ಹಾಸನ: ಬೀದಿ ನಾಯಿಗಳ ಹಿಡಿದು ಅದರ ಸಂತಾನ ಹರಣ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ ಆದರೇ ಹಿಡಿದು ಅದನ್ನು ನಗರದ ಹೊರವಲಯ ಕೈಗಾರಿಕ ಪ್ರದೇಶದಲ್ಲಿ ಇರಿಸಿದ್ದು, ಪ್ರತಿನಿತ್ಯ ನೀಡುವ ಆಹಾರವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಪ್ರಾಣಿದಯಾ ಸಂಘದ ಬಾಳ್ಳುಗೋಪಾಲ್, ಮಲೆನಾಡು ಕಿಶೋರ್, ಶೇಷೆಗೌಡ, ಶೇಷಮ್ಮ, ಸವಿತ, ಗಿರೀಶ್ ಇವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಪ್ರಾಣಿದಯಾ ಸಂಘದ ಬಾಳ್ಳುಗೋಪಾಲ್ ಮಾಧ್ಯಮದೊಂದಿಗೆ ಕರೆ ಮಾಡಿ ಮಾತನಾಡಿದ ಅವರು, ಕೆಲ ದಿನಗಳಿಂದ ನಗರಸಭೆಯು ಬೀದಿ ನಾಯಿಗಳನ್ನು ಹಿಡಿಯಲಾಗುತ್ತಿದ್ದು, ನಂತರದಲ್ಲಿ ನಗರದ ಸಮೀಪ ಇಂಡಸ್ಟ್ರೀಯಲ್ ಏರಿಯದಲ್ಲಿ ಇಡಲಾಗಿದೆ.

ಪ್ರಾಣಿ ದಯಾ ಸಂಘದಿಂದ ಈ ಬಗ್ಗೆ ನಾವುಗಳು ಪರಿಶೀಲನೆ ಮಾಡಲು ಬಂದಾಗ ನಾಯಿಗಳ ಸ್ಥಿತಿ ನೋಡಿ ಬೇಸರವಾಯಿತು. ಇಲ್ಲಿ ಸುಮಾರು ೨೫ ನಾಯಿಗಳಿದ್ದು, ಆದರೇ ೧೦ ನಾಯಿಗಳಿಗೆ ಆಗುವಷ್ಟು ಮಾತ್ರ ಫುಡ್ ಕೊಡಲಾಗುತ್ತಿದೆ. ಇನ್ನು ಬಿಸ್ಕೆಟ್ ಕೂಡ ಕೊಡುತ್ತಿಲ್ಲ. ಕೂಡಲೇ ವ್ಯವಸ್ಥೆ ಸರಿಪಡಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಕೊಡಲಾಗಿದೆ ಎಂದು ಹೇಳಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *