ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ. ಸಕಲೇಶಪುರ

ಗೌರವಾನ್ವಿತ ಷೇರುದಾರರೇ,

ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು 1949 ರಲ್ಲಿ ಸ್ಥಾಪನೆಗೊಂಡು 74 ವರ್ಷಗಳಿಂದ ಇಲ್ಲಿನ ಸ್ಥಳೀಯ ರೈತ/ಬೆಳೆಗಾರರಿಗೆ ಸೌಲಭ್ಯಗಳನ್ನು ಒದಗಿಸುತ್ತಾ ಯಶಸ್ಸಿನಿಂದ ಮುನ್ನಡೆಯುತ್ತಿದೆ.

2019-21 ರ ವರೆಗೆ ನನಗೆ ಸಂಘದ ನಿರ್ದೇಶಕ, ಅಧ್ಯಕ್ಷನಾಗಿ ಸೇವೆಸಲ್ಲಿಸುವ ಸುವರ್ಣವಕಾಶ ಲಭಿಸಿ, ಈ 3 ವರ್ಷದ ಅವಧಿಯಲ್ಲಿ ಸಹಕಾರ ಸಂಘದ ಹಾಗೂ ರೈತರ ಅಭಿವೃದ್ಧಿ ಪರವಾಗಿ ನಾವುಗಳು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕೆಲ ತುಣುಕುಗಳನ್ನು ತಮ್ಮ ಮುಂದಿಡಬಯಸುತ್ತೇನೆ.

ರಾಜ್ಯ ಮಾನ್ಯ ಶಾಸಕರಾದಂತಹ ಹೆಚ್.ಕೆ ಜೆ.ಡಿ.ಎಸ್ ರಾಜ್ಯಾಧ್ಯಕ್ಷರಾದ ಸಕಲೇಶಪುರದ ಕುಮಾರಸ್ವಾಮಿಯವರನ್ನು ಸಂಘದ ವತಿಯಿಂದ ಹೃತ್ತೂರ್ವಕವಾಗಿ ಅಭಿನಂದಿಸಲಾಯಿತು.

ವ್ಯಾಪಾರ ವಹಿವಾಟಿನ ಜೊತೆಗೆ ಸಮಾಜಮುಖಿ ಕೆಲಸಗಳಿಗೂ ತೊಡಗಿಸಿಕೊಂಡು, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ನೀಡುವ ಸಲುವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.

ಕೊರೋನಾ ಮಹಾಮಾರಿಯು ದೇಶಾದ್ಯಂತ ವ್ಯಾಪಿಸಿದ ಸಂದರ್ಭದಲ್ಲಿ ಉಂಟಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಭಾಗದ ರೈತರ ನೆರವಿಗೆ ದಾವಿಸಿ, ರೈತರು ಬೆಳೆದ ತರಕಾರಿ-ಕಾಯಿಪಲ್ಯಗಳನ್ನು ಟಿ.ಎ.ಪಿ.ಸಿ.ಎಂ.ಎಸ್ ನ ವತಿಯಿಂದ ಖರೀದಿಸಿ, ಉತ್ತಮ ಬೆಲೆ ನೀಡಿ, ರೈತರಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ತಗ್ಗಿಸಲಾಯಿತು. ಜೊತೆಗೆ ಸಾರ್ವಜನಿಕರಿಗೆ ತರಕಾರಿಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟಮಾಡಿ ಅನುಕೂಲ ಮಾಡಲಾಯಿತು.

ಕೋವಿಡ್ ನ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿಯರ ನೆರವಿಗೆ ದಾವಿಸಿ ಸಹಕಾರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಿ ಅನುಕೂಲ ಮಾಡಿಕೊಡಲಾಯಿತು.

ನಮ್ಮ ಕಾರ್ಯಕಾರಿ ಮಂಡಳಿಯ ಸೇವಾವಧಿಯಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ರಾಜಮುಡಿ ತಳಿ ಭತ್ತದ ಭಿತ್ತನೆ ಬೀಜವನ್ನು ತರಿಸಿ ರೈತರಿಗೆ ನೀಡಲಾಯಿತು. ಸತತ 3 ವರ್ಷವೂ ಇದರಿಂದ ಲಾಭ ಗಳಿಸುವಲ್ಲಿ ಹೆಚ್ಚಿನ ಕೆಲಸ ಮಾಡಲಾಯಿತು.

ಸಹಕಾರ ಸಂಘಕ್ಕೆ ಸೇರಿದ ಸಕಲೇಶಪುರದ ಎಸ್.ಪಿ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳಲ್ಲಿನ ಬಾಡಿಗೆದಾರರಿಗೆ ಅನುಕೂಲವಾಗಲೆಂಬಂತೆ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಯಿತು.

ಸಹಕಾರ ಸಂಘದ ವ್ಯಾಪಾರ-ವಹಿವಾಟುಗಳು ಸಕಲೇಶಪುರದ ಎಸ್.ಪಿ ರಸ್ತೆಯಲ್ಲಿದ್ದ ಸಂಘದ ಮಳಿಗೆಗಳಲ್ಲಿ ನೆಡೆಯುತ್ತಿದ್ದು, ಪಾರ್ಕಿಂಗ್ ಇನ್ನಿತರ ವ್ಯವಸ್ಥೆಗಳಿಗೆ ತೊಂದರೆಯಾಗುತ್ತಿದ್ದ ಕಾರಣ ರೈತರ ಹಿತದೃಷ್ಟಿಗಾಗಿ ಹಾಗೂ ವ್ಯಾಪಾರ-ವ್ಯವಹಾರಗಳನ್ನು ವೃತ್ತಿ ಮಾಡುವ ಉದ್ದೇಶದಿಂದ ಸಹಕಾರ ಸಂಘಕ್ಕೆ ಸೇರಿದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಇರುವ ಗೋದಾಮಿಗೆ ಸಂಪೂರ್ಣ ವ್ಯಾಪಾರ-ವಹಿವಾಟನ್ನು ಸ್ಥಳಾಂತರಗೊಳಿಸಲಾಯಿತು. ಈ ಹಿಂದೆ ಜೆ.ಎಸ್.ಎಸ್ ಶಾಲೆ ನಡೆಸಲು ಗೋದಾಮಿನ ಮಳಿಗೆಗಳನ್ನು ನೀಡಲಾಗಿತ್ತು. ರೈತರ ಅನುಕೂಲತೆಗೆ ಆದ್ಯತೆ ನೀಡಿ ಹಾಗೂ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲೆಂಬಂತೆ ರೈತಭವನ ನಿರ್ಮಿಸುವ ದೈಯೋದ್ದೇಶ ಹೊಂದಿ ಎಸ್.ಪಿ ರಸ್ತೆಯಲ್ಲಿದ್ದ ಸಂಘದ ಮಳಿಗೆಗಳಲ್ಲಿ ನೆಡೆಯುತ್ತಿದ್ದ ವ್ಯಾಪಾರ-ವಹಿವಾಟುಗಳನ್ನು ಸ್ಥಳಾಂತರಗೊಳಿಸಲಾಯಿತು.

ನವೀಕರಿಸಿದ ಕಟ್ಟಡವನ್ನು ಉದ್ಘಾಟನೆಗೊಳಿಸುವ ಮತ್ತು ಸಂಘದ ವಾರ್ಷಿ ಮಹಾಸಭೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಗೋಪಾಲಯ್ಯರವರನ್ನು ಹಾಗೂ ಸಕಲೇಶಪುರ ಟಿ.ಎ.ಪಿ.ಸಿ.ಎಂ.ಎಸ್. ಗೆ ನಿವೇಶನ ದೊರಕಿಸಿಕೊಟ್ಟ ಸಕಲೇಶಪುರ ಟಿ.ಎ.ಪಿ.ಸಿ.ಎಂ.ಎಸ್‌. ನ ಮಾಜಿ ಅಧ್ಯಕ್ಷರಾದ ಸಕಲೇಶಪುರ ತಾಲ್ಲೂಕು ದೇವಲದಕೆರೆ ಗ್ರಾಮದ ಶ್ರೀಯುತ ಡಿ.ನಂಜೇಗೌಡರವರ ಪುತ್ರ ಶ್ರೀ ಡಿ.ಎನ್.ಗುಂಡೇಗೌಡರವರವನ್ನು ಆಹ್ವಾನಿಸಿ, ಕಾರ್ಯಕ್ರಮ ನೆಡೆಸಿ, ಸ್ಥಳಾಂತರಗೊಂಡ ಕಛೇರಿ ಮತ್ತು ಮಳಿಗೆಗಳನ್ನು ಶ್ರೀಯುತರುಗಳಿಂದ ಉದ್ಘಾಟನೆಗೊಳಿಸಲಾಯಿತು ಹಾಗೂ ಈ ಸುಸಂದರ್ಭದಲ್ಲಿ ಶ್ರೀ ಡಿ.ಎನ್.ಗುಂಡೇಗೌಡರವರನ್ನು ಸನ್ಮಾನಿಸಲಾಯಿತು.

ಸ್ಥಳಾಂತರಗೊಳಿಸಿದ್ದರಿಂದ ತೆರವುಗೊಂಡ ಎಸ್.ಪಿ ರಸ್ತೆಗಳಲ್ಲಿನ ಮಳಿಗೆಗಳನ್ನು ಬಾಡಿಗೆಗೆ ನೀಡಿ ಸಹಕಾರ ಸಂಘದ ಆದಾಯವನ್ನು ವೃದ್ಧಿಸಲಾಯಿತು.

ಷೇರುದಾರರ ಸಂಖ್ಯೆಯನ್ನು ಹೆಚ್ಚಿಸಿ,ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ಮಾರಾಟ ಮಾಡುವ ಮೂಲಕ ಸಹಕಾರ ಸಂಘಕ್ಕೆ ಹೆಚ್ಚಿನ ಲಾಭ ದೊರಕಿಸಿಕೊಡಲಾಯಿತು. ಹೀಗೆ ರೈತರಿಗೆ ಅನುಕೂಲ ಕಲ್ಪಿಸಿಕೊಡುವುದರ ಜೊತೆಜೊತೆಯಲ್ಲಿಯೇ ಸಹಕಾರ ಸಂಘದ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಲಾಯಿತು.

ಇದೀಗ ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯಕಾರಿ ಮಂಡಳಿಯು ಬದಲಾವಣೆಗೊಳ್ಳುವ ಸಮಯ ಸನ್ನಿಹಿತವಾಗಿದ್ದು, ಚುನಾವಣೆ ಮೂಲಕ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸಬೇಕಾಗಿದೆ.

ಈ ಸಹಕಾರಿ ಸಂಸ್ಥೆಯ ನಿರ್ದೇಶಕ ಅಧ್ಯಕ್ಷನಾಗಿ ಸೇವೆಸಲ್ಲಿಸಲು ನನಗೆ ತಾವು ಈ ಹಿಂದೆ ಅವಕಾಶ ನೀಡಿ ಸಹಕರಿಸಿರುತ್ತೀರಿ. ಈ ಸಹಕಾರಿ ಸಂಸ್ಥೆಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಸಹಕಾರಿ ಸಂಘದ ಮಾದರಿಯಲ್ಲಿ ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವನ್ನು ಅಭಿವೃದ್ಧಿಪಡಿಸುವ ಮಹದಾಸೆಯನ್ನು ಹೊಂದಿದ್ದು ತಮ್ಮೆಲ್ಲರ ಅಮೂಲ್ಯ ಸಹಕಾರವನ್ನು ಬಯಸುತ್ತೇನೆ.

ದಿನಾಂಕ 06-07-2024 ನೇ ಶನಿವಾರದಂದು ನಡೆಯಲಿರುವ ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಚುನಾವಣೆಗೆ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೇನೆ. ತಮ್ಮ ಅಮೂಲ್ಯವಾದ ಮತವನ್ನು ಬ್ಯಾಟರಿ ಟಾರ್ಚ್ ಗುರುತಿಗೆ ನೀಡುವುದರ ಮೂಲಕ ಮತ್ತೊಮ್ಮೆ ತಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕಾಗಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.

ವಂದನೆಗಳು : ಲೋಹಿತ್‌ ಕೌಡಳ್ಳಿ ಮಾಜಿ ಅಧ್ಯಕ್ಷರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ. ಸಕಲೇಶಪುರ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

One thought on “ದಿನಾಂಕ 06-07-2024 ನೇ ಶನಿವಾರದಂದು ನಡೆಯಲಿರುವ ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಚುನಾವಣೆ…ಸಕಲೇಶಪುರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಮೂರು ವರ್ಷಗಳ ಕಾಲ ರೈತರ ಪರ ,ಬಡವರ ಪರ ,ಬೆಳೆಗಾರರ ಪರ ಹಾಗೂ ಕೋವಿಡ್ ಅಂತಹ ಮಹಾಮಾರಿ ಸಂದರ್ಭದಲ್ಲಿ ಜನರ ನೆರವಿಗೆ ದಾವಿಸಿದ ಜನಪರ ಹೋರಾಟಗಾರ ಲೋಹಿತ್ ಕೌಡಳ್ಳಿ ಆದ ನನಗೆ ಬೆಂಬಲಿಸಬೇಕೆಂದು ಮನವಿ”

Leave a Reply

Your email address will not be published. Required fields are marked *

You missed