ಆಲೂರು : ತಾಲೂಕಿನ ಕೆ.ಹೊಸಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಜಮುನಿಸ ರವರಿಗೆ ಶಾಲೆಯಲ್ಲಿ ನಿವೃತ್ತಿ ಬಿಳ್ಕೊಡುಗೆ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಮಲ್ಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಹೇಮಾ ಲೋಕೇಶ್ ಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನ ಮಾತನಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ ಹೊಸಕೋಟೆಯಲ್ಲಿ 25 ವರ್ಷ 21 ದಿವಸ ಕಾರ್ಯನಿರ್ವಹಿಸಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸಾವಿರಾರು ವಿದ್ಯಾರ್ಥಿಗಳನ್ನ್ ಸತ್ ಪ್ರಜೆಗಳಾಗಿ ರೂಪಿಸಿದ್ದಾರೆ. ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಅವರ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಹೊರಹೊಮ್ಮಿದ್ದಾರೆ ಆದ್ದರಿಂದ ಮುಂದಿನ ಅವರ ನಿವೃತ್ತಿಯ ಬದುಕು ಸುಖಮಯವಾಗಿರಲಿ ಎಂದರು.
ಬಿ ಆರ್ ಸಿ ರವಿ ಮಾತನಾಡಿ ಒಂದೇ ಶಾಲೆಯಲ್ಲಿ 25 ವರ್ಷ ಸೇವೆ ಸಲ್ಲುವುದು ಅಷ್ಟು ಸುಲಭದ ಮಾತಲ್ಲ ಅವರ ಸಮಯ ಪ್ರಜ್ಞೆ,ಅವರ ಕರ್ತವ್ಯ ನಿಷ್ಠೆ, ನೇರ ನುಡಿ ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳಿಂದ ಗಳಿಸಿರುವ ವಿಶ್ವಾಸ ಅಪಾರವಾದದ್ದು. ಸರ್ಕಾರ ಅವರನ್ನು 25 ವರ್ಷಗಳ ಕಾಲ ಸಾಕಿದೆ ಮುಂದಿನ ದಿನಗಳಲ್ಲಿ ಕುಟುಂಬ ವರ್ಗದವರು ತುಂಬಾ ಚೆನ್ನಾಗಿ ನೋಡಿಕೊಳ್ಳಿ ಮುಂದಿನ ನಿವೃತ್ತಿಯ ಬದುಕು ಸುಖಮಯವಾಗಿರಲಿ ಎಂದರು.
ಇವರಿಗೆ ಶಾಲೆಯ ವತಿಯಿಂದ, ಹಳೆಯ ವಿದ್ಯಾರ್ಥಿಗಳ ವತಿಯಿಂದ, ಇಲಾಖೆ ಅಧಿಕಾರಿಗಳ ವತಿಯಿಂದ,ಗ್ರಾಮಸ್ಥರ ವತಿಯಿಂದ, ಗ್ರಾಮದ ಸಂಘ-ಸಂಸ್ಥೆಗಳ ವತಿಯಿಂದ ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಿ ಆರ್ ಸಿ ರವಿ, ಈಸಿಒ ಅಶ್ವಥ್, ಇಸಿಓ ಮಂಜುಳಮ್ಮ, ಮುಖ್ಯ ಶಿಕ್ಷಕಿ ನಾಗರತ್ನಮ್ಮ , ಸಿ ಆರ್ ಪಿ ಮೈಮುನ, ಶಿಕ್ಷಕ ಲೋಕೇಶ್, ನಿವೃತ್ತ ಶಿಕ್ಷಕ ಶಾಂತಮಲ್ಲಪ್ಪ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್, ಎಸ್ಡಿಎಂಸಿ ಉಪಾಧ್ಯಕ್ಷ ಮುರುಗೇಶ್,ಮಲ್ಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಹೇಮಾ ಲೋಕೇಶ್ , ಸದಸ್ಯೆ ಸರೋಜಾ, ಮಾಜಿ ಅಧ್ಯಕ್ಷರು ಕವಿತಾ ಸದಾನಂದ ಗೌಡ,ಹಳೆಯ ವಿದ್ಯಾರ್ಥಿಗಳಾದ, ಭಾಸ್ಕರ್, ಅಶೋಕ, ಅಶ್ರಫ್, ಮಧು, ಪವನ್, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.