
ಆಲೂರು : ತ್ಯಾಗ ಮತ್ತು ಬಲಿದಾನದ ಸಂಕೇತ ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬದ ಅಂಗವಾಗಿ. ಆಲೂರು ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರಿದ್ ಹಬ್ಬವನ್ನು ಮುಸಲ್ಮಾನ್ ಬಾಂಧವರು ಆಚರಿಸಿದರು
ಬಕ್ರಿದ್ ಹಬ್ಬ ಎಂದರೆ ತ್ಯಾಗ ಬಲಿದಾನದ ಸಂಕೇತ ಪ್ರವಾದಿ ಇಬ್ರಾಹಿಂ ತನ್ನ ಸ್ವಂತ ಮಗ ಪ್ರವಾದಿ ಇಸ್ಮಾಯಿಲ್ ಅವರನ್ನು ಬಲಿ ಕೊಡುವ ಸಂದರ್ಭ ಒದಗಿ ಬರುತ್ತದೆ, ಇಬ್ರಾಹಿಂ ರನ್ನು ಪರೀಕ್ಷೆಗೆ ಒಳಪಡಿಸುವಂತಹ ಒಂದು ಸನ್ನಿವೇಶ ಆ ಒಂದು ಪರೀಕ್ಷೆಯಲ್ಲಿ ಪ್ರವಾದಿ ಇಬ್ರಾಹಿಂರು ಉತ್ತೀರ್ಣರಾಗುತ್ತಾರೆ.
ಆ ನೆನಪಿಗಾಗಿ ಪ್ರಾಣಿಯನ್ನು ಬಲಿ ಕೊಡುತ್ತೇವೆ ಎಂದರು. ಪ್ರಪಂಚದ ನಾನಾ ಮೂಲೆಗಳಿಂದ ಬಕ್ರೀದ್ ಹಬ್ಬದ ವೇಳೆ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಾರೆ.
ಇಂದು ಮಳೆ ಇಲ್ಲದೆ ಜನರು ಗೋಳಾಡುತ್ತಿದ್ದು, ಅದಕ್ಕಾಗಿ ಎಲ್ಲಾ ಮಸೀದಿಗಳಲ್ಲಿ ಮತ್ತು ಈಗ ಮೈದಾನದಲ್ಲಿ ಎಲ್ಲಾ ಮುಸಲ್ಮಾನ್ ಬಂಧುಗಳು ಸೇರಿ ವಿಶೇಷ ಪ್ರಾರ್ಥನೆಯನ್ನು ಮಾಡಿದರು.
ಬಲಿ ಕೊಡುವ ಪ್ರಾಣಿಯ ಮಾಂಸವನ್ನು, ಹಾಗೂ ಹಣ್ಣು- ಹಂಪಲುಗಳು, ಆಹಾರವನ್ನು ಎಲ್ಲಾ ಬಡ ಜನರಿಗೆ ಹಂಚುವ ಮೂಲಕ ಆಚರಿಸಿದರು.

