ಆಲೂರು : ಪಟ್ಟಣದ ಆಡಳಿತ ಸೌಧ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿ ನಾಡಪ್ರಭು ಕೆಂಪೇಗೌಡರು ಪ್ರತಿಯೊಂದು ಸಮುದಾಯದ ಅಭಿವೃದ್ಧಿ ಹಾಗೂ ಧಾರ್ಮಿಕವಾಗಿ ಹಲವು ರೀತಿಯ ಕೊಡುಗೆ ನೀಡಿದ್ದಾರೆ ನೂರಾರು ವರ್ಷಗಳ ಹಿಂದೆಯೇ ದನಕರು, ಪ್ರಾಣಿಪಕ್ಷಿಗಳು ನೀರು ಕುಡಿಯಲು ನೀರಿನ ತೊಟ್ಟಿಗಳು ಹಾಗೂ ರೈತರ ಅನುಕೂಲಕ್ಕಾಗಿ ಕೆರೆಕಟ್ಟೆಗಳ ನಿರ್ಮಾಣ ಮಾಡಿದ ಗೌಡರು ತಮ್ಮ ಅಧಿಕಾರದಲ್ಲಿ ಜಾತ್ಯಾತೀತ ಮನೋಭಾವನೆಯೊಂದಿಗೆ ಆಳ್ವಿಕೆ ಮಾಡಿದ ಹೆಗ್ಗಳಿಕೆ ಅವರದು ದೇಶಕ್ಕೆ ಹಾಗೂ ನಾಡಿಗೆ ಮಹತ್ತರ ಕೊಡುಗೆ ನೀಡಿದ ಮಹಾನೀಯರ ಆದರ್ಶ ಹಾಗೂ ತತ್ವಗಳನ್ನು ಪ್ರತಿಯೊಬ್ಬರ ಹೃದಯದಲ್ಲಿ ನೆಲಸುವಂತೆ ಮಾಡಿದಾಗ ಮಾತ್ರ ಆಚರಣೆಗೆ ಅರ್ಥ ಬರುತ್ತದೆ ಎಂದರು.

ಮುಖ್ಯ ಭಾಷಣಕಾರ ಶಿಕ್ಷಕ,ಸಾಹಿತಿ ಕೊಟ್ರೇಶ್ ಎಸ್ ಉಪ್ಪಾರ್ ಮಾತನಾಡಿ ಕೆಂಪೇಗೌಡರು ಕೆಂಪನಂಜೇಗೌಡರ ಮಗನಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದವರು ಅವರು ಇಂದಿನ ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರನ್ನು ಸ್ಥಾಪಿಸಿದವರು ನೂರಾರು ವರ್ಷಗಳ ಹಿಂದೆ ಅವರು ತಮ್ಮ ಕನಸಿನ ಬೆಂಗಳೂರನ್ನು ಕಟ್ಟಿ ಬೆಳೆಸಿದರು.

ಬೆಂಗಳೂರು ನಗರ ಇಂದು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಎಲ್ಲ ಜಾತಿ, ಮತ, ಧರ್ಮ, ಪಂಥಗಳಿಗೆ ಸೇರಿದ ಜನರನ್ನು ಇದು ಒಳಗೊಂಡಿದೆ.ಎಲ್ಲರನ್ನೂ ಎಲ್ಲವನ್ನೂ ಸದಾ ತನ್ನೆಡೆಗೆ ಬೆಂಗಳೂರು ಸೆಳೆಯುತ್ತಿರುವ ಕಾರಣ, ಇಲ್ಲಿಯ ಆಹ್ಲಾದಕರ ಹವಾಗುಣ ಇದಕ್ಕೆ ಬಹುಮುಖ್ಯ ಕಾರಣ ಬೆಂಗಳೂರು ನಗರವನ್ನು ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುವುದು ಬೆಂಗಳೂರು ಸಮುದ್ರ ಮಟ್ಟಕ್ಕಿಂತ 2 ಸಾವಿರ ಅಡಿಗಳ ಮೇಲಿದ್ದು ಸುತ್ತಲೂ ಬಹು ಸಂಖ್ಯೆಯ ಕೆರೆಗಳನ್ನು ಹೊಂದಿತ್ತು. ಇಂತಹ ಪ್ರಶಸ್ತವಾದ ಸ್ಥಳದಲ್ಲಿ ಬೆಂಗಳೂರನ್ನು ಸ್ಥಾಪಿಸಿದ ಕೀರ್ತಿ ಹಿರಿಯ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.

ತಾಲೂಕು ಕೇಂದ್ರದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ “ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ ನಾಡಪ್ರಭು ಕೆಂಪೇಗೌಡರು16 ನೇ ಶತಮಾನದಲ್ಲಿಯೇ ದೂರದೃಷ್ಟಿಯಿಂದ ಸುಂದರ ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು ನಗರ ನಿರ್ಮಾಣಕ್ಕೆ ಕಾರಣರಾದವರು ನಾಡಪ್ರಭು ಕೆಂಪೇಗೌಡರು ಹಿಂದಿನ ಕಾಲದಲ್ಲಿಯೇ ಒಂದು ನಗರ ಹೇಗಿರಬೇಕೆಂಬ ಕಲ್ಪನೆಯನ್ನು ಹೊಂದಿದ್ದರು ಕನ್ನಡ ನಾಡಿಗೆ ಅವರ ಕೊಡುಗೆ ಅಪಾರ ಆದ್ದರಿಂದ ಆಲೂರು ತಾಲೂಕು ಕೇಂದ್ರದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ತಳಿ ನಿರ್ಮಾಣ ಮಾಡಬೇಕೆಂಬ ಆಶಯ ಹೊಂದಿದ್ದು ತಹಸಿಲ್ದಾರ್ ರವರ ನೇತೃತ್ವದಲ್ಲಿ ಒಕ್ಕಲಿಗ ಸಮಾಜ ಸೇರಿದಂತೆ ಎಲ್ಲ ಸಮುದಾಯಗಳ ಸಹಕಾರದಿಂದ ಆಲೂರು ಪಟ್ಟಣದ ಕೇಂದ್ರ ಸ್ಥಾನದಲ್ಲಿ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪಿ.ಶ್ರೀನಿವಾಸ್, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಹೆಚ್.ಪಿ ಮೋಹನ್, ಮುಖ್ಯ ಭಾಷಣಕಾರ ಕೊಟ್ರೇಶ್ ಎಸ್.ಉಪ್ಪಾರ್,ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ಡಾ.ಜಯರಾಜ್, ಹಿಂದುಳಿದ ವರ್ಗಗಳ ಮುಖಂಡ ಬಿ.ಸಿ ಶಂಕರಾಚಾರ್,ತಾಲೂಕು ಕ,ಸಾ,ಪ ಅಧ್ಯಕ್ಷ ಗೋಪಾಲಕೃಷ್ಣ,ಡಿಎಸ್ಎಸ್ ಹಿರಿಯ ಮುಖಂಡ ಗೆಕರವಳ್ಳಿ ಬಸವರಾಜು,ತಾಲೂಕ್ ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ, ಸಿ ಡಿ ಪಿ ಓ ಮಲ್ಲೇಶ್, ಶಿಕ್ಷಣ ಇಲಾಖೆ ರುದ್ರೇಶ್, ಬಿಜೆಪಿ ಮುಖಂಡ ಹನುಮಂತೇಗೌಡ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *