ಹೆತ್ತೂರು : ಕರ್ನಾಟಕ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳ ಪ್ರಾರಂಭವನ್ನು “ಅಕ್ಷರ ಅಭ್ಯಾಸ” ಕಾರ್ಯಕ್ರಮದ ಮೂಲಕ ವಿನೂತನ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹೊಸದಾಗಿ ದಾಖಲಾದ ಸುಮಾರು 35 ಪುಟಾಣಿಗಳು ತಮ್ಮ ತಂದೆ ತಾಯಿಯರೊಂದಿಗೆ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಅಕ್ಷರ ಅಭ್ಯಾಸ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಅರ್ಚಕರಾದ ಸತ್ಯಮೂರ್ತಿ ಅವರು ಸರಸ್ವತಿ ಪೂಜೆ ನೆರವೇರಿಸಿ ಆಶೀರ್ವದಿಸಿದರು.
ಹೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ್ ಹಳ್ಳಿಬೈಲ್, ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಸಚಿನ್ ಹೆಚ್.ಎಂ. ಕೆಪಿಎಸ್ ಪ್ರಾಂಶುಪಾಲ ಮಂಜುನಾಥ ಬಿ.ಡಿ. ಉಪ ಪ್ರಾಂಶುಪಾಲ ಮಹೇಶ್, ಮುಖ್ಯೋಪಾಧ್ಯಾಯ ಸತೀಶ್, ಶಾಲಾಭಿವೃದ್ದಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ನರ್ಸರಿ ವಿಭಾಗದ ಶಿಕ್ಷಕಿಯರಾದ ಸುನಂದ ಸ್ವಾಗತಿಸಿ, ತೇಜಸ್ವಿನಿ ವಂದಿಸಿದರು.