ಬೇಲೂರು : ತಾಲೂಕಿನ ಕೋಟಿಗನಹಳ್ಳಿ ಗ್ರಾಮದ ರೈತ ಬಸವೇಗೌಡ ಎಂಬುವವರು ತಮ್ಮಲ್ಲಿದ್ದಂತ ೧ ಎಕರೆ ತೋಟ ಹಾಗು ೩ ಎಕರೆ ಜಮೀನಿನಲ್ಲಿ ಶುಂಠಿ ಹಾಗೂ ಕಾಫಿ ಮೆಣಸು ಇನ್ನಿತರ ಬೆಳೆಗಳನ್ನು ಬೆಳೆದಿದ್ದರು
ಆದರೆ ಬರಗಾಲದ ಹಿನ್ನಲೆಯಲ್ಲಿ ಶುಂಠಿ ಸಂಪೂರ್ಣ ಹಾಳಾಗಿದೆ.ಅಲ್ಲದೆ ಕೈ ಸಾಲ ಹಾಗೂ ಬ್ಯಾಂಕಿನಿಂದ ಲಕ್ಷಾಂತರ ರೂಗಳನ್ನು ಸಾಲ ಮಾಡಿಕೊಂಡು ತಮ್ಮ ಮಗನ ಜೊತೆ ೧ ಕೋಳಿ ಸಾಕಾಣಿಕೆ ಸಹ ಮಾಡಿಕೊಂಡಿದ್ದರು.
ಆದರೆ ಎಲ್ಲದರಲ್ಲು ಸಹ ಕೈ ಸುಟ್ಟುಕೊಂಡ ಬಸವೇಗೌಡರು ಮಾನಸಿಕವಾಗಿ ಮನನೊಂದು ತಮ್ಮ ತೋಟದಲ್ಲಿ ಶನಿವಾರ ಸಂಜೆ ೫ ಗಂಟೆ ಸಮಯದಲ್ಲಿ ತೋಟಕ್ಕೆ ತಂದಿದ್ದ ಕ್ರಿಮಿನಾಶಕವನ್ನು ತೋಟದಲ್ಲಿ ಸೇವಿಸಿ ಸಾಲಗಾರರಿಂದ ವಿಮುಕ್ತಿಗೊಳ್ಳಲು ವಿಷ ಸೇವಿಸಿದ್ದೇನೆಂದು ತಮ್ಮ ಪುತ್ರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದಾರೆ.
ನಂತರ ವಿಷಯ ತಿಳಿದು ಅವರ ಮಗ ತನ್ನ ತಂದೆ ವಿಷ ಕುಡಿದಿರುವುದನ್ನು ಕಂಡು ಕೂಡಲೇ ಬೇಲೂರು ಸರ್ಕಾರಿ ಆಸ್ಪತ್ರೆಗೆ ಕರೆತಂದರು ಅಷ್ಟೊತ್ತಿಗಾಗಲೆ ಸಾವನ್ನಪ್ಪಿದ್ದರು.
ಅರೇಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಕ್ಸ್ ನ್ಯೂಸ್ : ಸಣ್ಣ ಪುಟ್ಟ ರೈತರು ಬರಗಾಲದ ಹಿನ್ನಲೆಯಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಸಾಲ ಮಾಡಿ ಬೆಳೆದಿರುತ್ತಾರೆ.ಆದರೆ ಬರಗಾಲದಿಂದ ತತ್ತರಿಸಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ
ಕೂಡಲೇ ಇಂತಹ ಬಡ ಕುಟುಂಬದ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ರತೀಶ್ ಮನವಿ ಮಾಡಿದರು.