ಚನ್ನರಾಯಪಟ್ಟಣ : ತಾಲೂಕಿನ ಶ್ರವಣಬೆಳಗೊಳದ ಎಸ್ .ಎನ್ .ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ 2023-2024ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಕೀರ್ತಿ ತಂದ ಕು: ಸೋನಾಲಿ, ಮನೋಜ್ ಹಾಗೂ ಸಿಂಚನಾ ಇವರುಗಳನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.
ಜೊತೆಗೆ ಇದೇ ಸಾಲಿನಲ್ಲಿ ತಮ್ಮ ಬೋಧನಾ ವಿಷಯದಲ್ಲಿ ಶೇ. 100 ಫಲಿತಾಂಶವನ್ನು ತಂದುಕೊಟ್ಟ ಕಾಲೇಜಿನ ಉಪನ್ಯಾಸಕರಾದ ವೀಣಾ, ನವೀನ್ ಕುಮಾರ್ ಇವರುಗಳನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರಾದ ಎಸ್. ಜೆ. ಸುಧಾ ಜೈನ್ ಅವರು ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿ ಅಭಿನಂದಿಸಿದರು.
ಹಾಗೂ ಶ್ರವಣ ಬೆಳಗೊಳದ ಕೂಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜದ ಅಧ್ಯಕ್ಷರೂ ಹಾಗೂ ಉದ್ಯಮಿಗಳು ಆಗಿರುವ ಮಹಾಲಕ್ಷ್ಮಿ ಪ್ರಮೋದ್ ಇವರು ಉಪನ್ಯಾಸಕರಿಗೆ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ: ಎಸ್. ದಿನೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದ್ದ ಎಸ್. ಎಸ್ .ಡಿ .ಜೆ .ಜೆ .ಪಿ ಸಂಘದ ಕಾರ್ಯದರ್ಶಿ ಪ್ರೊ: ಬಬನ್ .ಪಿ. ದತ್ತವಾಡೆ, ಹಾಗೂ ಎಸ್ .ಎಸ್. ಡಿ .ಜೆ .ಜೆ. ಪಿ ಸಂಘದ ಸದಸ್ಯರಾದ ಶ್ರೇಯಸ್ ಜೈನ್ ಹಾಗೂ ಹೇಮಂತ್ ಜೈನ್, ಮಹಾಲಕ್ಷ್ಮಿ ಪ್ರಮೋದ್, ಸುಧಾ ಜೈನ್, ಹಾಗೂ ಹಿರಿಯ ಉಪನ್ಯಾಸಕ ಎಂ.ಸಿ. ವಿಜಯಕುಮಾರ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ದಾನಿಗಳಾದ ಮಹಾಲಕ್ಷ್ಮಿ ಪ್ರಮೋದ್ ಹಾಗೂ ಸುಧಾ ಜೈನ್ ಇವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಪ್ರಮೋದ್ ಮತ್ತು ಸಿದ್ಧಾಂತ ಪ್ರಾರ್ಥಿಸಿದರೆ,ಉಪನ್ಯಾಸಕರಾದ ಚಿಕ್ಕ ದೇವೇಗೌಡ ಸ್ವಾಗತಿಸಿದರು.
ಉಪನ್ಯಾಸಕರಾದ ವೀಣಾ ಕಾರ್ಯಕ್ರಮವನ್ನು ನಿರೂಪಿಸಿದರೆ, ಉಪನ್ಯಾಸಕರಾದ ದೀಪ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ವೀಣಾ, ನಂಜುಂಡಸ್ವಾಮಿ ನವೀನ್ ಕುಮಾರ್ , ಚಿಕ್ಕ ದೇವೇಗೌಡ, ಆನಂದ್ , ಅನನ್ಯ, ದೀಪ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರಾದ ದೇವರಾಜ್, ಶಂಕರೇಗೌಡ, ಸುಶೀಲಮ್ಮ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.