ಸಕಲೇಶಪುರ : ಬೆಳಗ್ಗೆ 8 ಗಂಟೆ ಸುಮಾರಿಗೆ ನಾರ್ವೆ ಭಾಗದಿಂದ ಸುಂಡೆಕೆರೆ ಗ್ರಾಮದ ಕಡೆಗೆ Ashok Leyland KA13D2327 ವಾಹನವೊಂದು ಕಪ್ಪು ಬಣ್ಣದ ಟಾರ್ಪಲ್ ಹಾಕಿ ಸಂಪೂರ್ಣ ಮುಚ್ಚಿದ ಸ್ಥಿತಿಯಲ್ಲಿ ಬಂದಿದೆ.

ಅಲ್ಲಿನ ಗ್ರಾಮಸ್ಥರು ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಬಜರಂಗದಳ ಕಾರ್ಯಕರ್ತರು ಪೋಲಿಸರ ಸಹಯೋಗದಲ್ಲಿ ಉದೇವಾರ ಸಮೀಪ ವಾಹನವನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಟಾರ್ಪಲ್ ಬಿಚ್ಚಿ ನೋಡಿದಾಗ KA 13 D 2327 Ashoka Leyland ವಾಹನದಲ್ಲಿ 5 ಜಾನುವಾರುಗಳ ಹಿಂಸಾತ್ಮಕವಾಗಿ ತುಂಬಿದ್ದು ಕಂಡುಬಂದಿದೆ‌.

ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಗೋವುಗಳನ್ನು ತುಂಬಿದ್ದ ವಾಹನ ಸಮೇತ ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಅಕ್ರಮವಾಗಿ ತುಂಬಿರುವುದು ಖಚಿತವಾಗುತ್ತಿದ್ದಂತೆ ತನಿಖೆ ನಡೆಸಿ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿಪ್ಪಾರಡ್ಡಿ ಅವರು ಪ್ರಕರಣ ದಾಖಲಿಸಿ ಗೋವುಗಳನ್ನು ಗೋಶಾಲೆಗೆ ಬಿಡಲಾಗುವುದು ಎಂದು ಪೋಲಿಸ್ ಮೂಲಗಳು ತಿಳಿಸಿವೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *