ಬೇಲೂರು.ಮೇ.೨೬ ;-ಮಲೆನಾಡಿನಲ್ಲಿ ಇತ್ತೀಚಿನ ದಿನದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ಆನೆ ಮತ್ತು ಮಾನವನ ಸಂಘರ್ಷದಿಂದ ಇಡೀ ಮಲೆನಾಡು ಆತಂಕದ ಪರಿಸ್ಥಿತಿಯಲ್ಲಿದೆ, ಬೆಳೆಗಾರರು ಮಾನವ ಮತ್ತು ಆನೆಗಳ ಸಂಘರ್ಷಕ್ಕೆ ಮುಕ್ತಿ ಕಾಣಿಸಲು ಪರಿಹಾರ ಸಾಧ್ಯತೆಗಳನ್ನು ಹುಡುಕಬೇಕಿದೆ ಎಂದು ರಾಷ್ಟ್ರೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದರು.
ತಾಲ್ಲೂಕಿನ ಗೆಂಡೇಹಳ್ಳಿ ಸಮೀಪದ ಕೆಂಜಿಗೆಗುಡ್ಡ ಜಿ.ಕೆ.ಕುಮಾರ್ ಅವರು ಎಸ್ಟೇಟ್‌ನಲ್ಲಿ ಹಾಸನ ಜಿಲ್ಲಾ ಪ್ಲಾಂರ‍್ಸ್ ಸಂಘದ ವತಿಯಿಂದ ಹಮ್ಮಿಕೊಂಡ ಕಾಫಿ ಹಾಗೂ ಕಾಳು ಮೆಣಸು ಬೆಳೆಗೆ ರಸಗೊಬ್ಬರ ಮತ್ತು ಫೋಲಿಯರ್ ಸ್ಟ್ರೇ ನಿರ್ವಹಣೆ ತಾಂತ್ರಿಕ ಅಧಿವೇಶನ ಮತ್ತು ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಡಾನೆ ಸಮಸ್ಯೆ ತಡೆಗೆ ಸಮಿತಿಯನ್ನು ರಚಿಸಿಲು ಮುಂದಾಗಿದೆ. ಇದಕ್ಕೆ ಡಾ.ಸುರೇಂದ್ರಶರ್ಮಾ ಎಂಬ ನುರಿತವರ ನೇತೃತ್ವದಲ್ಲಿ ಸಮಿತಿ ವಿಶೇಷ ಅಧ್ಯಾಯನ ಹಾಗೂ ಪರಿಹಾರ ಸಾಧ್ಯತೆಗಳನ್ನು ಕಂಡುಕೊಳ್ಳಲು ಶೀಘ್ರವೇ ರಚನೆ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದರು.
ಬಾಳೆಹೊನ್ನೂರು ಕೇಂದ್ರಿಯಾ ಕಾಫಿ ಸಂಶೋಧನಾ ಸಂಸ್ಥೆ ರಸಾಯನ ಶಾಸ್ತ್ರ ಮುಖ್ಯಸ್ಥರಾದ ಡಾ.ಪಿ.ಶಿವಪ್ರಸಾದ್ ಮಾತನಾಡಿ, ಕಾಫಿ ಕೃಷಿಯನ್ನು ಪ್ರಾರಂಭಿಸುವ ಮುನ್ನ ಮಣ್ಣಿನ ಪರೀಕ್ಷೆ ಅಗತ್ಯವಾಗಿ ನಡೆಸಬೇಕು ಹಾಗೂ ಅದರ ಆಧಾರದ ಮೇಲೆ ಪೋಷಕಾಂಶಗಳನ್ನು ಒದಗಿಡಬೇಕು. ಕಾಫಿಯೂ ತನ್ನ ವಿಶೇಷ ಗುಣದಿಂದ ವಿಶ್ವದಲ್ಲಿಯೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಅಗತ್ಯ ಪ್ರಮಾಣದಲ್ಲಿ ನೀರು ಹಾಗೂ ನೆರಳನ್ನು ದೊರಕಯವಂತೆ ಮಾಡುವುದು ಅತ್ಯಗತ್ಯವಾಗಿದೆ. ವೈಜ್ಞಾನಿಕ ವಿಧಾನಗಳ ಮೂಲಕ ಲಾಭದಾಯಕ ವೃತ್ತಿಯಾಗಿಸಿಬಹುದು ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಹೆಚ್.ಟಿ.ಮೋಹನ್ ಕುಮಾರ್ ಮಾತನಾಡಿ, ಕಾಫಿ ಬೆಳೆ ಪ್ರಸ್ತುತ ಒಂದು ಸವಾಲು ರೀತಿಯಲ್ಲಿ ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿದೆ.ಅತಿವೃಷ್ಠಿ ಮತ್ತು ಅನಾವೃಷ್ಟಿ ವಿಶೇಷವಾಗಿ ಕಾಡಾನೆ ಸಮಸ್ಯೆಯಿಂದ ಬೆಳೆಗಾರರು ಕಾಫಿ ಕೃಷಿ ಬಗ್ಗೆ ಅಸಕ್ತಿ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಪ್ರತಿ ಕಾಫಿ ಬೆಳೆಗಾರರು ತಮ್ಮ ತೋಟದಲ್ಲಿ ಕೆಲಸ ಮಾಡುವ ಪ್ರತಿ ಕಾರ್ಮಿಕರಿಗೆ ವಿಮೆಯೊಂದಿಗೆ ಕೆಲಸ ಮಾಡಿಸುವುದು ಸೂಕ್ತವಾಗಿದೆ ಎಂದ ಅವರು ತಾವು ವಿಯೆಟ್ನಾಮ್ ಕೃಷಿ ಪ್ರವಾಸದ ಅನುಭವನಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಕರಣ್ ಗೌತಳ್ಳಿ ರವರು ಫೋಲಿಯರ್ ಸ್ಟ್ರೇ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ವಿಚಾರ ಮಂಡನೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಾಫಿ ಬೆಳೆಗಾರರಾದ ಜಿ.ಕೆ.ಕುಮಾರ್ ದಂಪತಿಗಳನ್ನು ಅಭಿನಂದಿಸಲಾಯಿತು.
ಉಳಿದಂತೆ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕಾಫಿ ಪ್ಲಾಂಟಸ್ಸ್ ಸಂಘದ ಅಧ್ಯಕ್ಷ ಎ.ಎಸ್.ಪರಮೇಶ್, ಹಿರಿಯ ಕಾಫಿ ಬೆಳೆಗಾರ ಬಿ.ಎಂ.ಮೋಹನ್ ಕುಮಾರ್, ಹೆಚ್‌ಡಿಪಿಎ ಗೌರವ ಕಾರ್ಯದರ್ಶಿ ಕೆ.ಬಿ.ಲೋಹಿತ್, ಬೇಲೂರು ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಚೇತನ್‌ಕುಮಾರ್, ಹೆಚ್‌ಡಿಪಿಎ ಟ್ರಸ್ಟ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ್, ಗೆಂಡೆಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ರತನ್ . ಜಿಕೆ ಕುಮಾರ್ ಉಪಾಧ್ಯಕ್ಷ ಮಂಜುನಾಥಶೆಟ್ಟಿ, ಖಜಾಂಚಿ ಎಂ.ಜೆ.ಸಚ್ಚೀನ್, ಕೃಷ್ಣಮೂರ್ತಿ, ವೈ.ಎಸ್.ಗಿರೀಶ್, ಬಿ.ಎಸ್.ಕುಮಾರ್ ಶ್ರೀನಿವಾಸ್ ಸೇರಿದಂತೆ ತಾಲ್ಲೂಕು ಮತ್ತು ಹೋಬಳಿ ಘಟಕದ ಸದಸ್ಯರು ಹಾಗೂ ೧೫೦ ಕ್ಕೂ ಹೆಚ್ಚಿನ ಕಾಫಿ ಬೆಳೆಗಾರರು ವಿಚಾರ ಮಂಡನೆಯನ್ನು ಸದ್ಬಳಿಕೆ ಮಾಡಿಕೊಂಡರು.