ಹಾಸನ: ನಗರದ ಸಮೀಪ ಅರಸೀಕೆರೆ ರಸ್ತೆ ಬಳಿ ಇರುವ ದೂರವಾಣಿ ನಗರದಲ್ಲಿ ೭೫ ಲಕ್ಷ ವೆಚ್ಚದ ಪಾರ್ಕ್ ಕಾಮಗಾರಿಗೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅವರು ಗದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ದೂರವಾಣಿ ನಗರದಲ್ಲಿ ೭೫ ಲಕ್ಷ ವೆಚ್ಚದ ಪಾರ್ಕ್ ಕಾಮಗಾರಿಗೆ ಇಲ್ಲಿನ ನಿವಾಸಿಗಳ ಜೊತೆ ಸೇರಿ ಗುದ್ದಲಿ ಪೂಜೆ ನೆರವೇರಿಸಲಾಗಿದೆ.

ಉಳಿದಂತೆ ರಸ್ತೆ, ಯುಜಿಡಿ ಸೇರಿದಂತೆ ಚಿಕ್ಕಪುಟ್ಟ ಕೆಲಸ ಇನ್ನು ಆಗಬೇಕಾಗಿದ್ದು, ದೂರವಾಣಿ ನಗರದಲ್ಲಿ ಇನ್ನೆನೂ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದೆ ಅದನ್ನ ಕೂಡ ಸಂಪೂರ್ಣವಾಗಿ ಕೆಲಸ ನಿರ್ವಹಿಸಲಾಗುವುದು. ಈಗಾಗಲೇ ನಮ್ಮ ತಂದೆ ಕಾಲದಲ್ಲಿ ಸಂಪೂರ್ಣ ರಸ್ತೆ ಕಾಮಗಾರಿ ಆಗಿದ್ದು, ಐದು ವರ್ಷಗಳಾದ ಮೇಲೆ ಮತ್ತೊಮ್ಮೆ ಟಾರ್ ಹಾಕಲಾಗಿದೆ ಎಂದರು.

ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಆದ ವೇಳೆ ನಾವು ಕೂಡ ದೆಹಲಿಗೆ ಹೋಗಿ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವು. ಹಾಸನ ವಿಚಾರವಾಗಿ ಬಹಳಷ್ಟು ಚರ್ಚೆ ಮಾಡಲಾಗಿದೆ. ಇದು ನನ್ನ ಹುಟ್ಟೂರು, ತವರೂರು ಆಗಿರುವುದರಿಂದ ಹಾಸನ ವಿಚಾರ ಬಂದರೇ ಯಾವುದೇ ಕೆಲಸವನ್ನು ಮಾಡುತ್ತೇನೆ. ಇಲ್ಲಿಗೆ ಒಳ್ಳೆಯ ಕೈಗಾರಿಕೆ ತಂದು ಹಾಸನ ಜಿಲ್ಲೆಗೆ ಉದ್ಯೋಗಗಳನ್ನು ಕೊಡುವ ನಿಟಿನಲ್ಲಿ ಕೆಲಸ ಮಾಡಲಾಗವುದು ಎಂದರು.

ನಗರದ ಮೇಲು ಸೇತುವೆ ಇರಬಹುದು, ವಿಮಾನ ನಿಲ್ದಾಣ ಇರಬಹುದು ಎಲ್ಲಾ ಕೆಲಸವನ್ನು ಮಾಡುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮುಂದಿನ ದಿನ ದೊಡ್ಡ ಮಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುವುದು. ಈಗಾಗಲೇ ಈ ಜಿಲ್ಲೆಗೆ ಹೆಚ್ಚಿನ ಹೊತ್ತು ಕೊಡುವುದಾಗಿ ಕುಮಾರಣ್ಣ ಹೇಳಿರುವುದಾಗಿ ವಿಶ್ವಾಸವ್ಯಕ್ತಪಡಿಸಿದರು.

ಇದೆ ವೇಳೆ ದೂರವಾಣಿ ನಗರದಲ್ಲಿರುವ ಶ್ರೀ ಸುಬ್ರಮಣ್ಯ ದೇವಸ್ಥಾನಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಇಲ್ಲಿನ ಸಮಸ್ಯೆ ಬಗ್ಗೆ ಅಲಿಸಿ ಪರಿಹರಿಸುವ ಭರವಸೆ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *