ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಲಾ ಪಠ್ಯದಲ್ಲಿ ಸೇರಿಸಿದ್ದಂತ ಆರ್ ಎಸ್ ಎಸ್ ಮುಖಂಡ ಹೆಗ್ಡೆವಾರ್ ಹಾಗೂ ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿದೆ.ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಸಿಎಂ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಮಕ್ಕಳಿಗೆ ಪಠ್ಯಪುಸ್ತಕ ಕೂಡ ವಿತರಣೆ ಆಗಿದೆ. ಹೀಗಾಗಿ ಮತ್ತೆ ಪಠ್ಯಗಳನ್ನು ಪರಿಷ್ಕರಣೆ ಬಳಿಕ ಪ್ರಿಂಟ್ ಮಾಡಿ ನೀಡುವುದು ಕಷ್ಟ. ಆದರೇ ಸೆಪ್ಲಿಮೆಂಟರಿ ಪರಿಷ್ಕರಣೆ ಮಾಡಲು ಅವಕಾಶವಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು, ಯಾವುದು ಉಳಿಸಿಕೊಳ್ಳಬೇಕೋ ಅದನ್ನು ಉಳಿಸಿಕೊಂಡು, ಇತರೆ ಪಠ್ಯಗಳನ್ನು ಶಾಲಾ ಪಠ್ಯಪುಸ್ತಕದಿಂದ ಕೈಬಿಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಾಗಿ ಹೇಳಿದರು.ರಾಜೇಶ್, ಅಶ್ವತ್ಥನಾರಾಯ, ರಾಜಪ್ಪ ದಳವಾಯಿ, ಪ್ರೊ.ಚಂದ್ರಶೇಖರ್ ಅವರನ್ನೊಳಗೊಂಡ ಸಮಿತಿಯು 45 ಬದಲಾವಣೆಗಳನ್ನು ಶಾಲಾ ಪಠ್ಯಪುಸ್ತಕದಲ್ಲಿ ಮಾಡಲು ಸಲಹೆ ನೀಡಲಾಗಿತ್ತು. ಅಲ್ಲದೇ ಪದಗಳನ್ನು ಬದಲಿಸುವುದು, ಪ್ಯಾರಾಗ್ರಾಫ್ ಬದಲಿಸುವುದಕ್ಕೂ ಕೋರಿಗೆ ಇಡಲಾಗಿತ್ತು ಎಂದು ತಿಳಿಸಿದರು.ಶಾಲಾ ಶಿಕ್ಷಕರಿಗೆ ಈ ಶೈಕ್ಷಣಿಕ ವರ್ಷದಲ್ಲಿ ಯಾವುದು ಹೇಳಿಕೊಡಬೇಕು, ಯಾವುದು ಹೇಳಿಕೊಡಬಾರದು ಎನ್ನುವ ಬಗ್ಗೆ ತಿಳಿಸಲಾಗುತ್ತದೆ. ಅಂದಾಜು 15 ಪುಟಗಳ ಪುಸ್ತಕ ಈ ಶೈಕ್ಷಣಿಕ ವರ್ಷದಲ್ಲಿ ಇರಲಿದೆ ಎಂದು ಹೇಳಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed