ತ್ಯಾಗ ಬಲಿದಾನ ಪ್ರತೀಕವಾದ ಈದುಲ್ ಅಝಾ,ಬಕ್ರೀದ್ ಹಬ್ಬ ಆಚರಣೆ

ಬೇಲೂರಿನ ಗೆಂಡೆಹಳ್ಳಿ ರಸ್ತೆಯಲ್ಲಿರುವ ಈದ್ಗ ಮೈದಾನದಲ್ಲಿ ಬೇಲೂರಿನ ಮುಸ್ಲಿಂ ಬಾಂಧವರು ಕೋಟೆ ಜಾಮಿಯ ಮಸೀದಿಯ ಗುರುಗಳಾದ ಇರ್ಫಾನ್ ರಜಾ ರವರ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಇರ್ಫಾನ್ ಗುರುಗಳು.ಸರ್ವರಿಗೂ ತ್ಯಾಗ,ಬಲಿದಾನದ ಪ್ರತೀಕವಾದ ಈದುಲ್ ಅಝಾಃ ಹಬ್ಬದ ಪ್ರೀತಿ ತುಂಬಿದ ಹಾರ್ಧಿಕ ಶುಭಾಷಯಗಳು ಜಾತಿ ಧರ್ಮ ಬೇಧ ಭಾವವೆನ್ನದೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವಂತಾಗೋಣ ನಾವೆಲ್ಲರೂ, ಜಾತಿ, ಧರ್ಮಗಳ ಹೊರತಾಗಿ ಪ್ರೀತಿ, ಮಮತೆ, ಶಾಂತಿ ಸಹೋದರತೆಯನ್ನು ನಮ್ಮ ನಾಡಿನಲ್ಲಿ ಉಳಿಸಿ, ಬೆಳೆಸೋಣಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬದ ಸಂಧರ್ಭದಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಿ ,ಬಡವ ಶ್ರೀಮಂತರ ನಡುವಿನ ಅಂತರವನ್ನು ಕಡಿಮೆಗೊಳಿಸಲು ಇಂದಿನ ದಿನವು ನಮಗೆ ಪ್ರೇರಣೆಯಾಗಲಿ.

ಈ ಶುಭ ದಿನದಂದು ಜಗತ್ತಿನಾದ್ಯಂತ ದೌರ್ಜನ್ಯಕ್ಕೂ,ದಬ್ಬಾಳಿಕೆಗೂ ,ಅವಮಾನಕ್ಕೂ ಒಳಗಾಗಿ, ನ್ಯಾಯ ನಿರಾಕರಿಸಲ್ಪಟ್ಟ ಜನಸಮುದಾಯದ ಪರವಾಗಿ ಪ್ರಾರ್ಥಿಸೋಣ. ಮತ್ತು ಇಸ್ಲಾಂ ಧರ್ಮದಲ್ಲಿ ಸ್ವಚ್ಛತೆಯ ಬಗ್ಗೆ ಪ್ರಮುಖ್ಯತೆ ನೀಡಿದ್ದಾರೆ. ಅದರಂತೆ ನೀವು ಸಹ ವಾಸಿಸುವ ಸ್ಥಳದಲ್ಲಿ ಸುತ್ತಮುತ್ತ ಪ್ರದೇಶಗಳಲ್ಲಿ.ಸ್ವಚ್ಛತೆ ಮತ್ತು ಸುಂದರಪರಿಸರ ಬಗ್ಗೆ ಕಾಳಜಿ ವಹಿಸಬೇಕು ಎಂದರು

ವಿಶೇಷವಾಗಿ ದೌರ್ಜನ್ಯಕ್ಕೆ ಒಳಗಾಗುವ ಬಡವರ ಬಗ್ಗೆ ಅಪಾರ ಕಾಳಜಿ ವಹಿಸಿ ಮುಖ್ಯ ವಾಹಿನಿಗೆ ತರುವಲ್ಲಿ ನಾವು ಕಾರ್ಯನಿರ್ವಹಿಸಬೇಕಾಗಿದೆ. ಕೇವಲ ಪ್ರಾಣಿ ಬಲಿ ನೀಡುವುದ ರಿಂದ ತ್ಯಾಗ ಬಲಿದಾನಕ್ಕೆ ಅರ್ಥವಿಲ್ಲ. ನಮ್ಮಲ್ಲಿರುವ ಅಸೂಹೆ. ಕೋಪ. ದುಷ್ಟ ನಿರ್ಧಾರಗಳು ಮೊದಲು ತ್ಯಜಿಸಿದರೆ ನಿಜವಾದ ಬಕ್ರೀದ್ ಹಬ್ಬವಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಪೇಟೆ ಜಾಮಿಯ ಮಸೀದಿಯ ಗುರುಗಳು ಬೇಲೂರು ಪಟ್ಟಣದ ಭಕ್ತಾದಿಗಳ ಸಮೂಹ ಹಾಜರಿದ್ದರು.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವತಿಯಿಂದ ಸರ್ಕಲ್ ಇನ್ಸ್ಪೆಕ್ಟರ್ ಜಯರಾಮ್. ಸಬ್ ಇನ್ಸ್ಪೆಕ್ಟರ್ ಪ್ರವೀಣ್ ರವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನೀಡಲಾಗಿತ್ತು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *