ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ನೂತನ ಸಂಘದ ಕಛೇರಿ ಉದ್ಘಾಟನೆಯನ್ನು ಸಕಲೇಶಪುರ-ಆಲೂರು ಕ್ಷೇತ್ರದ ಹೆಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಜಗದೀಶ್ ಕಬ್ಬಿನಹಳ್ಳಿ ಅವರು ನೆರವೇರಿಸಿದರು.

ನಂತರ ಸಭ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ” ಸರ್ಕಾರದ ಆದೇಶ ಹಾಗೂ ನೀತಿ ನಿಯಮದ ಪ್ರಕಾರ ಈ ಭಾಗಕ್ಕೆ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್ ಅನ್ನು ತರುವ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲ ಶ್ರಮಿಸಿದ್ದು, ಇಂದು ಕಂಡ ಕನಸಿನ ನನಸು ಶುಭಾರಂಭವಾಗಿದೆ. ಎಷ್ಟೋ ಸಂಘ ಸಂಸ್ಥೆಗಳು ಚಿಕ್ಕದಾಗಿ ಪ್ರಾರಂಭವಾಗಿ ದೊಡ್ಡ ಹೆಮ್ಮೆರವಾಗಿ ಬೆಳೆದ ಉದಾಹರಣೆಗಳಿವೆ.

ಈ ನಿಮ್ಮ ಬ್ಯಾಂಕ್ ಕೂಡ ಅ ಸಾಲಿನಲ್ಲಿ ಸೇರಲಿ. ಬ್ಯಾಂಕ್ ಗಳು ಕೇವಲ ಸಾಲ ಕೊಡುವುದಕ್ಕೆ ಹಾಗೂ ವಾಪಾಸ್ ತೆಗೆದುಕೊಳ್ಳುವುದಕ್ಕೆ ಸೀಮಿತವಾಗಿರಬಾರದು. ಅದರಲ್ಲಿ ಬೇರೆ ಬೇರೆ ವಹಿವಾಟುಗಳು ನಡೆಯುವಂತಾಗಬೇಕು. ಈ ಸಂಘದ ಬ್ಯಾಂಕ್ ನಮ್ಮ ಬ್ಯಾಂಕ್ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು . ಆಗ ಬ್ಯಾಂಕು ಇನ್ನಷ್ಟು ಉನ್ನತ ಮಟ್ಟಕ್ಕೆ ಹೋಗುತ್ತದೆ.

ನಾನು ಸಕಲೇಶಪುರ ಭಾಗದಿಂದ ನಿರ್ದೇಶಕನಾಗಿ ಹೋದಾಗ 12 ಕೋಟಿ ಸಾಲವನ್ನು 50 ಕೋಟಿ ತರುವಲ್ಲಿ ಶ್ರಮಿಸಿದ್ದೇನೆ.ಜಿಲ್ಲೆಯಿಂದ ನಿರ್ದೇಶಕರ ಸ್ಥಾನಕ್ಕೆ 15 ಇದ್ದು, ಈಗಾ 18 ನಿರ್ದೇಶಕರ ಸ್ಥಾನಕ್ಕೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು ಅದು ಒಪ್ಪಿಗೆ ನೀಡಿ ಆದೇಶ ಬಂದರೆ ಈ ಭಾಗಕ್ಕೆ ಇನ್ನೊಬ್ಬ ನಿರ್ದೇಶಕರಿಗೆ ಅವಕಾಶ ಸಿಕ್ಕಂತಾಗುತ್ತದೆ.

ಈ ನೂತನವಾಗಿ ಸ್ಥಾಪನೆಯಾಗಿರುವ ಸಂಘಕ್ಕೆ ಸ್ವಂತ ಕಟ್ಟಡವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜಾಗ ಮತ್ತು ಖರ್ಚಿನ ಪಟ್ಟಿಯನ್ನು ತಂದರೆ ಕೂಡಲೇ ಅಪೇಕ್ಸ್ ಬ್ಯಾಂಕ್ ಅಥವಾ ಹೆಚ್.ಡಿ.ಸಿ.ಸಿ. ಬ್ಯಾಂಕ್ ಮೂಲಕ ಅನುದಾನದಲ್ಲಿ ಹಣ ಬಿಡುಗಡೆ ಮಾಡುವ ಕೆಲಸವನ್ನು ಮಾಡಲಾಗುವುದು. ಎಂದರು

ನಂತರ ಮಾತನಾಡಿದ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ವಳಲಹಳ್ಳಿ ರಾಜೇಗೌಡ ” ಈ ಕೃಷಿ ಪತ್ತಿನ ಸಹಕಾರ ಸಂಘ ವಳಲಹಳ್ಳಿಯಲ್ಲಿ ನೂತನ ಕಛೇರಿ ಸ್ಥಾಪನೆ ಆಗಿ ಕಛೇರಿ ಉದ್ಘಾಟನೆ ಮಾಡುವುದಕ್ಕೆ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ತುಂಬಾ ಶ್ರಮ ವಹಿಸಿದ್ದಾರೆ.

ಸಕಲೇಶಪುರ-ಆಲೂರು ಕ್ಷೇತ್ರದ ಹೆಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಜಗದೀಶ್ ಕಬ್ಬಿನಹಳ್ಳಿ ನಮ್ಮ ಸಂಘ ಕ್ಕೆ 5 ಕೋಟಿ ಸಾಲ ಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಸಂಘ ವನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಲ್ಲಾ ನಿರ್ದೇಶಕರು ಶ್ರಮವಹಿಸಬೇಕು. ಎಂದರು

ವಳಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಿ.ಎನ್. ಸುಬ್ರಹ್ಮಣ್ಯ (ವಸಂತ) ಮಾತನಾಡುತ್ತಾ ” ಎಲ್ಲರೂ ಪಕ್ಷ ರಾಜಕೀಯವನ್ನು ಬಿಟ್ಟು ಸಂಘದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕು. ಈ ಸಂಘಕ್ಕೆ ಜಿಲ್ಲಾ ಬ್ಯಾಂಕುಗಳ ಭದ್ರತೆ ಇದ್ದು ಎಲ್ಲರೂ ನಂಬಿಕೆ ಇಟ್ಟು ಧೈರ್ಯವಾಗಿ ಹಣ ಹೂಡಿಕೆ ಮಾಡಬಹುದು. ಆದಷ್ಟು ಬೇಗ ಸ್ವಂತ ಕಟ್ಟಡವನ್ನು ಹೊಂದುವಂತಹ ನಿಟ್ಟಿನಲ್ಲಿ ಶ್ರಮಿಸೋಣ. ಜಿಲ್ಲಾ ಮಟ್ಟದಲ್ಲಿ ಮಾದರಿ ಸಂಘವನ್ನು ಮಾಡೋಣ. ಇದಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದರು.

ವಳಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಾರದ ಹಿರಿದನಹಳ್ಳಿ ಹೂವಣ್ಣಗೌಡ ಮಾತನಾಡುತ್ತಾ ” ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಲ್ಲದೆ ಪ್ರತಿನಿತ್ಯ ಸಂಘದೊಂದಿಗೆ ರೈತರು ಸಂಪರ್ಕವನ್ನು ಇಟ್ಟುಕೊಳ್ಳುವ ಜತೆಗೆ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು. ಎಂದು ಕರೆ ನೀಡಿದರು.

ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ವಳಲಹಳ್ಳಿ ಅಶ್ವಥ್ ಮಾತನಾಡುತ್ತಾ ” ಈ ಸಂಘವನ್ನು ಅಭಿರುದ್ದಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಪಕ್ಷ ಭೇದ ಮರೆತು ಒಗ್ಗಟ್ಟಿನಲ್ಲಿ ಕೆಲಸ ಮಾಡೋಣ .ಎಂದು ಹೇಳಿದರು.

ವೇದಿಕೆಯಲ್ಲಿ ವಳಲಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶೀಲಾ ಮಹೇಂದ್ರ, ವಳಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಕರಡಿಗಾಲ ಪ್ರಸನ್ನ,ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಕೆ. ಪಿ ಕೃಷ್ಣೇಗೌಡ, ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘದ ಮೇಲ್ವಿಚಾರಕರು ನವೀನ್,ಆಲೂರು ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರಾದ ಪವಿತ್ರ ಜಗ್ಗೇಶ್, ವಳಲಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಚಿನ್ನಹಳ್ಳಿ ಬಾಲು, ಜಾತಹಳ್ಳಿ ಪುಟ್ಟಸ್ವಾಮಿ ಗೌಡ, ತಾಲ್ಲೂಕು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಪ್ರಜ್ವಲ್ ಚಿನ್ನಹಳ್ಳಿ,ಸೇರಿದಂತೆ ಎಲ್ಲಾ ನಿರ್ದೇಶಕರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *