ಮುಖ್ಯರಸ್ತೆ ಮೇಲೆ ತಡರಾತ್ರಿ ಬಿದ್ದಿದ್ದ ಮರ ತೆರವುಗೊಳಿಸಿದ ಅಗ್ನಿಶಾಮಕ ಸಿಬ್ಬಂದಿಗಳು

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ-ಬಿಕ್ಕೋಡು ರಸ್ತೆಯ ವೆಂಕಟಿಪೇಟೆ ಬಳಿ ಬೃಹತ್ ಮರವೊಂದು ಶುಕ್ರವಾರ ರಾತ್ರಿ ಬೀಸಿದ ಭಾರಿ ಗಾಳಿಯಿಂದಾಗಿ ರಸ್ತೆ ಮೇಲೆ ಅಡ್ಡಲಾಗಿ ಬಿದ್ದಿದ್ದರಿಂದ ಗಂಟೆಗಳ ಕಾಲ ರಸ್ತೆ ಸಂಪರ್ಕ ಬಂದ್ ಆಗಿತ್ತು.

ಈ ಮಾರ್ಗವಾಗಿ ಸಂಚರಿಸುವ ಬಸ್ ಹಾಗೂ ಖಾಸಗಿ ವಾಹನಗಳು ಮಲ್ಲಾಪುರ-ಹಿರಿಗರ್ಜೆ ಮೂಲಕ ಅರೇಹಳ್ಳಿಗೆ ಸಂಚರಿಸಿದವು. ವಿಚಾರ ತಿಳಿದು ಸ್ಥಳಕ್ಕಾಗಿಸಿದ ತಾಲೂಕಿನ ಅಗ್ನಿಶಾಮಕ ಸಿಬ್ಬಂದಿಗಳು ಗಾಳಿ ಮಳೆಯನ್ನು ಲೆಕ್ಕಿಸದೆ ಆ ಕಗ್ಗತ್ತಿಲಿನಲ್ಲಿ ಅಗ್ನಿ ಶಾಮಕ ವಾಹನದ ಲೈಟ್ ಅನ್ನು ಬಳಸಿಕೊಂಡು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಮರಕೊಯ್ಯುವ ಯಂತ್ರದ ಮೂಲಕ ಕತ್ತರಿಸಿ ದಿಮ್ಮಿಗಳನ್ನು ಹಗ್ಗದಿಂದ ಕಷ್ಟಪಟ್ಟು ಎಳೆಯುವುದರ ಮುಖಾಂತರ ತೆರವುಗೊಳಿಸಿದರು.

ಈ ಮೂಲಕ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಕಾರ‍್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಮಚಂದ್ರಪ್ಪ, ಕೆ.ಪಿ ಕುಮಾರ ಸ್ವಾಮಿ, ಭಾಷಾ, ಆನಂದ, ಪುನೀತ್, ಸಂತೋಷ್ ಸೇರಿದಂತೆ ಹಲವರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *