ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿದನಹಳ್ಳಿ ,ಮೊಗನಹಳ್ಳಿ ಹಾಗೂ ಹೊಸಳ್ಳಿ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ವಿದ್ಯಾರ್ಥಿಗಳು ಹಾಗೂ ವೃದ್ದರೂ ಸೇರಿದಂತೆ 500 ಕ್ಕೂ ಹೆಚ್ಚು ಜನ ವಾಸವಾಗಿರುತ್ತಾರೆ. ಈ ಗ್ರಾಮಗಳಲ್ಲಿ ಬಹುತೇಕ ಜನರು ಬಿ.ಎಸ್.ಎನ್.ಎನ್ ಗ್ರಾಹಕರಾಗಿದ್ದು,ಈ ಗ್ರಾಮಸ್ಥರಿಗೆ ಬಿ.ಎಸ್.ಎನ್.ಎಲ್ ಸೇರಿದಂತೆ ಇತರೆ ಯಾವುದೇ ನೆಟ್ವವರ್ಕ್ ಸಿಗದೆ ಪ್ರತಿನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಈ ಗ್ರಾಮಗಳಿಂದ 2ಕಿ.ಮೀ ವ್ಯಾಪ್ತಿಯಲ್ಲಿ ಡ್ಯಾಮ್ ಇದ್ದು ಅನೇಕ ಕೈಗಾರಿಕ ಕೆಲಸಗಳು ಪ್ರತಿದಿನ ನಡೆಯುತ್ತಿದ್ದು, ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಮಸ್ಥರು ಸೇರಿದಂತೆ ಕೂಲಿ ಕಾರ್ಮಿಕರು, ಅಧಿಕಾರಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಕೂಡಲೆ ಬಂದು ಹೊಸ ಬಿ.ಎಸ್.ಎನ್.ಎಲ್ ನೆಟ್‌ವರ್ಕ್ ಟವರ್‌ನ್ನು ನಿರ್ಮಿಸಿಕೊಡಬೇಕಾಗಿ ಗ್ರಾಮಸ್ಥರು ಶಾಸಕರಾದ ಸಿಮೆಂಟ್ ಮಂಜುನಾಥ್,ಉಪ ವಿಭಾಗಧಿಕಾರಿಗಳಿಗೆ ಹಾಗೂ ಹಾಸನ ಜಿಲ್ಲಾ ಬಿ. ಎಸ್. ಏನ್ ಎಲ್ ಕಚೇರಿಯ ಡಿಜಿಎಂ ಗೆ ಮನವಿ ಸಲ್ಲಿಸಿದರು.