸಾಹಸ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ದಿನಾಂಕ 10/10/ 2024 ರಂದು ಮಂಗಳೂರಿನ ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಬಳಿ ಕೆನರಾ ಬ್ಯಾಂಕ್ ಸರ್ಫೇಸಿ ಕಾಯ್ದೆ ಅಡಿಯಲ್ಲಿ ಬೆಳಗಾರರನ್ನು ಶೋಷಣೆ ಮಾಡುತ್ತಿರುವ ವಿರೋಧವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು

ಈ ಸಭೆಯಲ್ಲಿ ಸನ್ಮಾನ್ಯ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸಹ ಪಾಲ್ಗೊಂಡು ಬೆಳೆಗಾರರ ಪರ ನಿಂತಿದ್ದರು. ಇದರ ಮುಂದುವರೆದಂತೆ ಕಾಫಿ ಬೆಳೆಗಾರರನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡುವ ಸಲುವಾಗಿ ಹಾಗೂ ಬ್ಯಾಂಕ್ ಗಳು ಬೆಳೆಗಾರರನ್ನು ಶೋಷಿಸುತ್ತಿರುವ ವಿರುದ್ಧವಾಗಿ ನಿರ್ಣಯ ಕೈಕೊಳ್ಳಲು ಡಿಸ್ಟಿಕ್ ಲೆವೆಲ್ ಬ್ಯಾಂಕರ್ಸ್ ಕಮಿಟಿ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ ಸಂಸದರು ಮಾತನಾಡಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆದಾಗಲೂ ಕೆನರಾ ಬ್ಯಾಂಕ್ ನ ಅಧಿಕಾರಿಗಳು ಬೆಳೆಗಾರರ ಅಹವಾಲುಗಳನ್ನು ಸ್ವೀಕರಿಸಿರುವುದಿಲ್ಲ ಹಾಗಾಗಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸದಿದ್ದ ಪಕ್ಷದಲ್ಲಿ ಅಧಿಕಾರಿಗಳ ವಿರುದ್ಧ ಹಕ್ಕು ಚುತಿ ಮಂಡನೆ ಮಾಡುವುದಾಗಿ ಕಡಕ್ ಎಚ್ಚರಿಕೆ ನೀಡಿರುತ್ತಾರೆ. ಅಲ್ಲದೆ ಬ್ಯಾಂಕ್ ಗಳು ಬೆಳೆಗಾರರ ಮೇಲೆ ಸರ್ಫೇಸಿ ಕಾಯ್ದೆ ಅಡಿಯಲ್ಲಿ ಈ ಹರಾಜು ಮಾಡುವುದನ್ನು ಕೂಡಲೇ ನಿಲ್ಲಿಸಿ 6 ತಿಂಗಳುಗಳ ಅವಧಿಗೆ ಹರಾಜು ನೋಟಿಸು ನೀಡದಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಇದರ ಮಧ್ಯದಲ್ಲಿ ಓ ಟಿ ಎಸ್ ಮಾಡಿಕೊಳ್ಳಲು ಇಚ್ಚಿಸುವ ಬೆಳಗಾರರಿಗೆ ಒ. ಟಿ. ಎಸ್ ಸೌಲಭ್ಯ ನೀಡುವಂತೆ ಸಭೆಯಲ್ಲಿ ತಿಳಿಸಲಾಯಿತು.

ಆರು ತಿಂಗಳ ಒಳಗಾಗಿ ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾಫಿ ಬೆಳೆಗಾರರನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡಲು ಪ್ರಯತ್ನಿಸಲಾಗುವುದೆಂದು ಮಾನ್ಯ ಸಂಸದರು ಭರವಸೆ ನೀಡಿರುತ್ತಾರೆ.

ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಲೀಡ್ ಬ್ಯಾಂಕ್‍ನ ವ್ಯವಸ್ಥಾಪಕರು ನಡುವಳಿಕೆಯನ್ನು ಅಂಗೀಕಾರ ಮಾಡಿರುತ್ತಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *