ಹಾಸನ: ಮಾನವ ಹಕ್ಕುಗಳ ಕಾರ್ಯಕರ್ತರು ಎಂದು ಹೇಳಿಕೊಂಡು ನನಗೆ ಮತ್ತು ಇತರರಿಗೆ ಮೋಸ ಮಾಡಿ ಕೋಟ್ಯಾಂತರ ರೂಗಳನ್ನು ನಮ್ಮಿಂದ ಪಡೆದು ವಂಚಿಸಲಾಗಿದ್ದು, ಪೊಲೀಸ್ ಠಾಣೆಗೆ ದೂರು ನೀಡಲು ಹೋದರೇ ನಮ್ಮ ದೂರನ್ನು ಸ್ವೀಕರಿಸದೇ ಮೋಸ ಮಾಡಿದವರ ವ್ಯಕ್ತಿಗಳಿಂದ ದೂರು ಪಡೆದುಕೊಂಡು ನಮ್ಮಗಳ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ.
ಕೂಡಲೇ ನಮಗೆ ಮೋಸ ಮಾಡಿರುವ ವ್ಯಕ್ತಿಗಳು ಮತ್ತು ಅವರೊಂದಿಗೆ ಶಾಮೀಲಾಗಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ನಮಗೆ ನ್ಯಾಯ ಕೊಡಿಸುವಂತೆ ಎಸ್ಪಿ ಕಛೇರಿ ಆವರಣದಲ್ಲಿ ಮೊದಲು ಎಎಸ್ಪಿ ಮುಂದೆ ಮೋಸ ಹೋದವರು ತಮ್ಮ ಅಳಲು ತೋಡಿಕೊಂಡು ನಂತರ ಎಸ್ಪಿ ಮಹಮ್ಮದ್ ಸುಜೀತಾ ಅವರಿಗೆ ಮನವಿ ಸಲ್ಲಿಸಿದರು.
ಹಾಸನ ನಗರದ ಸಮೀಪ ವಿಜಯನಗರದ ವಾಸಿಯಾದ ಅನುಷಾ ಕೃಪಾ ಮತ್ತು ಇವರ ಸ್ನೇಹಿತರಾದ ಭುವನೇಶ್ವರಿ ಅಶ್ವಿನಿ, ದೇವರಾಜ್, ಗಫಾರ್, ಶಶಿ, ಅಭಿಷೇಕ್ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತನೆಂದು ಹೇಳಿಕೊಳ್ಳುವ ಸಯ್ಯಾದ್ ಏಜಾಜ್ ಇವರುಗಳು ನನಗೆ ಮತ್ತು ಇತರರಿಗೆ ಮೋಸ ಮಾಡಿ ರೈತರುಗಳಾದ ನಮ್ಮಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಪಡೆದು ವಂಚಿಸಿದ್ದು, ನಮಗೆ ವಂಚಿಸಿರುವವರ ಮೇಲೆ ನಾವುಗಳು ಹಾಸನ ಪೆನ್ನನ್ ಮೊಹಲ್ಲಾ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌ರವರಿಗೆ ದೂರು ನೀಡಲು ಹೋದಾಗ ಇನ್ಸ್‌ಪೆಕ್ಟರ್‌ರವರು ನಮ್ಮ ದೂರನ್ನು ಸ್ವೀಕರಿಸದೆ ನಮಗೆ ಮೋಸ ಮಾಡಿದ ವ್ಯಕ್ತಿಗಳಿಂದಲೇ ದೂರನ್ನು ಪಡೆದುಕೊಂಡು ನಮ್ಮ ಮೇಲೆ ಸುಳ್ಳು ಕೇಸನ್ನು ದಾಖಲಿಸಿರುವ ಬಗ್ಗೆ ಹಾಗೂ ನಮಗೆ ಮೋಸ ಮಾಡಿರುವ ವ್ಯಕ್ತಿಗಳು ಮತ್ತು ಅವರೊಂದಿಗೆ ಶಾಮೀಲಾಗಿರುವ ಪೋಲಿಸ್ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸಿ ನಮಗೆ ನಮ್ಮಿಂದ ಪಡೆದುಕೊಂಡಿರುವ ಹಣವನ್ನು ಕೊಡಿಸಬೇಕಾಗಿ ಮನವಿ ಮಾಡಿದರು.
ವಿಜಯನಗರದ ವಾಸಿಯಾದ ವಿಜಯಕುಮಾರ್‌ರವರ ಮಗಳಾದ ಅನುಷಾ ಕೃಪಾ ಎಂಬುವವರೊಡನೆ ೨೦೧೮ ರಲ್ಲಿ ಪರಿಚಯವಾಗಿರುತ್ತದೆ. ಅನುಷಾ ಎಂಬುವವರು ಸಕಲೇಶಪುರ ತಾಲ್ಲೂಕು, ದೊಡ್ಡನಹಳ್ಳಿ ಚೌಡೇಶ್ವರಿ ದೇವಸ್ಥಾನಕ್ಕೆ ಪ್ರತಿ ತಿಂಗಳು ಪೂಜೆಗೆ ಬಂದು ಹಂದಿಯನ್ನು ಒಪ್ಪಿಸಿಕೊಂಡು ಹೋಗುತ್ತಿದ್ದರು. ಅಲ್ಲಿ ಹಂದಿ ವ್ಯಾಪಾರ ಮಾಡುತ್ತಿದ್ದ ನಮಗೆ ಪರಿಚಯಸ್ಥರಾದ ಹಿರಿಯೂರು ಕೂಡಿಗೆಯ ಸತೀಶ್‌ರವರ ಮೂಲಕ ನನಗೆ ಪರಿಚಯವಾಗಿರುತ್ತದೆ.
ಅನುಷಾರೊಂದಿಗೆ ಭುವನೇಶ್ವರಿ ಎಂಬುವವರು ಹಾಗೂ ಅವರೊಂದಿಗೆ ಈ ವ್ಯಕ್ತಿಗಳು ಬರುತ್ತಿದ್ದರು. ಪ್ರತಿ ತಿಂಗಳು ಬಂದು ದೇವರಲ್ಲಿ ಅನುಷಾಳಿಗೆ ನೂರು ಕೋಟಿ ಆಸ್ತಿ ಇದ್ದು, ಆಸ್ತಿಯ ಮೇಲೆ ನ್ಯಾಯಾಲಯದಲ್ಲಿ ಕೇಸು ದಾಖಲಾಗಿರುತ್ತದೆ ಮತ್ತು ಆದಾಯ ತೆರಿಗೆಯವರು ಅನುಷಾ ಕೃಪಾರವರ ಖಾತೆಯಲ್ಲಿದ್ದ ೩ ಕೋಟಿ ಎಂಬತ್ತು ಲಕ್ಷ ಹಣವನ್ನು ಸೀಜ್ ಮಾಡಿರುವುದರಿಂದ ಈ ಕೇಸು ಬೇಗ ಇತ್ಯರ್ಥವಾದರೆ ದೇವರಿಗೆ ೧ ಕೋಟಿ ಹಣ ಮತ್ತು ಹಂದಿಯನ್ನು ಅರ್ಪಿಸುತ್ತೇನೆಂದು ಪ್ರತಿ ತಿಂಗಳು ಬಂದು ಕೇಳಿಕೊಳ್ಳುತ್ತಿದ್ದರು.
ಅನುಷಾ ಮತ್ತು ಅವರ ಕಡೆಯವರು ಸತೀಶ್ ಕಡೆಯಿಂದ ಪರಿಚಯವಾದ ಮೇಲೆ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಪ್ರತಿ ತಿಂಗಳು ನನ್ನನ್ನು ಮತ್ತು ನಮ್ಮ ಸುತ್ತಮುತ್ತಲ ಗ್ರಾಮದ ಸುಮಾರು ೧೦ ಜನರನ್ನು ದೇವಸ್ಥಾನದ ಹತ್ತಿರ ಬರುವಂತೆ ಹೇಳುತ್ತಿದ್ದರು ಎಂದರು.
ಅನುಷಕ್ಕನ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಇದೆ, ಅದನ್ನು ನ್ಯಾಯಾಲಯದಿಂದ ಸೀಜ್ ಮಾಡಿದ್ದಾರೆಂದು ಒಂದು ಪಾಸ್ ಪುಸ್ತಕವನ್ನು ತೋರಿಸಿ ೩ ಕೋಟಿ ಎಂಬತ್ತು ಲಕ್ಷ ರೂಪಾಯಿಗಳು ನಮೂದಾಗಿರುವುದನ್ನು ಅಲ್ಲಿದ್ದ ನಮ್ಮೆಲ್ಲರಿಗೂ ತೋರಿಸಿ ನೀವು ಅಕ್ಕನನ್ನು ನಂಬಿ ಅವರಿಗೆ ಸಹಾಯ ಮಾಡಿ ನಿಮ್ಮ ಜೀವನ ಪೂರ್ತಿ ನೀವು ಸುಖವಾಗಿರಬಹುದು. ಅವರು ನಿಮ್ಮ ಕೈಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು.
ಅನುಷಾರವರು ಹೇಳಿದ ಅವರ ಸ್ನೇಹಿತರುಗಳಾದ ಭುವನೇಶ್ವರಿ ಅಶ್ವಿನಿ, ದೇವರಾಜ್, ಗಫಾರ್, ಶಶಿ, ಅಭಿಷೇಕ್ ಇವರುಗಳ ಬ್ಯಾಂಕ್ ಖಾತೆಗೆ ಅನುಷಾರವರು ಕೇಳಿದಷ್ಟು ಹಣವನ್ನು ವರ್ಗಾವಣೆ ಮಾಡಿರುತ್ತೇವೆ. ಈಗ ಒಟ್ಟು ಸುಮಾರು ೩ ಕೋಟಿ ಎಂಬತ್ತು ಲಕ್ಷ ರೂಗಳಿಗೂ ಅಧಿಕ ಹಣವನ್ನು ಇಲ್ಲಿಯವರೆಗೂ ನಮ್ಮೆಲ್ಲರುಗಳಿಂದ ಅನುಷಾರವರು ಪಡೆದುಕೊಂಡಿರುತ್ತಾರೆ. ಅನುಷಾರವರು ಹೇಳಿದ ವ್ಯಕ್ತಿಗಳ ಖಾತೆಗೆ ಫೋನ್ ಪೇ ಮತ್ತು ಅಕೌಂಟ್ ಪೇ ಮೂಲಕ ಹಾಗೂ ನಗದಾಗಿ ಹಣವನ್ನು ನೀಡಿರುತ್ತೇವೆ. ಸಂಪೂರ್ಣ ದಾಖಲಾತಿ ಇರುತ್ತದೆ.
ಇತ್ತೀಚೆಗೆ ಅನುಷಾರವರ ವರ್ತನೆಯ ಮೇಲೆ ಅನುಮಾನ ಬಂದು ನಾವುಗಳುಅನುಷಾರವರು ಹೇಳಿದ ನ್ಯಾಯಾಲಯದ ಪ್ರಕರಣದ ಕುರಿತು ವಿಚಾರಿಸಲಾಗಿ ಅಂತಹ ಯಾವುದೇ ವ್ಯಾಜ್ಯವು ನ್ಯಾಯಾಲಯದಲ್ಲಿ ಇಲ್ಲದಿರುವುದು ಕಂಡುಬಂದಿರುತ್ತದೆ ಹಾಗೂ ಅನುಷಾರವರು ನಮ್ಮಗಳಿಗೆ ಸುಳ್ಳು ಹೇಳಿ ಹಣ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ. ನಾವುಗಳು ಕೂಡಲೇ ಅನುಷಾ ಮತ್ತು ಅವರ ಸ್ನೇಹಿತರುಗಳನ್ನು ವಿಚಾರಿಸಲಾಗಿ ಅವರು ವಾಪಾಸ್ಸು ಹಣ ನೀಡುವುದಾಗಿ ತಿಳಿಸಿರುತ್ತಾರೆ.
ಅದರಂತೆ ನನ್ನನ್ನು ಮತ್ತು ಇತರೆ ೫-೬ ಜನಗಳು ಮಾತ್ರ ಹಾಸನಕ್ಕೆ ಬನ್ನಿ ಬೇರೆ ಯಾರಿಗೂ ಹೇಳಬೇಡಿ ನಿಮಗೆ ಕೊಡಬೇಕಾದ ಹಣವನ್ನು ನಾನು ಕೊಡುತ್ತೇನೆ. ೨೦೨೪ ಜುಲೈ ೧೦ ರಂದು ಹಾಸನದ ವಿಜಯನಗರ ಬಡಾವಣೆಯ ಪಾರ್ಕಿನ ಹತ್ತಿರ ಬೆಳಗ್ಗೆ ೧೦ ಗಂಟೆಗೆ ಬರುವಂತೆ ತಿಳಿಸಿದ್ದು, ಅದರಂತೆ ನಾನು ಸತೀಶ್, ದೇವರಾಜ್, ಪುಟ್ಟಸ್ವಾಮಿ, ಜ್ಯೋತಿ ಮತ್ತು ಮಹಿಮಾ ಎಲ್ಲರೂ ವಿಜಯನಗರದ ಪಾರ್ಕಿನ ಹತ್ತಿರ ಹೋದಾಗ ಅನುಷಾ ಒಬ್ಬರೇ ಬೆಳಗ್ಗೆ ೧೦.೩೦ ಗಂಟೆಗೆ ಬಂದು ನಮ್ಮೆಲ್ಲರಿಗೂ ಹಣ ಕೊಡುತ್ತೇನೆ ಇಲ್ಲಿ ವಿಜಯನಗರ ಬಡಾವಣೆಯಲ್ಲಿ ನನಗೆ ನನ್ನದೇ ಆದ ಹೆಸರು ಇದೆ ನಮ್ಮ ಮನೆಯ ಹತ್ತಿರ ಯಾರು ಬರಬೇಡಿ ಜುಲೈ ೧೯ ರಂದು ಕೊಡುತ್ತೇನೆ ಬಂದು ತೆಗೆದುಕೊಂಡು ಹೋಗಿ ಎಂದು ತಿಳಿಸಿರುತ್ತಾರೆ.
ಅನುಷಾರವರು ನಮ್ಮೊಂದಿಗೆ ಬೆಳಗ್ಗೆ ೧೦.೩೦ ರಿಂದ ಮದ್ಯಾಹ್ನ ೧.೦೦ ಗಂಟೆಯವರೆಗೂ ವಿಜಯನಗರ ಪಾರ್ಕ್‌ನಲ್ಲಿ ಇದ್ದು ನಂತರ ನಮ್ಮಗಳಿಗೆ ಒಂದು ದಾಖಲಾತಿಯನ್ನು ಮಾಡಿಕೊಡುತ್ತೇನೆ ಆಗ ನಿಮ್ಮಗಳಿಗೆ ನನ್ನ ಮೇಲೆ ನಂಬಿಕೆ ಬರುತ್ತದೆ. ನಿಮ್ಮಗಳಿಗೆ ನಾನು ಫೋನ್ ಮಾಡುತ್ತೇನೆ ಆ ಜಾಗಕ್ಕೆ ನೀವು ಬನ್ನಿ ಎಂದು ಹೇಳಿದರು
ನಾವುಗಳು ಅನುಷಾರವರ ಮಾತನ್ನು ನಂಬಿ ನೀವು ಪೋನ್ ಮಾಡಿದಾಗ ಬರುತ್ತೇವೆಂದು ಹೇಳಿದರು. ಕದಂಬ ಹೊಟೇಲ್ ಹತ್ತಿರವಿರುವ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಬರುವಂತೆ ತಿಳಿಸಿರುತ್ತಾರೆ. ನಾವುಗಳು ಮಧ್ಯಾಹ್ನ ೨.೫೦ ನಿಮಿಷಕ್ಕೆ ಅಲ್ಲಿಗೆ ಹೋಗಿರುತ್ತೇವೆ. ನಾವು ಅಲ್ಲಿಗೆ ಹೋದಾಗ ಅಲ್ಲಿ ಅನುಷಾ, ಭುವನೇಶರಿ ಮತ್ತು ಸಯ್ಯದ್ ಏಜಾಜ್ ಇದ್ದರು. ಅವರು ನಮ್ಮೆಲ್ಲರಿಗೂ ಅಲ್ಲಿಗೆ ಇಲ್ಲಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳಬಾರದು. ಮೊಬೈಲ್ ತೆಗೆದು ಹೊರಗೆ ಇಡಿ. ನಮ್ಮ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಇದೆ. ನಿಮಗೆ ರೆಕಾರ್ಡ್ ಬೇಕಾದರೆ ನಾವು ಕೊಡುತ್ತೇವೆಂದು ನಮಗೆ ಹೇಳಿದರು.
ಸಿಸಿ ಕ್ಯಾಮಾರ ನಾಟಕವನ್ನಾಡಿ ಕಚೇರಿಗೆ ಕರೆಸಿರುವುದು ನಮಗೆ ತಿಳಿದಿರುವುದಿಲ್ಲ. ಕೋಟಿ ಹಣವನ್ನು ಕೊಡುವಷ್ಟು ಶಕ್ತಿವಂತರೇ ರೈತರಿಗೆ ಹಣವನ್ನು ಕೊಡುವುದಕ್ಕೆ ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ ನಾವುಗಳು ಕಾಪಿ ಮೆಣಸು ಮರಗಳನ್ನು ಮಾರಾಟ ಮಾಡಿ ಸುಮಾರು ೪೦ ಲಕ್ಷಕ್ಕೆ ಚಿನ್ನಭಾರಣೆ ಇಟ್ಟಿದ್ದೇವೆ ಎಂದಾಗ ಹಾಸನದ ಎಷ್ಟೋ ಜನಗಳ ಹತ್ತಿರ ವ್ಯವಹಾರ ಮಾಡಿದ್ದೇನೆ ಯಾರೂ ಕೂಡ ನನ್ನಿಂದ ಏನೂ ಕಿತ್ತೋಳೋಕೆ ಆಗಿಲ್ಲ ಇನ್ನು ನೀವು ಯಾವ ಲೆಕ್ಕ ಎಂದು ಹೇಳಿ ನೀವು ಸುಮ್ಮನೆ ಕೆಳಗಡೆ ತಿರುಗಿ ನೋಡಿ ನನ್ನ ಕಡೆ ಎಷ್ಟು ಹುಡುಗರು ನಿಂತಿದ್ದಾರೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿದರು.
ನಮ್ಮ ದೂರನ್ನು ಪಡೆದುಕೊಳ್ಳದೆ ಯಸಳೂರಿಗೆ ಹೋಗಿ ದೂರು ನೀಡುವಂತೆ ಹೇಳಿ ಮಾರನೇ ದಿನ ಅನುಷಾ, ಏಜಾಜ್ ಪಾಶ, ಭುವನೇಶ್ವರಿ ಎಲ್ಲರೂ ಪೆನ್ನನ್ ಮೊಹಲ್ಲಾ ಪೋಲಿಸ್ ಠಾಣೆ ಇನ್ಸ್‌ಪೆಕ್ಟರ್‌ರೊಂದಿಗೆ ಶಾಮೀಲಾಗಿ ನನ್ನ ಮತ್ತು ಇತರರ ಮೇಲೆ ಕೊಲೆ ಯತ್ನ ದೂರು ನೀಡಿರುವುದು ಸಮಾಜದ ಕಗ್ಗೋಲೆಯಾಗಿರುತ್ತದೆ.
ಅನುಷಾ ಮತ್ತು ಅವರ ಸಹಚರರು ಇದೇ ರೀತಿ ಅನೇಕ ವ್ಯಕ್ತಿಗಳಿಗೆ ಮೊಸ ಮಾಡಿರುವುದು ಕಂಡು ಬಂದಿರುತ್ತದೆ ಮತ್ತು ಇನ್ನು ಮುಂದೆಯೂ ಸಹ ಮುಗ್ಧ ವ್ಯಕ್ತಿಗಳನ್ನು ಹುಡುಕಿ ಮೋಸ ಮಾಡುವ ಸಂಭವವಿರುತ್ತದೆ. ನಮ್ಮಗಳಿಗೆ ಮೋಸ ಮಾಡಿ ನಮ್ಮ ಮೇಲೆಯೇ ಸುಳ್ಳು ಕೇಸು ದಾಖಲಿಸಿರುವ ಅನುಷಾ ಮತ್ತು ಅವರ ಗುಂಪಿನ ಮೇಲೆ ಮತ್ತು ನಿಜಾಂಶ ಗೊತ್ತಿದ್ದರೂ ಸಹ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನಮ್ಮ ಮೇಲೆ ಕೊಲೆ ಯತ್ನ ಕೇಸು ಹಾಕಿರುವ ಪೋಲಿಸ್ ಇನ್ಸ್‌ಪೆಕ್ಟರ್ ವಿರುದ್ಧ ಸಿ.ಓ.ಡಿ ಅಥವಾ ಸಿ.ಬಿ.ಐ ತನಿಕೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ
ಇಲ್ಲದಿದ್ದಲ್ಲಿ ಮುಂದೊಂದು ದಿನ ನಮ್ಮಂತಹ ಮುಗ್ಧ ಜನರು ಪ್ರಾಣವನ್ನು ಕಳೆದುಕೊಳ್ಳುವ ಪರಿಸ್ಥಿರಿ ಬಂದೊದಗುತ್ತದೆ ಹಾಗೂ ಸಮಾಜದಲ್ಲಿ ಮೋಸ ಮಾಡುವ ವ್ಯಕ್ತಿಗಳನ್ನು ಹುಟ್ಟಿಹಾಕಿದಂತಾಗುತ್ತದೆ. ತಾವು ದಯಮಾಡಿ ಈ ನನ್ನ ಅರ್ಜಿಯು ತಲುಪಿದ ತಕ್ಷಣವೇ ಕಾನೂನು ಕ್ರಮ ಕೈಗೊಂಡು ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕೇಸನ್ನು ದಾಖಲಿಸಿ ನಮಗೆ ಹಣವನ್ನು ವಾಪಾಸ್ಸು ಕೊಡಿಸಬೇಕಾಗಿ ಎಸ್ಪಿ ಕಛೇರಿ ಮುಂದೆ ಕೋರಿಕೊಂಡರು.
This is what karma returns mrs Jyothi 🤣🤣