ಹಾಸನ: ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾ ಚುನಾವಣೆ ೨೦೨೪-೨೦೨೯ರ ವರೆಗೆ ೫ ವರ್ಷಗಳ ಅವಧಿಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಬುಧವಾರದಂದು ನಗರದ ಅರಳೇಪೇಟೆ ರಸ್ತೆ ಬಳಿ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರು ತಮ್ಮ ಸಮಾಜದ ಮುಖಂಡರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕೆ.ಎಸ್. ಲಿಂಗೇಶ್ ಅವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಲಾಗಿದೆ. ಈ ಹಿಂದೆ ಈ ಮಹಾಸಭಾಕ್ಕೆ ಬೇಲೂರು ತಾಲೂಕು ಘಟಕದ ಅಧ್ಯಕ್ಷನಾಗಿ ೫ ವರ್ಷಗಳ ಕಾಲ ಕೆಲಸ ಮಾಡಿದ್ದು, ಜೊತೆಗೆ ಶಾಸಕನಾಗಿ ಕೂಡ ಸೇವೆ ಸಲ್ಲಿಸಿದ್ದೇನೆ. ಜಿಲ್ಲೆಯ ಎಲ್ಲಾರ ಅಭಿಪ್ರಾಯದ ಮೇರೆಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದೇನೆ ಎಂದರು.

ಈ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಎಲ್ಲಾ ರೀತಿಯಲ್ಲೂ ಕೂಡ ಬಲಪಡಿಸುವಂತಹ ಗುರಿ ಹೊಂದಿದ್ದೇನೆ. ಈ ಚುನಾವಣೆ ಆಗಬಾರದು. ಎಲ್ಲಾ ಸ್ಥಾನವು ಕೂಡ ಅವಿರೋಧವಾಗಿ ಆಯ್ಕೆ ಆಗಬೇಕು. ಯುವಕರು ಬರಬೇಕು ಎಂಬುದು ಇದೆ. ಇದು ಸಮಾಜದ ಕೆಲಸವಾಗಿರುವುದರಿಂದ ಈ ಬಗ್ಗೆ ಕುಳಿತು ಮಾತನಾಡಿ ನಿರ್ಧರಿಸಲಾಗುವುದು.

ಹಾಸನದಲ್ಲಿ ಮುಖ್ಯವಾಗಿ ಸಮುದಾಯಕ್ಕೆ ಹಾಸ್ಟೇಲ್ ವ್ಯವಸ್ಥೆ ಇರುವುದಿಲ್ಲ. ಮೊದಲು ಬೇಕಾಗಿರುವುದು ಎಜುಕೇಶನ್ ಗೆ ಪೂರಕವಾಗಿ ವಾತವರಣ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಸಮಾಜದವತಿಯಿಂದ ಹಾಸ್ಟೇಲ್ ನಿರ್ಮಿಸುವ ಕೆಲಸ ಮಾಡಲಾಗುವುದು ಎಂದು ತಮ್ಮ ಗುರಿಯನ್ನು ತಿಳಿಸಿದರು. ಇಡೀ ಜಿಲ್ಲೆಯಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಇದೆ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜು, ಅದ್ಧೂರಿ ಕುಮಾರ್, ಬೇಲೂರು ತಾಲೂಕು ಅಭ್ಯರ್ಥಿ ಆಕಾಂಕ್ಷಿ ಬೆಣ್ಣೂರು ಯೋಗೀಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸುಧಾ, ರವಿಕುಮಾರ್, ಗೀತಾ ಪುಟ್ಟಸ್ವಾಮಿ, ಬಲ್ಲೇನಹಳ್ಳಿ ರವಿಕುಮಾರ್, ಶಿವಣ್ಣ, ಸೋಮಶೇಖರ್, ನಾಗಭೂಷಣ್, ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed