ಸಕಲೇಶಪುರ : ಹೆತ್ತೂರು ಹೋಬಳಿ ಬೆಳಗಾರರ ಸಂಘದ ಅವರಣದಲ್ಲಿ ನೆಡೆದ ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕ 2023-24 ನೇ ಸಾಲಿನ ಎಸ್. ಎಸ್. ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮಾತನಾಡಿದರು

ಗಳಿಸಿದ ಸಂಪತ್ತು ಅಳಿದು ಹೋಗುತ್ತದೆ ಆದರೆ ಪಡೆದ ಜ್ಞಾನ,ವಿದ್ಯೆ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳುವ ಮೂಲಕ ನಮ್ಮ ಕನ್ನಡದ ಶ್ರೀ ಮಂತಿಕೆ, ಪರಂಪರೆ ಮತ್ತು ಕನ್ನಡ ಅಸ್ಮಿತೆಯನ್ನು ನಾವೆಲ್ಲ ಭೆಳೆಸಬೇಕು ಈ ಜಾಗತಿಕ ಕಾಲಮಾನದಲ್ಲಿ ಬೇರೆ ಭಾಷೆಗಳು ಬೇಕು ಆದರೆ ಮೊದಲ ಆದ್ಯತೆಯನ್ನು ನಮ್ಮ ಮಾತೃಭಾಷೆಗೆ ನೀಡಬೇಕು ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮಶಿಕ್ಷಣ ಸಿಗುವಂತಾಗಬೇಕು ಎಲ್ಲಾ ತಂದೆ ತಾಯಿಯರು ಬಯಸಯತ್ತಾರೆ ಎಂದರು.

ಹೆತ್ತೂರು ಹೋಬಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು, ಸಾನ್ವಿ ಪಬ್ಲಿಕ್ ಸ್ಕೂಲ್ ಹೆತ್ತೂರು, ಸಿದ್ದಗಂಗಾ ಪ್ರೌಢ ಶಾಲೆ ಶುಕ್ರವಾರ ಸಂತೆ, ಮಲ್ಲೇಶ್ವರ ಪ್ರೌಢಶಾಲೆ ಹೆಚ್ ವಿ ಹಳ್ಳಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಹೆತ್ತೂರು, ಸರ್ಕಾರಿ ಪ್ರೌಢಶಾಲೆ ಹೊಂಗಡಹಳ್ಳ, ಸರ್ಕಾರಿ ಪ್ರೌಢಶಾಲೆ ವಣಗೂರು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಹೆತ್ತೂರು 7 ಪ್ರೌಢ ಶಾಲೆಗಳು ಮತ್ತು ಸರ್ಕಾರಿ ಪದವಿ ಕಾಲೇಜಿನ ಸುಮಾರು 24 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಪಡೆದರು

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕ ಅಧ್ಯಕ್ಷ ಹೆಚ್.ಪಿ.ರವಿಕುಮಾರ್,ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಶಿವರಾಜು,ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಹೆಚ್.ಜಿ.ದೇವರಾಜು,ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾದಿಕಾರಿ ದೀಪು,ಯಶ್ವಸಿ ಮಾರ್ಟ್ ಮಾಲೀಕ ಯಶಂತ್,ಹೆತ್ತೂರು ಹೋಬಳಿ ವಕ್ಕಲಿಗರ ಸಂಘದ ಅಧ್ಯಕ್ಷ ರಾಧಾಕೃಷ್ಣ,,ಮಾಜಿ ಸೈನಿಕ ವಳಲಹಳ್ಳಿ ನಂದೀಶ್,ಕಸಾಪ ಸಲಹಾ ಸಮಿತಿ ಸದಸ್ಯರಾದ ಸುರೇಶ್,ಹಡ್ಲಹಳ್ಳಿ ರಾಮಚಂದ್ರ,ನಿವೃತ ಶಿಕ್ಷಕ ಲವ,ಕಸಾಪ ಕಾರ್ಯದರ್ಶಿಗಳಾದ ಅತ್ತಿಗನಹಳ್ಳಿ ಸುರೇಶ್,ರೇಷ್ಮರಾಮಚಂದ್ರ,ಸದಸ್ಯರಾದ ಕೆ.ಬಿ.ಮಲ್ಲೇಶ್, ಬಾಲುಗೌಡ,ಹೇಮಂತಕುಮಾರ್,ಹೆಚ್.ಇ. ಸುಬ್ರಹ್ಮಣ್ಯ,ವೈಶಾಲಿಕೀರ್ತಿ,ಹೊಸಳ್ಳಿ ಜಗನಾಥ್ ಇತ್ತರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed