ಲೋಕ ಪ್ರವಾದಿ ಮೊಹಮ್ಮದರ 1499 ಜನ್ಮದಿನ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ ಅವರ ಮಾನವೀಯ ಹಾಗೂ ಚಾರಿತ್ರ್ಯದ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿರುವ ಸಂದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಹೇಳಿದರು.

ಪ್ರವಾದಿ ಮೊಹಮ್ಮದರ ಜೀವನ ತೆರೆದ ಗ್ರಂಥವಾಗಿದೆ.ಅವರ ನಾಯಕತ್ವ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜಕೀಯ, ಸಾಮಾಜಿಕ, ಆರ್ಥಿಕ, ಶಿಕ್ಷಣ ಕ್ಷೇತ್ರಗಳಲ್ಲೂ ಮಾದರಿಯಾಗಿದ್ದರು. ಮೂಢನಂಬಿಕೆ, ಕಂದಾಚಾರಗಳಲ್ಲಿ ಮುಳುಗಿದ್ದ ಅರೇಬಿಯಾದ ಜನರನ್ನು ಸರಿದಾರಿಗೆ ತರಲು ಪ್ರಯತ್ನಿಸಿ ಅನೇಕ ಗಂಡಾಂತರ ಎದುರಿಸಿ ಯಶಸ್ವಿಯಾದರು ಎಂದು ವಿವರಿಸಿದರು.

ಮದ್ಯಪಾನ, ಜೂಜು, ಬಡ್ಡಿ, ವ್ಯಭಿಚಾರ, ಲಂಚವನ್ನು ನಿಷೇಧಿಸಿದ್ದರು,ಎಲ್ಲ ಬಗೆಯ ಕೆಡುಕು ಮತ್ತು ಅನಾಚಾರಗಳಿಂದ ಮುಳುಗಿದ್ದ ಸಮಾಜವನ್ನು ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕಟ್ಟಿದ್ದರು. ವ್ಯಾಪಾರ ವಹಿವಾಟಿನಲ್ಲಿ ಪ್ರಾಮಾಣಿಕತೆ ತಂದಿದ್ದರು. ಪರಸ್ಪರ ಕಿತ್ತಾಡುತ್ತಿದ್ದ ವಿವಿಧ ಪಂಗಡಗಳ ನಡುವೆ ಶಾಂತಿ, ಸೌಹಾರ್ದ ಮೂಡಿಸಿದ್ದರು. ಇಡೀ ಅರೇಬಿಯಾದ ಆಡಳಿತ ತಮ್ಮ ಕೈಗೆ ಬಂದರೂ ಜನರ ಮಧ್ಯೆ, ಸಾಮಾನ್ಯನಂತೆ ಬದುಕಿದ್ದರು.ಧರ್ಮ, ಮೈಬಣ್ಣ, ಪ್ರಾದೇಶಿಕತೆಯ ಆಧಾರದಲ್ಲಿ ಮನುಷ್ಯರ ನಡುವೆ ಮೇಲು–ಕೀಳು ಇಲ್ಲ ಎಂಬುದನ್ನು ಸಾರಿದ್ದರು ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಹಾಗೂ ಕೊಲ್ಲಹಳ್ಳಿ ಬದ್ರಿಯಾ ಜುಮಾ ಮಸ್ಜಿದಿಯ ಅಧ್ಯಕ್ಷ ಕೊಲ್ಲಹಳ್ಳಿ ಸಲೀಂ ಮಾತನಾಡಿ, ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಈ ಬಾರಿ ಒಟ್ಟೊಟ್ಟಿಗೆ ಬಂದಿದ್ದು ಗೌರಿ ಗಣೇಶ ಹಬ್ಬದ ಹಬ್ಬದ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಮುಸಲ್ಮಾನರು ಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದಗಳನ್ನು ಸ್ವೀಕರಿಸಿದ್ದರು ಇಂಧನ ಸೌಹಾರ್ದ ಸಮಾಜವನ್ನು ಪ್ರವಾದಿ ಮೊಹಮ್ಮದರ ಬಯಸುತ್ತಿದ್ದರು ಎಂದರು.

ಇಂದು ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ ಹಿಂದೂ ಬಾಂಧವರು ಮಿಲಾದ್ ರ‍್ಯಾಲಿ ಸಂದರ್ಭದಲ್ಲಿ ಮನೆಯಿಂದ ಹೊರಬಂದು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಬಾತೃತ್ವ ಹಾಗೂ ಸಹೋದರತೆಯನ್ನು ಜಗಕ್ಕೆ ಸಾರಿದ್ದಾರೆ. ಈ ರೀತಿಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ದೇಶದ ಉದ್ದಗಳಕ್ಕೂ ಹರಡಲಿ ಎಂದು ಹೇಳಿದರು.

ತಾಲೂಕಿನ ವಿವಿಧಡೆ ತಮ್ಮ ತಮ್ಮ ಮಸೀದಿಯಲ್ಲಿ ಬೆಳಗಿನ ಜಾವ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಸೀದಿಯ ಪರಿಸರದಲ್ಲಿ ನಬಿ ದಿನದ ಬಗ್ಗೆ ಜಾಥವನ್ನು ಹಮ್ಮಿಕೊಂಡಿದ್ದರು. ಮಕ್ಕಳ ದಫ್ ಕಾರ್ಯಕ್ರಮ ನೊಡುಗರ ಮನಸೆಳೆಯಿತು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *