ಹಾಸನ: ಅತ್ಯಚಾರ ಪ್ರಕರಣದ ವಿಚಾರವಾಗಿ ಬಂಧಿಸಲಾಗಿದ್ದ ವಕೀಲರು ಹಾಗೂ ಬಿಜೆಪಿ ಮುಖಂಡರಾದ ಜಿ. ದೇವರಾಜೇಗೌಡರನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮಂಗಳವಾರದಂದು ಬೆಳಿಗ್ಗೆ ಹಾಸನ ಜಿಲ್ಲಾ ಬಂದಿಖಾನೆಯಿಂದ ಕರೆದೊಯ್ದರು.

ಅತ್ಯಚಾರ ಪ್ರಕರಣದ ಪ್ರಜ್ವಲ್ ರೇವಣ್ಣ ವಿಚಾರವಾಗಿ ಈಗಾಗಲೇ ವಿಚಾರಣೆ ನಡೆಸಲು ಸಂಬಂಧಪಟ್ಟ ಅನೇಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಮೇ ೧೧ ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸ್ಥಳದಲ್ಲಿ ದೇವರಾಜೇಗೌಡ ಅವರನ್ನು ಬಂಧನ ಮಾಡಲಾಗಿತ್ತು.

ಮೇ.೧೨ ರಂದು ವಿಚಾರಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ೧೪ ದಿನಗಳ ಕಾಲ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ಕಳೆದ ಒಂದು ದಿನಗಳ ಹಿಂದೆ ಹೆಚ್ಚಿನ ವಿಚಾರಣೆಗೆ ತಮ್ಮ ಕಸ್ಟಡಿಗೆ ದೇವರಾಜೇಗೌಡ ಅವರನ್ನು ಒಪ್ಪಿಸುವಂತೆ ಪೊಲೀಸರು ನ್ಯಾಯಾಲಯದ ಮುಂದೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯ ಆದೇಶ ಹೊರಡಿಸಿದೆ.

ಹೊಳೆನರಸೀಪುರ ಡಿವೈಎಸ್‌ಪಿ ಅಶೋಕ್ ಅವರು ಜಿಲ್ಲಾ ಕಾರಾಗೃಹದಿಂದ ಕರೆದೊಯ್ದರು. ಪೊಲೀಸರು ತಮ್ಮ ಪೊಲೀಸ್ ವಾಹನಕ್ಕೆ ಕರೆದುಕೊಂಡು ಹೋಗುವಾಗ ಅವರ ಪ್ರೊಸಿಜರ್ ಅವರು ಮಾಡ್ತಾರೆ ಬಿಡ್ರಪ್ಪ ಎಂದು ಅತ್ಯಾಚಾರ ಆರೋಪಿ ದೇವರಾಜೇಗೌಡರು ಹೇಳುತ್ತಿರುವುದು ಕೇಳಿ ಬಂದಿತು.

ಲೈಂಗಿಕ ದೌರ್ಜನ್ಯ ವಿಚಾರವಾಗಿ ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಸಂತ್ರಸ್ತೆಯರು ಕೇಸು ದಾಖಲಿಸಿದ್ದಾರೆ. ಆದರೇ ಸಂಸದರು ಹೊರ ದೇಶದಿಂದ ಇನ್ನು ವಾಪಸ್ ಭಾರತಕ್ಕೆ ಬಂದಿರುವುದಿಲ್ಲ.

ಸಂಸದರ ತಂದೆ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಮಹಿಳೆ ಕಿಡ್ನಪ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು, ಈಗ ಷರತ್ತು ಬದ್ಧ ಜಾಮೀನು ನೀಡಿ ಹೊರ ಬಂದಿದ್ದಾರೆ.

ಪೆನ್ ಡ್ರೈವ್ ವಿಚಾರದಲ್ಲಿ ಇಬ್ಬರೂ ಬಿಜೆಪಿ ಕಾರ್ಯಕರ್ತರನ್ನು ಕೂಡ ಅರೆಸ್ಟ್ ಮಾಡಲಾಗಿದೆ.

ಈ ವಿಚಾರದಲ್ಲಿ ಎಸ್.ಐ.ಟಿ. ತಂಡ ಹಾಗೂ ಎಫ್.ಎಸ್.ಎಲ್. ತಂಡವು ಕೂಡ ತೀವ್ರ ತನಿಖೆಯಲ್ಲಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

One thought on “ಹಾಸನ : ವಿಚಾರಣೆಗಾಗಿ ಆರೋಪಿ ಜಿ. ದೇವರಾಜೇಗೌಡ ಜೈಲಿನಿಂದ ಪೊಲೀಸ್ ವಶಕ್ಕೆ”
  1. hello there and thank you for your info – I have certainly picked up anything new
    from right here. I did however expertise a few technical issues using this website, since I experienced to reload the web site many times
    previous to I could get it to load correctly. I had been wondering if your web hosting is OK?

    Not that I’m complaining, but sluggish loading instances times
    will very frequently affect your placement in google and could damage your quality
    score if ads and marketing with Adwords. Well I’m adding this
    RSS to my e-mail and can look out for a lot more of your respective fascinating content.
    Ensure that you update this again very soon.. Lista escape room

Leave a Reply

Your email address will not be published. Required fields are marked *