ಹಾಸನ: ದೇವರಾಜೇಗೌಡ ಇವರು ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸುಖಸುಮನೆ ಸುಳ್ಳು ಹೇಳಿಕೆ ನೀಡಿರುವ ಬಗ್ಗೆ ಕ್ರಮಕೈಗೊಂಡು ತನಿಖೆ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ ಅವರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ ಹಾಗೂ ಪಕ್ಷದ ಮುಖಂಡರಾದ ಬನವಾಸೆ ರಂಗಸ್ವಾಮಿ ಮಾತನಾಡಿ, ಹಾಸನ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ರವರ ವಿರುದ್ಧ ಮತ್ತು ಶಾಸಕರಾದ ಹೆಚ್.ಡಿ. ರೇವಣ್ಣನವರ ವಿರುದ್ಧ ಪೆನ್‌ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ತನಿಖೆ ಮಾಡುವಂತೆ ಎಸ್.ಐ.ಟಿ, ಗೆ ರಾಜ್ಯ ಸರ್ಕಾರವು ವಹಿಸಿರುತ್ತದೆ.
ಈ ನಿಟ್ಟಿನಲ್ಲಿ ತನಿಖೆ ಸಹ ಪ್ರಾರಂಭವಾಗಿರುತ್ತದೆ. ಈ ಮಧ್ಯೆ ಪ್ರಜ್ವಲ್ ರೇವಣ್ಣನವರ ವಿರುದ್ಧ ಇದೇ ಪೆನ್ ಡ್ರೈವ್ ವಿಚಾರವಾಗಿ ಆರೋಪ ಮಾಡಿರುವ ಬಿ.ಜೆ.ಪಿ. ಮುಖಂಡರಾದ ವಕೀಲ ದೇವರಾಜೇಗೌಡ ಎಂಬುವವರ ವಿರುದ್ಧ ಸಹ ಅತ್ಯಾಚಾರದ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಆರೋಪಿ ದೇವರಾಜೇಗೌಡ ಇವರು ಈಗಾಗಲೇ ದಸ್ತಗಿರಿ ಆಗಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಈ ಮಧ್ಯೆ ನ್ಯಾಯಾಲಯದ ಆದೇಶದ ಮೇರೆಗೆ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆದಿರುತ್ತಾರೆ. ಮೂರು ದಿನಗಳ ಪೊಲೀಸ್ ಕಸ್ಟಡಿಯ ಅವಧಿ ಮುಗಿದ ಬಳಿಕ ಕಳೆದ ಮೂರು ದಿನಗಳ ಹಿಂದೆ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಲು ದೇವರಾಜೇಗೌಡ ಇವರನ್ನು ಕರೆ ತಂದ ವೇಳೆ ಪೊಲೀಸ್ ಕಸ್ಟಡಿಯಲ್ಲಿರುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರ ವಿರುದ್ಧ ಸುಳ್ಳು ಆರೋಪ ಮಾಡಿರುತ್ತಾರೆ ಎಂದು ದೂರಿದರು.
ಅಲ್ಲದೆ ೧೦೦ ಕೋಟಿ ಆಫರ್ ಕೊಟ್ಟಿದ್ದರು. ೫ ಕೋಟಿ ಅಡ್ವಾನ್ಸ್ ಆಗಿ ಕಳುಹಿಸಿದ್ದರು ಎಂದು ಮಾಡಿರುವ ಆರೋಪವು ಕೇವಲ ಕಲ್ಪಿತವಾದ ಮತ್ತು ಸೃಷ್ಟಿ ಮಾಡಿದ ಹೇಳಿಕೆಯಾಗಿರುತ್ತದೆ. ಈ ರೀತಿ ಹೇಳಿಕೆ ನೀಡಲು ಈ ವ್ಯಕ್ತಿಗೆ ಪ್ರೇರಣೆ ನೀಡಿದವರು ಅಥವಾ ಆತನ ಬೆನ್ನಿಗೆ ನಿಂತು ಬೆಂಬಲ ನೀಡುತ್ತಿರುವ ವ್ಯಕ್ತಿ ಯಾರು? ಇದರಲ್ಲಿ ಯಾರ ಕೈವಾಡ ಇದೆ ಎಂಬ ಬಗ್ಗೆ ಸತ್ಯಾಸತ್ಯತೆ ತಿಳಿಯಬೇಕಾಗಿರುತ್ತದೆ ಎಂದರು.
ಅಲ್ಲದೆ ಇನ್ನು ಹಲವು ಆರೋಪಗಳನ್ನು ಸಹ ಸುಖಾ ಸುಮ್ಮನೆ ಮಾಡಿರುತ್ತಾರೆ. ಇವರು ಈ ರೀತಿ ಹೇಳಿಕೆ ನೀಡಲು ಪ್ರೇರಣೆ ನೀಡಿದವರು ಯಾರೆಂದು ಗೊತ್ತಾಗಬೇಕಾಗಿದೆ. ಜೈಲಿನಲ್ಲಿದ್ದ ಕಾಲಕ್ಕೆ ಮತ್ತು ಪೊಲೀಸ್ ಕಸ್ಟಡಿಯಲ್ಲಿದ್ದ ಕಾಲಕ್ಕೆ ದೇವರಾಜೇಗೌಡರನ್ನು ಯಾರು ಯಾರು ಭೇಟಿ ಮಾಡಿರುತ್ತಾರೆ. ಅವರಿಗೆ ಕುಮ್ಮಕ್ಕು ನೀಡುತ್ತಿರುವ ಪ್ರಭಾವಿ ವ್ಯಕ್ತಿಗಳು ಯಾರು, ಯಾವ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂಬ ಬಗ್ಗೆ ಕೂಲಂಕುಶವಾಗಿ ತನಿಖೆ ಕೈಗೊಂಡು ನಿಜಾಂಶವನ್ನು ತಿಳಿಯಬೇಕಾಗಿ ಮನವಿ ಮಾಡಿದರು.
ಒಂದೊಂದು ಕಾಲಕ್ಕೆ ಒಂದೊಂದು ರೀತಿಯ ಸುಳ್ಳು ಹೇಳಿಕೆಗಳನ್ನು ಹೇಳುವ ಮೂಲಕ ತನಿಖೆಯನ್ನು ದಿಕ್ಕು ತಪ್ಪಿಸುತ್ತಿರುವ ಈ ವ್ಯಕ್ತಿಯನ್ನು ಕ್ರೈಸ್ ಮ್ಯಾಪಿಂಗ್ ಮಾಡುವ ಮೂಲಕ ಸತ್ಯಾಂಶವನ್ನು ತಿಳಿಯುವಂತೆ ತನಿಖೆ ಮಾಡಬೇಕಾಗಿ ಕೋರಿಕೆ.
ಅಲ್ಲದೆ ಪೊಲೀಸ್ ಕಸ್ಟಡಿಯಲ್ಲಿದ್ದ ಕಾಲಕ್ಕೆ ಮಾಧ್ಯಮಗಳಿಗೆ ಹೇಳಿಕೆ ನೀಡಲು ಅನುವು ಮಾಡಿಕೊಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ಕೂಡ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ಕೋರಿದರು.
ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ರಂಗಸ್ವಾಮಿ ಬನವಾಸೆ, ಗೊರೂರು ರಂಜಿತ್, ರಘು, ಚಂದ್ರಶೇಖರ್, ಶಿವಕುಮಾರ್, ಅಶು ಆಸೀಪ್, ಸುಜೀತ್ ನಾರಾಯಣ್, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
I was examining some of your posts on this internet site and I
believe this website is rattling informative! Continue posting.Blog monry