ಕೃಷಿಯಲ್ಲಿ ಬೆಳೆಗಳ ಬೆಳವಣಿಗೆಗೆ ಪೋಷಕಾಂಶಗಳು ಅತ್ಯಂತ ಮುಖ್ಯವಾದವು. ಆದರೆ, ಕೆಲವೊಮ್ಮೆ ಈ ಪೋಷಕಾಂಶಗಳ ಕೊರತೆಯು ಬೆಳೆಗಳಿಗೆ ಹಾನಿಕಾರಕವಾಗಿರುತ್ತದೆ.

ಪೋಷಕಾಂಶದ ಕೊರತೆಯಿಂದ ಹಸಿರು ಎಳೆಗಳು ಕಳಚಿ, ಬೆಳೆಯ ಬೆಳವಣಿಗೆ ನಿಧಾನವಾಗುವುದು, ಕೊನೆಗೆ ಹಣ್ಣುಗಳು ಅಥವಾ ಕಾಯಿ ಕಡಿಮೆ ಪ್ರಮಾಣದಲ್ಲಿ ಬರುತ್ತವೆ ಎಂದು ಪ್ರೇಕ್ಷ ರವರು ತಿಳಿಸಿದರು.

ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ(ಅನಾರ್ಸ) ಕೃಷಿ ಮತ್ತು ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ೨೦೨೪-೨೫ ರ ಅಂಗವಾಗಿ ಬೆಳೆಗಳಲ್ಲಿ ಪೋಷಕಾಂಶ ಕೊರತೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಮಣ್ಣಿನ ಪೋಷಕಾಂಶ ಮಟ್ಟವನ್ನು ತಿಳಿದುಕೊಳ್ಳಲು ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಇದರಿಂದ ಪೋಷಕಾಂಶ ಕೊರತೆಯನ್ನು ಗುರುತಿಸಲು ಸಹಾಯವಾಗುತ್ತದೆ.ಬೆಳೆಗಳಲ್ಲಿ ಪೋಷಕಾಂಶ ಕೊರತೆಯು ಕೃಷಿಯಲ್ಲಿ ಪ್ರಮುಖ ಸಮಸ್ಯೆ. ಆದರೆ, ಸರಿಯಾದ ನಿರ್ವಹಣೆ ಮತ್ತು ತಂತ್ರಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು. ಕೃಷಿಕರು ತಮ್ಮ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವ ಮೂಲಕ ಉತ್ತಮ ಉತ್ಪಾದನೆ ಪಡೆಯಬಹುದು ಎಂದು ಡಾ.ಪ್ರಕಾಶ್ ಕೋಲೇರ್ ರವರು ತಿಳಿಸಿದವರು.

ಈ ಕಾರ್ಯಕ್ರಮಕ್ಕೆ ಡಾ.ಪ್ರಕಾಶ್ ಕೋಲೇರ್ ( ಬೆಲೆ ಶರೀರಶಾಸ್ತ್ರ ), ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *