ಹಾಸನ: ಅರೆ ಮಿಲಿಟರಿ ಪಡೆಗಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೇವೆ ಮಾಡುವಾಗ ತ್ಯಾಗ ಬಲಿದಾನಗಳು ಪ್ರತಿನಿತ್ಯ ಆಗುತ್ತಿದ್ದರೂ ನಿವೃತ್ತ ಸೈನಿಕರಿಗೆ ಸಿಗುತ್ತಿರುವ ಸೌಲಭ್ಯಗಳಲ್ಲಿ ಒಂದು ಸಣ್ಣ ಭಾಗವು ಸಿ.ಆರ್.ಪಿ..ಎಫ್. ಪಡೆಗಳಿಗೆ ಸಿಗದೇ ಇರುವುದು ಶೋಚನಿಯ ಸಂಗತಿಯಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ನಿವೃತ್ತ ಮಹಾನಿರೀಕ್ಷಕರಾದ ಹಾಗೂ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ. ಆರ್ಕೇಶ್ ಬೇಸರವ್ಯಕ್ತಪಡಿಸಿದರು.

ನಗರದ ಹೊರವಲಯ ಕೆಂಚಟ್ಟಹಳ್ಳಿಯ ದೊಡ್ಡಗೇಣಿಗೆರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಭವನದಲ್ಲಿ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ..ಎಫ್.)ನ ೮೫ನೇ ಸ್ಥಾಪನಾ ದಿನಾಚರಣೆಯಲ್ಲಿ ಮೊದಲು ಪೊಲೀಸ್ ಧ್ವಜಾ ರೋಹಣ ನೆರವೇರಿಸಿ ನಂತರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬ್ರಿಟಿಷ್ ಕಾಲದಲ್ಲಿ ಆರಂಭವಾದ ಇಂಡಿಯಾ ಪೊಲೀಸ್ ಪಡೆ ಇಂದು ಬೃಹತಕಾರವಾಗಿ ಬೆಳೆದಿದೆ. ಸ್ವತಂತ್ರ ಭಾರತದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿ ದೇಶದ ಪ್ರಗತಿಯಲ್ಲಿ ಸಹಕಾರ ನೀಡುತ್ತಿದೆ. ಯುದ್ಧ ಕಾಲದಲ್ಲಿ ಸೈನಿಕರ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಮ್ಮ ಯೋಧರು ದುಡಿದಿದ್ದಾರೆ.

ಶಾಂತಿ ಕಾಲದಲ್ಲಿ ವಿದೃಹ ಟೆರರಿಸಂ, ನೆಕ್ಸಲಿಸಂ, ಕಮ್ಯೂನಿಯಲ್‌ವೈಲೆಂಟ್, ನ್ಯಾಚುರಲ್ ಡಿಸಾಸ್ಕರ್ ಇಂತಹ ವೇಳೆ ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮಹತ್ವಪೂರ್ಣವಾದ ಪಾತ್ರವಹಿಸಿದೆ.

ಸಿ.ಆರ್.ಪಿ..ಎಫ್. ಇಲ್ಲದೆ ಇದ್ದರೇ ದೇಶದ ಚುನಾವಣೆಯನ್ನು ನಡೆಸಲು ಸಾಧ್ಯ ಇಲ್ಲವೇನೋ ಮಟ್ಟಕ್ಕೆ ಕಾರ್ಯನಿರ್ವಹಿಸುತ್ತಿದೆ ಎಂದರು.

೩.೫ ಲಕ್ಷ ಸಂಖ್ಯೆ ಇರುವ ಸಿ.ಆರ್.ಪಿ..ಎಫ್. ಮತ್ತು ಅದರ ಸಹೋಧರ ಸಂಸ್ಥೆಯಾದ ಅಸ್ಸಾಂ ರೇಫಲ್ಸ್, ಬಿ.ಎಸ್.ಎಫ್. ಸಿಎ.ಎಸ್.ಎಫ್. ಎಸ್.ಎಸ್.ಬಿ. ಸೇರಿದಂತೆ ಇತರೆ ಸಂಸ್ಥೆಗಳು ಸುಮಾರು ೧೦ ಲಕ್ಷ ಜನರನ್ನು ಒಳಗೊಂಡು ದೇಶದ ಮೂಲೆ ಮೂಲೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಸೈನಿಕರು ಎಂದರೇ ಆರ್ಮಿ, ಏರ್ಪೋರ‍್ಸ್ ಎಂದುಕೊಂಡಿದ್ದಾರೆ. ಆರ್ಮಿ ಸೈನಿಕರ ಸಂಖ್ಯೆ ೧೫ ಲಕ್ಷದ ಬಲವಿದ್ದರೇ, ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳಲ್ಲಿ ಅಥವ ಅರೆ ಮಿಲಿಟರಿ ಪಡೆಗಳಲ್ಲಿ ಅವರ ಸಂಖ್ಯೆ ಸುಮಾರು ೧೦ ಲಕ್ಷ ಸಂಖ್ಯೆ ಇದೆ ಎಂದು ಕಿವಿಮಾತು ಹೇಳಿದರು.

ಇವರ ತ್ಯಾಗ ಬಲಿದಾನಗಳು ದಿನನಿತ್ಯ ಆಗುತ್ತಿದೆ. ಪ್ರತಿ ಮೂರು ದಿನಕ್ಕೆ ಒಬ್ಬ ಅರೆ ಮಿಲಿಟರಿ ಪೊಲೀಸ್ ಪಡೆಗಳು ಹುತಾತ್ಮರು ಆಗುತ್ತಿದ್ದಾರೆ ಎಂದು ಆತಂಕವ್ಯಕ್ತಪಡಿಸಿದರು. ಸೈನಿಕರಿಗೆ ಸಿಗುತ್ತಿರುವ ಸೌಲಭ್ಯಗಳಲ್ಲಿ ಒಂದು ಸಣ್ಣ ಭಾಗವು ಸಿ.ಆರ್.ಪಿ..ಎಫ್.ಗೆ ಸಿಗದೆ ಇರುವುದು ಬಹಳ ಶೋಚನಿಯವಾದ ವಿಷಯ. ಎಲ್ಲಾ ರಾಜಕೀಯ ಪಕ್ಷಗಳು ಈ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಅವರಿಗೆ ಮೂಲಭೂತವಾಗಿ ಸಿಕ್ಕ ಬೇಕಾಗಿರುವ ಪೆನ್ಷನ್ ಸಿಗುತ್ತಿಲ್ಲ. ಅವರನ್ನು ಸಿವಿಎಲ್ ಎಂಪ್ಲಾಯಿಸ್ ಎನ್ನುವ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಅಸಮಧಾನವ್ಯಕ್ತಪಡಿಸಿದರು.

ಅರೆ ಮಿಲ್ಟ್ರಿ ಸೈನಿಕ್ ಬೋರ್ಡ್‌ನ್ನು ಘಟಿಸಿ ಪ್ರತಿ ರಾಜ್ಯದಲ್ಲೂ ಅವರ ಸೈನಿಕರಿಗೆ ಸಲ್ಲಬೇಕಾಗಿರುವ ಸೌಲಭ್ಯ, ನಿವೃತ್ತಿ ನಂತರ ಸಲ್ಲಬೇಕಾಗಿರುವ ಸೌಲಭ್ಯಗಳನ್ನು ಸರಕಾರವು ಕಲ್ಪಸಿಕೊಡಬೇಕು ಎಂದು ನಾನು ಆಗ್ರಹಪಡಿಸುತ್ತೇನೆ ಎಂದು ಹೇಳಿದರು.

ಬಿ.ಎಸ್.ಎಫ್. ನಿವೃತ್ತ ಯೋಧ ಎಂ.ಜಿ. ರಮೇಶ್ ಮಾತನಾಡಿ, ನಮ್ಮದು ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘವಿದ್ದು, ನಮಗೆ ಸಿಗಬೇಕಾದ ಸೌಲಭ್ಯಗಳು ಸರಕಾರದಿಂದ ಯಾವುದು ಸಿಗುತ್ತಿಲ್ಲ ಎಂದು ಬಹಳ ವರ್ಷಗಳಿಂದಲೂ ಹೋರಾಟ ಮಾಡಲಾಗುತ್ತಿದ್ದು, ಕೇಂದ್ರ ಸರಕಾರವು ಸೌಲಭ್ಯ ಕೊಡಿ ಎಂದು ಆದೇಶ ಮಾಡಿದ್ದರೂ ಸಹ ಇದುವರೆಗೂ ಯಾವುದೇ ಸೌಲಭ್ಯ ನೀಡಿರುವುದಿಲ್ಲ. ಹಿಂದೆ ಇದೆ ಕಾಂಗ್ರೆಸ್ ಸರಕಾರ ಇದ್ದಾಗ ಸಿದ್ದರಾಮಯ್ಯ ಅವರು ಸೇನಾ ಮತ್ತು ಅರೆಸೇನಾ ಪಡೆಯ ಕಲ್ಯಾಣ ಬೋರ್ಡ್ ಮಾಡಿದ್ದರು. ಇದನ್ನು ಕೂಡ ಮುಂದೆ ಬಂದಂತಹ ಮುಖ್ಯಮಂತ್ರಿಗಳು ಅದನ್ನು ರದ್ದು ಮಾಡಿದರು. ಇದಕ್ಕೆ ಕಾರಣ ಗೊತ್ತಾಗಲಿಲ್ಲ ಎಂದರು.

ಕೇಂದ್ರದ ಆದೇಶದಂತೆ ಸರಕಾರವು ಆರ್ಮಿಯವರಿಗೆ ಯಾವ ಸೌಲಭ್ಯ ಕೊಡುತ್ತಿದ್ದೀರಿ,

ಈ ಬಗ್ಗೆ ಹೈಕೋರ್ಟ್‌ನಲ್ಲಿಯೂ ಸಹ ಆದೇಶವಾಗಿದೆ. ಅದನ್ನು ಕೂಡ ಇದುವರೆಗೂ ಡಿಪಿ.ಆರ್. ಸಂಸ್ಥೆಯ ನಿರ್ದೇಶನಾಲಯದವರು ಇಲ್ಲಿವರೆಗೂ ಕೂಡ ಅದನ್ನು ಜಾರಿ ಮಾಡಿರುವುದಿಲ್ಲ.

ನಿವೃತ್ತರಾದ ಮೇಲೆ ಆರ್ಮಿಯವರಿಗೆ ರಾಜ್ಯ ಸರಕಾರವು ಹೇಗೆ ಕೆಲಸ ಕೊಡುತ್ತಾರೆ ಜೊತೆಗೆ ಯಾವ ರೀತಿ ಸೌಲಭ್ಯಗಳು ಸಿಗುತ್ತದೆ ಅದೆ ರೀತಿ ಸಿ.ಆರ್.ಪಿ..ಎಫ್. ನಿವೃತ್ತ ಯೋಧರಿಗೆ ಯಾವ ಸೌಲಭ್ಯ ದೊರಕುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ದಯಮಾಡಿ ಅರೆಸೇನಾಪಡೆ ಮತ್ತು ಸೇನಾಪಡೆಯ ಒಂದು ಕಲ್ಯಾಣ ವಸತಿ ಮತ್ತು ಪುನರ್ ವಸತಿ ಕಲ್ಯಾಣ ಕೇಂದ್ರ ಮಾಡಬೇಕು. ಹೆಂಡತಿ ಮಕ್ಕಳು ಬಿಟ್ಟುನಮ್ಮಲ್ಲಿ ನಿವೃತ್ತ ಹೊಂದಿ ೨೦ ರಿಂದ ೩೫ ವರ್ಷದವರೆಗೂ ದೇಶ ಸೇವೆ ಮಾಡಿ ಜೀವ ಉಳಿಸಿಕೊಂಡು ವಾಪಸ್ ಬರುತ್ತಾರೆ. ಅಂತವರಿಗೆ ಆರ್ಮಿ ರೀತಿಯಲ್ಲೆ ನೌಕರಿ ಕೊಡುವ ಕಾರ್ಯ ಆಗಬೇಕು ಎಂದು ಒತ್ತಾಯಿಸಿದರು.

ಆರ್ಮಿ ಜೊತೆ ಸೇರಿ ನಮಗೂ ಕೂಡ ಒಂದು ಕಲ್ಯಾಣ ಕೇಂದ್ರ ಮಾಡಿ ಅನುಕೂಲ ಮಾಡಿಕೊಡಬೇಕು ಎಂಬುದು ಸರಕಾರಕ್ಕೆ ನಮ್ಮ ಮನವಿ ಆಗಿದೆ ಎಂದು ಹೇಳಿದರು.

ಇದೆ ವೇಳೆ ಸಿ.ಐ.ಎಸ್.ಎಫ್. ಯೂನಿಟ್, ಎಂಸಿ.ಎಫ್. ಡೆಪ್ಯೂಟಿ ಕಮಾಂಡೆಂಟ್ ಅಭಯ ಆನಂದ್ ಪಾಟೀಲ್, ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಪಿ.ಎನ್. ರೆಡ್ಡಿ, ಕಾರ್ಯದರ್ಶಿ ಟಿ.ವಿ. ಗೋಪಾಲ್, ಸಿ.ಐ.ಎಸ್.ಎಫ್. ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಶಿವರಾಮ್, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ವಿ. ನಾಗೇಶ್, ಅಧ್ಯಕ್ಷ ಯಶೋಧರಮೂರ್ತಿ, ಯೋಧರ ಸಮೂಹದ ಅಧ್ಯಕ್ಷ ಹೆಚ್. ಕುಮಾರ್, ಶೇಕ್ ನವಾಬ್, ಚೆಲುವೇಗೌಡ, ಹನುಮಂತಪ್ಪ, ಲಿಂಗೇಗೌಡ, ನಾಗಪ್ಪ, ಕೆ.ಬಿ. ಸುರೇಶ್, ನಂದಕುಮಾರ್, ಕಲ್ಪನಾ ಸುರೇಶ್, ಪರಮೇಶ್, ದಿನೇಶ್, ರಾಜನಾಯಕ್, ಬಂಗಾರಿ, ವಸಂತಕುಮಾರ್, ತಾಂಡೇಶ್ವರ್ ಇತರರು ಉಪಸ್ಥಿತರಿದ್ದರು. ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ಪೂರ್ಣೀಮ ನಿರೂಪಿಸಿದರು. ಭಾನುಮತಿ ಪ್ರಾರ್ಥಿಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *