ಬೇಲೂರು. ಜೂನ್ 29ಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ, ತಾವು ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಹಾಗೂ ಸ್ಥಳೀಯರಲ್ಲಿ ಶಾಶ್ವತವಾಗಿ ನಮ್ಮ ನೆನಪು ಉಳಿಯುವಂತಾದಾಗ ಮಾತ್ರ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದು ತಾಹಸೀಲ್ದಾರ್ ಮಮತಾ ಎಂ ಹೇಳಿದರು.
40ವರ್ಷಗಳಿಗೂ ಹೆಚ್ಚು ಕಾಲ ಸರ್ಕಾರಿ ನೌಕರಿಯಲ್ಲಿ ಇದ್ದು ನಿವೃತ್ತರಾದ ಆಹಾರ ಇಲಾಖೆಯ ಶಿರಸ್ತೆದಾರ್ ಮಂಜುನಾಥ್ ಹಾಗೂ ಕೋದಂಡ ರಾಮಶೆಟ್ಟಿ ಅವರನ್ನು ತಾಲೂಕು ಆಡಳಿತದಿಂದ ಆತ್ಮೀಯವಾಗಿ ಸನ್ಮಾನಿಸಿ ನಂತರ ಮಾತನಾಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಲವು ಒತ್ತ್ತಡಗಳ ನಡುವೆ ಕಾರ್ಯನಿರ್ವಹಿಸಬೇಕಾಗಿದೆ. ಇದಲ್ಲದೇ ಸರ್ಕಾರದ ವಿವಿಧ ಯೋಜನೆಗಳನ್ನುಅನುಷ್ಠಾನಗೊಳಿಸುವುದು, ಸಮರ್ಪಕ ನಿರ್ವಹಣೆ, ಸಿಬ್ಬಂಧಿಗಳ. ಸಿಬ್ಬಂಧಿಗಳ ಸಹಕಾರದೊಂದಿಗೆ ಕಾರ್ಯರೂಪಗೊಳಿಸಿದಾಗ ಜನತೆಗೆ ತಲುಪುತ್ತದೆ.
ಈ ನಿಟ್ಟಿನಲ್ಲಿ ಆಹಾರ ಇಲಾಖೆಯ ಶಿರಸ್ತೆದಾರ್ ಮಂಜುನಾಥ್ ಅವರು ಬಿಪಿಎಲ್ ಕಾರ್ಡ್ ಅಂತ್ಯೋದಯ ಕಾರ್ಡ್ ಪಡೆದಿರುವ ಬಡವರಿಗೆ ನ್ಯಾಯಯುತವಾಗಿ ಪಡಿತರ ಸಿಗುವಲ್ಲಿ ಕಾರ್ಯನಿರ್ವಹಿಸುವ ಮೂಲಕ ಜನತೆಯ ಮನದಲ್ಲಿ ಉಳಿದಿದ್ದಾರೆ ಎಂದರು.
ತಾವು ಕರ್ತವ್ಯ ನಿರ್ವಹಿಸುವಾಗ ಕಳಂಕ ರಹಿತ ಸೇವೆ ಮುಖ್ಯ. ಆ ನಿಟ್ಟಿನಲ್ಲಿ ಶಿರಸ್ತೆದಾರರಾದ ಮಂಜುನಾಥ್ ಹಾಗೂ ಕೊದಂಡರಾಮ ಶೆಟ್ಟಿ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿ ತಮ್ಮ ವೃತ್ತಿಗೆ ನ್ಯಾಯ ಒದಗಿಸಿ ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದಾರೆ . ಯುವ ಸಿಬ್ಬಂದಿಗಳು ಕೆಲವು ಸಂದರ್ಭದಲ್ಲಿ ಮಾಹಿತಿ ಕೊರತೆಯಿಂದ ತಡವರಿಸುತ್ತಾರೆ. ಆಗ ನಿವೃತ್ತಿ ಹೊಂದಿದ ಇಂತಹ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ತಾಲೂಕು ಕೇಂದ್ರಗಳಲ್ಲಿ ಕಂದಾಯ ಇಲಾಖೆ ಕಾರ್ಯಗಾರವನ್ನು ಏರ್ಪಡಿಸಿ ಸಿಬ್ಬಂದಿಗಳಿಗೆ ನಿವೃತ್ತಿ ಹೊಂದಿರುವ ಹಿರಿಯ ಮುತ್ಸದ್ದಿಗಳಿಂದ ತರಬೇತಿ ನೀಡುವ ನಿಟ್ಟಿನಲ್ಲಿ ಮುಂದಾಗ ಬೇಕಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಹಾರ ಶಿರಸ್ತೇದಾರ್ ಮಂಜುನಾಥ್, 2019ಕ್ಕೆ ಪದನ್ನೋತ್ತಿ ಹೊಂದಿ ತಾಲ್ಲೂಕಗೆ ವರ್ಗಾವಣೆ ಕೆಲಸ ನಿರ್ವಹಿಸಿ ಜೂ 30 ಕ್ಕೆ ನಿವೃತ್ತಿ ಹೊಂದುತ್ತಿದ್ದೇನೆ. ಸುಮಾರು 39 ವರ್ಷಗಳ ಕಾಲ ಸರಕಾರಿ ಕೆಲಸ ಮಾಡಿದ್ದುನಮ್ಮ ಇಲಾಖೆ ಬಡವರಿಗೆ ಹತ್ತಿರವಾದ ಇಲಾಖೆ ಇವರ ಅವಧಿಯಲ್ಲಿ (ಬಡವರು) ಬಿಪಿಲ್ ಕಾರ್ಡ ಪಡೆದುಕೊಂಡಿರುವವರು ಹಾಗೂ ಆಹಾರ ಪಡಿತರ ಪಡೆದುಕೊಳ್ಳುವವರು ಈಗಲೂ ಜಿಲ್ಲೆಯಲ್ಲಿ ಯಾವುದೇ ಹಳ್ಳಿಗಳಿಗೆ ಹೋದರೆ ಗುರುತು ಮಾಡುತ್ತಾರೆ . ಹಾಗೂ ಇಲಾಖೆಯ ಪ್ರತಿಯೊಂದು ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿದ್ದು ತಮಗೆ ಸಂತೃಪ್ತಿ ತಂದಿದೆ . ಸಿಬ್ಬಂದಿಗಳಿಗೆ ಕಾನೂನಿನ ಅರಿವು ಇಲ್ಲದಿದ್ದರೆ ಜನಸಾಮಾನ್ಯರ ನಗೆ ಪಾಟಲಿಗೆ ಗುರಿಯಾಗ ಬೇಕಾಗುತ್ತದೆ. ತಹಸಿಲ್ದಾರ್ ಮಮತಾ ಅವರು ಉತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು ಅಧಿಕಾರಿಗಳನ್ನು ಸಕಾಲದಲ್ಲಿ ಎಚ್ಚರಿಸುವ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ.
ಸನ್ಮಾನಿತರ ಬಗ್ಗೆ ಪುರುಷೋತ್ತಮ್ ರಮೇಶ್ ಮಾತನಾಡಿದರು.
ಇದೆ ಸಂದರ್ಭದಲ್ಲಿ ರೆವಿನ್ಯು ಇಲಾಖೆ, ಗ್ರಾಮ ಸಹಾಯಕರು, ಶಿರಸ್ತೇದಾರ್, ತಾಲೂಕು ಕಚೇರಿ ಸಿಬ್ಬಂದಿಗಳು ಹಾಗೂ ಸನ್ಮಾನಿತರ ಬಂಧು ಮಿತ್ರರು ಹಾಜರಿದ್ದರು