ಬೇಲೂರು : ಕಳೆದ ಎರಡು ವರ್ಷಗಳ ಹಿಂದೆ ಅಂದರೆ 22 ನೇ ಇಸವಿಯಲ್ಲಿ ದಿನಾಂಕ 16 ರಂದು ಕೆರೆ ಭತಿಯಾಗಿ ಕೋಡಿ ಮೇಲೆ ನೀರು ಹರಿದಿತ್ತು. ಈ ವರ್ಷ 1 ದಿನ ತಡವಾಗಿ ಕೆರೆ ಭರ್ತಿಯಾಗಿದೆ.

ಬಂಡೆಕಲ್ಲುಗಳ ಮೇಲೆ ಹರಿಯುವ ನೀರು ಜೋಗ ಜಲಪಾತದಂತೆ ಕಂಡು ಬರುತ್ತಿದೆ.ಬೋರ್ಗೆರೆಯುತ್ತ ಹರಿಯುವ ನೀರಿನ ನೋಟ ಕಣ್ಣುಂಬಿಸಿ ಕೊಳ್ಳಲು ಮಳೆಯ ನಡುವೆಯೇ ಜನ ಬರುತ್ತಿದ್ದಾರೆ.

ಕೆರೆ ಭರ್ತಿಯಾಗಿ ಚಿಕಹಳ್ಳದ ಮೂಲಕ ಯಗಚಿ ನದಿಗೆ ಸೇರುತ್ತಿದ್ದು ಯಗಚಿ ಜಲಾಶಯದಿಂದ ನದಿಗೆ ಬಿಡುತ್ತಿರುವ ನೀರಿನ ಜೊತೆಯಲ್ಲಿ ಕೆರೆಯ ನೀರು ಸೇರ್ಪಡೆಗೊಂಡು ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ.

ನದಿ ಪಾತ್ರದ ಗ್ರಾಮಸ್ಥರಿಗೆ ನದಿಗೆ ಇಳಿಯದಂತೆ ಯಗಚಿ ಜಲಾಶಯದ ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.

ಪ್ರತಿ ವರ್ಷವೂ ಸಹ ವಿಷ್ಣುಸಮುದ್ರ ಕೆರೆಯ ತುಂಬಿದ ನಂತರ ಜಲಪಾತದ ರೀತಿಯಲ್ಲಿ ಹರಿಯುವುದನ್ನು ನೋಡಲು ಪಟ್ಟಣದ ಜನತೆ ಹಾಗೂ ಪ್ರವಾಸಿಗರ ಹೆಚ್ಚಾಗಿ ಬರುತ್ತಾರೆ ಆದರೆ ಅವರಿಗೆ ಬರಲು ಯಾವುದೇ ಮೂಲಭೂತ ಸೌಕರ್ಯ ಇಲ್ಲ ರಸ್ತೆಯಂತೂ ತುಂಬಾ ಕೆಸರು ಮಾಯವಾಗಿದ್ದು ಯಾವುದೇ ತಡೆಗೋಡೆ ಇಲ್ಲದೆ ಇರುವುದರಿಂದ ಕೆಲವರು ಮೋಜಿನ ಆಟಕ್ಕೆ ಸೆಲ್ಫಿ ಗಿಳಿ ನಲ್ಲಿ ಕೆಳಗಿಳಿದು ಉಚ್ಛಾಟ ಮೆರೆಯುತ್ತಾರೆ.

ಇದರಿಂದ ಅವರ ಜೀವಕ್ಕೆ ಹಾನಿಯಾಗುವುದರಿಂದ ಪ್ರಪೋದ್ಯಮ ಅಭಿವೃದ್ಧಿ ಅವರು ಹಾಗೂ ಸಣ್ಣ ನೀರಾವರಿ ಇಲಾಖೆಯವರು ಇಲ್ಲಿಗೆ ತಡೆಗೋಡೆಯನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಸಮರ್ಪಕವಾದ ರಸ್ತೆಯನ್ನು ಮಾಡಬೇಕು ಅಲ್ಲದೆ ಸ್ಥಳೀಯ ಶಾಸಕರು ಸಹ ಇಲ್ಲಿಯ ಅವ್ಯವಸ್ಥೆಗೆ ಮೊದಲು ಕಾಯಕಲ್ಪ ಕಲ್ಪಿಸಬೇಕು ಎಂದು ರೋಟರಿ ಸಂಸ್ಥೆಯ ಕಾರ್ಯದರ್ಶಿ. ಬಿ ಬಿ ಶಿವರಾಜ್ ಒತ್ತಾಯಿಸಿದ್ದಾರೆ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed