ಹಾಸನ: ನಗರದಲ್ಲಿ ಸ್ಮಾಟ್ ವ್ಯಾಲ್ಯೂ ಸಂಸ್ಥೆಯಿಂದ ರಸ್ತೆ ಸುರಕ್ಷತಾ ಜಾಗೃತಿ ಅಂಗವಾಗಿ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಘೋಷ ವ್ಯಾಕ್ಯದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಅರಿವು ಮೂಡಿಸುವ ಜಾಥವನ್ನು ನಡೆಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಕ್ರೀಡಾಂಗಣದ ಬಳಿಯಿಂದ ಹೊರಟ ರಸ್ತೆ ಸುರಕ್ಷಥಾ ಜಾಗೃತಿ ಜಾಥವು ಹೊಸಲೈನ್ ರಸ್ತೆ ಮೂಲಕ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ಎದುರು ಕೆಲಸ ಸಮಯ ಇದ್ದು ಅರಿವು ಮೂಡಿಸಿದರು.

ಇದೆ ವೇಳೆ ಪೊಲೀಸ್ ಅಧಿಕಾರಿಗಳಿಗೆ ಸ್ವಾಗತಿಸಿ ನಂತರ ಸ್ಮಾಟ್ ವ್ಯಾಲ್ಯೂ ಸಂಸ್ಥೆಯ ಶಾಂತಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ರಸ್ತೆ ಸುರಕ್ಷತಾ ಜಾಗೃತಿ ಜಾಥದ ಮೂಲಕ ಹೆಲ್ಮೆಟ್ ಧರಿಸದೇ ಅದೆಷ್ಟೊ ಬೈಕ್ ಚಾಲಕರು ತಮ್ಮ ಪ್ರಾಣವನ್ನೆ ಕೊಡುತ್ತಿದ್ದಾರೆ. ಯುವಕರು ಮತ್ತು ಯುವತಿಯರು ತಮ್ಮ ಹೇರ್ ಸ್ಟೈಲ್ ಹಾಳಾಗುತ್ತದೆ ಎಂದು ಹೆಲ್ಮೆಟ್ ಧರಿಸುವುದಿಲ್ಲ.

ಜಾಗೃತಿಗಾಗಿ ಇಂತಹ ಜಾಥವನ್ನು ಕರ್ನಾಟಕದ ೧೮ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮವನ್ನು ಈಗಾಗಲೇ ಮೂರನೇ ಜಿಲ್ಲೆಯಾಗಿ ಹಾಸನದಲ್ಲಿ ಏರ್ಪಡಿಸಲಾಗುತ್ತಿದೆ ಎಂದರು.

ಪ್ರತಿಯೊಬ್ಬರೂ ಎಲ್ಮೆಟ್ ಧರಿಸಿ ತಮ್ಮ ಪ್ರಾಣವನು ಉಳಿಸಿಕೊಳ್ಳಿ ಎಂದು ಇಂತಹ ಅರಿವು ಮೂಡಿಸಲಾಗುತ್ತಿದೆ. ನಾವು ಸುರಕ್ಷಿತರಾಗಿ ದ್ವೀಚಕ್ರ ವಾಹನ ಚಲಾಯಿಸಿದರೂ ಹಿಂದಿನಿಂದ ಮತ್ತು ಮುಂದೆ ವ್ಯಕ್ತಿಗಳು ಯಾವ ರೀತಿ ವಾಹನದಲ್ಲಿ ಬರುತ್ತಾರೆ ಹೇಳುವುದಕ್ಕೆ ಆಗುವುದಿಲ್ಲ ಎಂದು ಎಚ್ಚರಿಸಿದರು.

ನಮ್ಮ ಜೀವ ಉಳಿಯಬೇಕಾದರೇ ಹೆಲ್ಮೆಟ್ ಧರಿಸಲೇಬೇಕು. ಅರ್ಧ ಹೆಲ್ಮೆಟ್ ಧರಿಸಿದರೇ ಅರ್ಧ ಸುರಕ್ಷತೆ ಮಾತ್ರ ಆಗುತ್ತದೆ ಎಂದು ಕಿವಿಮಾತು ಹೇಳಿದರು.

ಪೂರ್ಣ ಹೆಲ್ಮೆಟ್ ಧರಿಸಿ ಪ್ರಾಣವನ್ನು ಉಳಿಸಿಕೊಳ್ಳಿ ಯುವಕರು, ಕಾಲೇಜು ವಿದ್ಯಾರ್ಥಿಗಳು ಎಲ್ಮೆಟ್ ಇಲ್ಲದೇ ವಾಹನ ಚಾಲನೆ ಮಾಡಬಾರದು. ಯಾರು ಕೂಡ ತಮ್ಮ ಹೇರ್ ಸ್ಟೈಲ್ ಬಗ್ಗೆ ಯೋಚನೆ ಮಾಡದೇ ಮನೆಯಲ್ಲಿ ಕಾಯುತ್ತಿರುವ ಅಪ್ಪ ಅಮ್ಮನ ಬಗ್ಗೆ ಸಲ್ಪ ಯೋಚಿಸಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಇದೆ ವೇಳೆ ಮಮತಾ, ಚೈತ್ರಾ, ದಿಲೀಪ್, ಸುಕನ್ಯ, ರೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *