ಹಾಸನ: ನಗರದ ಡೈರಿ ವೃತ್ತದ ಬಳಿ ಇರುವ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕೃಷಿ ವಿಶ್ವ ವಿದ್ಯಾಲಯ, ಜೈವಿಕ ಇಂಧನ ಉದ್ಯಾನವನ ಹಾಸನ ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇದೆ ವೇಳೆ ಹಾಸನ ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಬಾವಿ ಅಧ್ಯಕ್ಷರಾದ ಐ.ಜೆ. ರಮೇಶ್ ಅವರು ಉದ್ದೇಶಿಸಿ ಮಾತನಾಡಿ, ಸ್ವಚ್ಛತೆಗೆ ಮತ್ತು ಹೆಚ್ಚೆಚ್ಚು ಗಿಡಗಳನ್ನು ನೆಡುವುದಕ್ಕೆ ನಮ್ಮ ಲಯನ್ಸ್ ಕ್ಲಬ್ ಯಾವಾಗಲು ಸಹಕಾರ ಕೊಡುತ್ತದೆ. ಈಗಾಗಲೇ ನೆಡಲಾಗಿರುವ ಗಿಡಗಳನ್ನು ಪೋಷಿಸುವ ಜೊತೆಗೆ ಇದರಿಂದ ಆಗುವ ಉಪಯೋಗವನ್ನು ತಿಳಿದುಕೊಳ್ಳಬೇಕು. ಗಿಡಗಳಲ್ಲೂ ಕೂಡ ಶ್ರೀಮಂತ ಗಿಡಗಳು, ಬಡವರ ಗಿಡಗಳು, ಪರಿಸರದ ಗಿಡಗಳು ಎಂಬುವ ಬಗೆಗಳಿದ್ದರೂ ಮುಖ್ಯವಾಗಿ ಪರಿಸರದ ಗಿಡಗಳ ಬಗ್ಗೆ ಹೆಚ್ಚು ಗಮನವಹಿಸಬೇಕು. ಬೀಟೆ, ಹೊನ್ನೆ, ತೇಗ ಇವುಗಳು ನಮ್ಮ ಗಿಡಗಳಲ್ಲ. ಆದರೂ ಪರಿಸರಕ್ಕೆ ಒಳ್ಳೆಯದು ಎಂದರು.

ನೇರಳೇ ಗಿಡಗಳು, ಹೊಂಗೆ ಗಿಡಗಳು ಹಣ್ಣುಗಳನ್ನು ಬಿಡುವ ಗಿಡಗಳು ಉತ್ತಮ ಪರಿಸರ ನಿರ್ಮಾಣ ಮಾಡಲು ಸೂಕ್ತವಾದ ಗಿಡಗಳಾಗಿವೆ. ಇದರಿಂದ ಪ್ರಾಣಿ ಪಕ್ಷಿಗಳಿಗೆ ಅನುಕೂಲ. ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳುವುದರಿಂದ ನಾವುಗಳೆಲ್ಲಾ ಜೀವನವನ್ನು ಆರೋಗ್ಯಕರವಾಗಿ ಆನಂದವಾಗಿ ಇರಬಹುದು ಎಂದು ಕಿವಿಮಾತು ಹೇಳಿದರು.

ಇವತ್ತು ರಾಜಸ್ತಾನ್, ದೆಹಲಿ, ಬಿಹಾರದಲ್ಲಿ ಬಿಸಿಲು ೫೦ ರಿಂದ ೫೨ ಡಿಗ್ರಿಗೆ ಹೋಗಿ ೨ ಸಾವಿರಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ.ಆದರೇ ದಕ್ಷಿಣ ಭಾರತದಲ್ಲಿ ಯಾರು ಕೂಡ ಬಿಸಿಲಿನ ಆಘಾತದಿಂದ ಯಾರು ಸಾಯಲಿಲ್ಲ ಎಂಬ ಪ್ರಶ್ನೆ ಬಂದರೇ ಈಗ ಜನರಲ್ಲಿ ಎಚ್ಚರಿಕೆ ಬಂದಿದ್ದು, ನಾವು ಪರಿಸರವನ್ನು ರಕ್ಷಣೆ ಮಾಡಬೇಕು ಎಂಬುದು ಹೆಚ್ಚು ಅರಿವು ಬಂದಿದೆ. ಕೃಷಿ ಮತ್ತು ಅರಣ್ಯ ಇಲಾಖೆ ಮತ್ತು ಶಾಲಾ ಕಾಲೇಜುಗಳಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ. ಗಿಡವನ್ನು ಹೆಚ್ಚು ನೆಟ್ಟು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಲಯನ್ಸ್ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.

ಇದೆ ವೇಳೆ ಪ್ರಕೃತಿ ಕುರಿತಾದ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು.

ನಂತರ ಪರಿಸರ ಕಾಪಾಡುವ ವಿವಿಧ ರೀತಿಯ ಗಿಡಗಳನ್ನು ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನೆಡಲಾಯಿತು.

ಕಾರ್ಯಕ್ರಮದಲ್ಲಿ ಎಬಿವಿಪಿ ಪ್ರಾಂತ ಕಾರ್ಯದರ್ಶಿ ಪ್ರವೀಣ್, ಸಂಘಟನಾ ಕಾರ್ಯದರ್ಶಿ ಬಸವೇಶ ಕೋರಿ, ಪ್ರೋ. ವೀರಭದ್ರಪ್ಪ, ಮಡೆನೂರು ಕೃಷಿ ಕೇಂದ್ರದ ಗಿರೀಶ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹೆಚ್.ಕೆ. ನಾಗೇಶ್, ಎಬಿವಿಪಿ ಪ್ರಾಂತ ಉಪಾಧ್ಯಕ್ಷ ಅಜಯ್ ಕುಮಾರ್, ಶ್ರೀನಿವಾಸ್ ಸಾವರ್ಕರ್. ಶಿವಮೂರ್ತಿ, ಪ್ರೋ. ಯೋಗೇಂದ್ರ, ನಗರ ಕಾರ್ಯದರ್ಶಿ ಜ್ಞಾನ ಆರ್. ಗೌಡ, ಅನುಷಾ, ತಾಲೂಕು ಸಂಚಾಲಕರಾದ ಲೇಪಾಕ್ಷ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *