ಸಕಲೇಶಪುರ : ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಪಾಲಿಸಲು ಬಿಡದೆ ರಾಜಕೀಯ ಒತ್ತಡ ಹೇರುತ್ತಿರುವ ಹಾಗು ಪೊಲೀಸ್ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ಕುಗ್ಗಿಸುವ ಪ್ರಯತ್ನವನ್ನು ಅಮಾನತ್ತಿನ ಶಿಕ್ಷೆ ನೀಡಿ ಪೊಲೀಸ್ ಅಧಿಕಾರಿಗಳ ಕ್ಷಮತೆ ಕುಗ್ಗುಸಲು ಪ್ರಯತ್ನ ಮಾಡುತ್ತಿರುವ ಹುನ್ನಾರದ ಬಗ್ಗೆ ಪೊಲೀಸ್ ಇಲಾಖೆ ಎಚ್ವೇತ್ತುಗೊಳ್ಳಬೇಕು ಮತ್ತು ಯಾವದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಮತ್ತು ಪೊಲೀಸ್ ಸಿಬ್ಬಂದ್ಧಿಗೆ ಅವಕಾಶ ಮತ್ತು ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿ ಸಕಲೇಶಪುರ ವೃತ್ತ ನಿರೀಕ್ಷಕರ ಮೂಲಕ ಪೊಲೀಸ್ ಮಹನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆ ಕಂಕನಾಡಿಯಲ್ಲಿ 24.05.24 ರಂದು ಶುಕ್ರವಾರ ರಸ್ತೆ ತಡೆದು ಮುಸ್ಲಿಂರು ನಮಾಜ್ ಮಾಡಿರುವುದು ಕಾನೂನು ಬಾಹಿರವಾಗಿದ್ದು ಪೊಲೀಸ್ ಇಲಾಖೆ ಕೈಗೊಂಡ ಕ್ರಮವನ್ನ ಬಿ ರಿಪೋರ್ಟ್ ಮಾಡಿರೋದು ಖಂಡನಾರ್ಹ ಎಂದು ಪ್ರತಿಭಟನಾಕಾರರು ವಿರೋಧಿಸಿದರು

ಮಂಗಳೂರು ಜನತೆಗೆ ತೊಂದರೆ ಆಗಿರುವುದನ್ನ ಮತ್ತು ನಿಯಮ ಮೀರಿ ದುರುದ್ದೇಶಪೂರ್ವಕವಾಗಿ ರಸ್ತೆ ತಡೆದು ನಮಾಜ್ ಮಾಡಿದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ವಯ ಖಂಡಿಸಿದ ವಿ.ಹೆಚ್.ಪಿ ಮುಖಂಡ ಶರಣ್ ಪಂಪವೆಲ್ ಅವರ ಮೇಲೆ 153/A ಅಡಿ ಕೇಸ್ ದಾಖಲಿಸಿರೋದು ಸಂವಿಂಧಾನಾ ವಿರೋಧಿಯಾಗಿದ್ದು ಪ್ರಜಾಪ್ರಭುಪತ್ವ ವ್ಯವಸ್ಥೆ ತಲೆ ತಗ್ಗಿಸುವಂಥದ್ದು ಎಂದು ಪ್ರತಿಭಟನೆಕಾರರು ಅಕ್ರೊಶ ವ್ಯಕ್ತಪಡಿಸಿದರು

ಅಕ್ರಮವಾಗಿ ರಸ್ತೆ ತಡೆದು ಜನರನ್ನ ಭಯಭೀತಿಗೊಳಿಸಿ ಕಂಕನಾಡಿಯ ಮಧ್ಯ ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡಿರೋದು ವಾಹನ ಚಾಲಕರಿಗೆ ತೊಂದರೆ ಆಗಿದ್ದು ಆ ರಸ್ತೆ ಯಿಂದ ಸಾಗುತ್ತಿದ್ದ ವಾಹನಗಳು ಆಂಬುಲೆನ್ಸ್ ತುರ್ತು ತಲುಪಬೇಕಿದ್ದ ಶಾಲೆ-ಕಾಲೇಜು ವಿದ್ಯಾರ್ಥಿಗಳು ರಸ್ತೆ ಬಂದ್ ಮಾಡಿ ನಮಾಜ್ ಮಾಡಿದ್ದರಿಂದ ತೊಂದರೆ ಅನುಭವಿಸಿದ್ದಾರೆ. ಎಂದು ಪ್ರತಿಭಟನಾ ಕರಾರು ದೂರಿದ್ದಾರೆ.

1. ದಕ್ಶಿಣ ಕನ್ನಡ ಜಿಲ್ಲೆ ಕದ್ರಿ ಪೂರ್ವ ವಲಯ ಇನ್ಸ್ಪೇಕ್ಟರ್ ಸೋಮಶೇಖರ್ ಅವರು ಕಂಕನಾಡಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ದುರುದ್ದೇಶವಾಗಿ ಸಾರ್ವಜನಿಕರನ್ನ ಭಯಭೀತಿಗೊಳಿಸುವ ದುರುದ್ದೇಶದಿಂದ ರಸ್ತೆ ಬಂದ್ ಮಾಡಿ ನಮಾಜ್ ಮಾಡಿರುವ ಕೃತ್ಯದ ವಿರುದ್ಧ ಕಾನೂನು ಸುವ್ಯವಸ್ಥೆ ಕಾಪಾಡಲು ಮಾಡಿದ ಕೇಸನ್ನ ಮೇಲಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂಬ ಕಾರಣ ನೀಡಿ ಸುದೀರ್ಘ ರಜೆಗೆ ತೆರಳುವಂತೆ ಆದೇಶ ಮಾಡಿರುವುದು ಪ್ರಾಮಾಣಿಕ ಅಧಿಕಾರಿ ಸೋಮಶೇಖರ್ ಅವರಿಗೆ ಅವಮಾನ ಮಾಡಿದ್ದೂ ಪೊಲೀಸ್ ಕಾಯ್ದೆ ನಿಯಮ ಉಲ್ಲಂಘನೆ ಆಗಿದ್ದು ಈ ಬಗ್ಗೆ ವರದಿ ಪಡೆದು ಸೋಮಶೇಖರ್ ಅವರ ರಜೆ ರದ್ದುಗೊಳಿಸಿ ಕದ್ರಿ ಪೂರ್ವ ವಲಯಕ್ಕೆ ನಿಯೋಜನೆ ಮಾಡಿ ಆದೇಶಿಸಬೇಕು ಎಂದು ಆಗ್ರಹಿಸಿದರು.

2. ಮಂಡ್ಯ ಜಿಲ್ಲೆ ಬೆಳ್ಳೂರು ಪೊಲೀಸ್ ಠಾಣೆಯಾ ಸಬ್ ಇನ್ಸ್ಪೇಕ್ಟರ್ ಹಾಗೂ ಹಿಂದೆ ಸಕಲೇಶಪುರದಲ್ಲಿ ಕಾರ್ಯ ನಿರ್ವಹಿಸಿದ್ದ ದಕ್ಷ ಪೊಲೀಸ್ ಅಧಿಕಾರಿ ಬಸವರಾಜ್ ಚಿಂಚೋಳ್ಳಿ ಅವರನ್ನ ಯಾವದೇ ಕಾರಣ ಇಲ್ಲದಿದ್ದರೂ ಸಹ ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಮುಸ್ಲಿಂ ಹುಡುಗರು ಮೆರೆದ ಪುಂಡಾಟ ಮತ್ತು ಹಿಂದೂ ಯುವಕನಿಗೆ ಮರಣಾoತಿಕ ಹಲ್ಲೆ ಮಾಡಿದ್ದೂ ಜಗದ್ ಜಾಹೀರಾಗಿದ್ದು ಮುಸ್ಲಿಂ ಪುಂಡರು ಹಾಕಿದ ಧಮ್ಕಿ ಮತ್ತು ಅವಾಜ್ ಹಾಕಿರೋ ಎಲ್ಲಾ ಸಾಕ್ಷಿಗಳಿದ್ದು ಅವುಗಳ ಆಧಾರದ ಮೇಲೆ ಕೈಗೊಂಡ ಕ್ರಮವನ್ನ ಸಹಿಸಲಾಗದೆ ರಾಜಕೀಯಾ ಒತ್ತಡ ಹಾಕಿ ಬಸವರಾಜ್ ಚಿಂಚೋಳ್ಳಿ ಅವರನ್ನ ಅಮಾನತ್ತು ಮಾಡಿರೋದು ಇಡೀ ಇಲಾಖೆಯ ಅಧಿಕಾರಿಗಳಿಗೆ ಸಂದೇಶ ನೀಡಿದ್ದು ಮುಸ್ಲಿಂ ತುಷ್ಟಿಕರಣ ಮಾಡಬೇಕು ಇಲ್ಲದಿದ್ದಲ್ಲಿ ಅಮಾನತ್ತು ಗ್ಯಾರಂಟಿ ನೀಡುತ್ತದೆ ಎಂದು ಸಂದೇಶವನ್ನ ನೀಡಿ ರಾಜಕೀಯ ಹಸ್ತಾಕ್ಷೇಪ ಮಾಡುತ್ತಿರುವುದು ಖಂಡನೀಯ. ಎಂದರು.

3.ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ನಡೆದ ಬೀಭತ್ಸ್ಯ ಕೃತ್ಯ ಮಾಧ್ಯಮದ ಮುಖಾಂತರ ಸರ್ವೇ ಸಾಮಾನ್ಯರಿಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗು ಜನಸಾಮನ್ಯರ ರಕ್ಷಣೆಗೆ ಸದಾ ಸಿದ್ದರಾಗಿ ಇರುವ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ಮಾಡಿ ಬೆಂಕಿ ಹಾಕಲು ಪ್ರಯತ್ನ ಮಾಡಿದನ್ನ ತಡಿಯಲು ಪ್ರಯತ್ನ ಮಾಡಿದಲ್ಲದೆ ಸರ್ಕಾರೀ ಸ್ವತ್ತಾದ ಪೊಲೀಸ್ ಜೀಪ್ ಪಲ್ಟಿ ಮಾಡಿ ಬೆಂಕಿ ಹಾಕಲು ಯತ್ನಿಸಿದ ಕಿಡಿಕೇಡಿಗಳ ವಿರುದ್ಧ ಕ್ರಮ ಜರುಗಿಸಲು ಮುಂದಾದ ಕಾರಣ ಪ್ರಶಾಂತ್ ಮಾನವಳ್ಳಿ D.Y.S.P ಚನ್ನಗಿರಿ ನಿರಂಜನ್ C.P.I ಚನ್ನಗಿರಿ ಹಾರಿನ್ ಅಖ್ತರ್ S.I [Deptation]ಮೇಲ್ಕಂಡ ಮೂರೂ ಜನ ಪೊಲೀಸ್ ಅದಿಕಾರಿಗಳನ್ನ ವಿನಾಕಾರಣ ಅಮಾನತ್ತು ಮಾಡಿರೋದು ರಾಜಕೀಯ ಹಸ್ತಕ್ಸೆಪವಾಗಿದ್ದು ಇದನ್ನ ಕರ್ನಾಟಕ ರಾಜ್ಯ ಜನತೆ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗಟ್ಟಿದ್ದು ಮುಸ್ಲಿಂ ತುಷ್ಟಿಕರಣದ ನೀತಿ ಅನುಸರಿಸುತ್ತಿದ್ದು ಇದರಿಂದ ರಾಜ್ಯದಲ್ಲಿ ಹಿಂದೂಗಳು ಬದುಕು ದುಸ್ಸರವಾಗಿದೆ ಎಂದು ಪ್ರತಿಭಟನೆ ಉದ್ದೇಶಿಸಿ ರಘು ಸಕಲೇಶಪುರ ಮಾತಾಡಿದರು.

ಪ್ರತಿಭಟನೆ ನೇತೃತ್ವ ಪ್ರತಾಪ್ ಪೂಜಾರಿ, ಕೌಶಿಕ್ , ಮಂಜು ಕಬ್ಬಿನಗದ್ದೆ, ದೀಪಕ್, ಸುಪ್ರೀತ್, ಅರುಣ್, ಆದಿತ್ಯ, ದುಷ್ಯಂತ್ ಗೌಡ, ಇತರರು ಭಾಗವಹಿಸಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *