ಬೇಲೂರು : ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗುತ್ತಿದ್ದು ದುರಂತಗಳ ಸರಮಾಲೆಗಳು ವರದಿಯಾಗುತ್ತಿದ್ದು ಶುಕ್ರವಾರ ಸುರಿದ ಬಾರಿ ಮಳೆಗೆ ಇಂದು ಬೆಳಗಿನ ಜಾವ ಮನೆ ಹಾಗೂ ಕೊಟ್ಟಿಗೆ ನೆಲಕ್ಕುರುಳಿದ್ದು ಹಸುಗಳು ದಾರೂಣ ಸಾವನ್ನಪ್ಪಿವೆ.

ಬೇಲೂರು ತಾಲ್ಲೂಕು ಮಾದೀಹಳ್ಳಿ ಹೋಬಳಿ ಸಂಕೇನಹಳ್ಳಿ ಗ್ರಾಮದ ದ್ಯಾವಮ್ಮ ಭದ್ರ ಶೆಟ್ಟಿ ಮತ್ತು ಇದೇ ಗ್ರಾಮದ ರತ್ನಮ್ಮ ಎಂಬುವರ ಮನೆ ಶನಿವಾರ ಮುಂಜಾನೆ ಇದ್ದಕ್ಕಿದ್ದಂತೆ ನೆಲಕ್ಕುರಳಿದೆ ಮನೆಗೆ ಹೊಂದಿಕೊಂಡಂತಿದ್ದ ಕೊಟ್ಟಿಗೆಲ್ಲಿ ಮಲಗಿದ್ದ ಮೂರು ಹಸುಗಳು ದಾರೂಣ ಸಾವನ್ನಪ್ಪಿವೆ.

ಅಣ್ಣಪ್ಪ‌ಶೆಟ್ಟಿ ತಾಯಿ ದ್ಯಾವಮ್ಮ ಹಾಗೂ ಪತ್ನಿ ರತ್ನಮ್ಮ ರೊಂದಿಗೆ ಮನೆಯ ಮುಂಭಾಗದ ಹಾಲಿನಲ್ಲಿ ಮಲಗಿದ್ದರಿಂದ ಪ್ರಣಾಪಾಯದಿಂದ ಪಾರಾಗಿದ್ದಾರೆ.

ಕೂಲಿ ಕೆಲಸ ಮಾಡುವ ಇವರು ಹೈನುಗಾರಿಕೆಯನ್ನೆ ಉದ್ಯೋಗವನ್ನಾಗಿ ಮಾಡಿಕೊಂಡು ಜೀವನ ನೆಡೆಸಿತ್ತಿದ್ದರು ಮಳೆ ಕಾರಣದಿಂದ ಮಕ್ಕಳು ಊರಿನಲ್ಲೆ ಸಂಬಂದಿಕರ ಮನೆಯಲ್ಲಿ ಮಲಗಿದ್ದರು, ಮನೆಯಲ್ಲಿದ್ದ ಟಿ.ವಿ. ಸೇರಿದಂತೆ ದವಸ ದಾನ್ಯಗಳು ಮಣ್ಣುಪಾಲಾಗಿವೆ.

ಮನೆ ಗೋಡೆ ನೆಲಕ್ಕುರುಳಿದ ಬರಸಕ್ಕೆ ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳು ಸಹ ಸ್ಥಳದಲ್ಲೆ ಸಾವನ್ನಪ್ಪಿದ್ದು ಮರಣ ಹೊಂದಿದ ತನ್ನ ಮಕ್ಕಳಂತೆ ಸಾಕಿದ್ದ ಹಸುಗಳನ್ನು ಕಂಡು ದುಃಖಿಸುತ್ತಿರುವ ರತ್ನಮ್ಮ ನವರ ಗೋಳು ಹೇಳತೀರದಾಗಿದೆ.

ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಬೇಲೂರು ತಾಲೂಕು ತಹಶೀಲ್ದಾರ್ ಎಂ ಮಮತಾ ಇತರ ದಿನಗಳಲ್ಲಿ ಅತಿ ಹೆಚ್ಚಾಗಿ ಮಳೆ ಬರುತ್ತಿರುವ ಕಾರಣ ಹಲವಾರು ಮನೆಗಳು ಮತ್ತು ಕೆಲವು ವಸ್ತುಗಳು ಮಳೆ ಆಗುತ್ತಿದೆ ಇಂತಹ ಒಂದು ಕುಟುಂಬ ಹೈನುಗಾರಿಕೆಯನ್ನು ನಂಬಿಕೊಂಡು ಬದುಕುತ್ತಿದ್ದು ಆ ಕುಟುಂಬಕ್ಕೆ ಇದ್ದಂತಹ ಮೂರು ರಾಶಿಗಳು ನಿಜಕ್ಕೂ ಬೇಸರ ಸಂಗತಿ ಕೂಡಲೇ ಇದರ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡುವ ಮೂಲಕ ಪರಿಹಾರವನ್ನು ನೀಡಲು ಮುಂದಾಗುತ್ತೇವೆ ಎಂದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

2 thoughts on “ಬೇಲೂರು : ಮಳೆಗೆ ಮನೆ ಬಿದ್ದು ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳ ದುರ್ಮರಣ”

Leave a Reply

Your email address will not be published. Required fields are marked *