ಸಕಲೇಶಪುರ : ತಾಲ್ಲೂಕಿನಲ್ಲಿ ನೆನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಳಗೋಡು ಹೋಬಳಿ ಉದೇವಾರ ಪಂಚಾಯಿತಿ ವ್ಯಾಪ್ತಿಯ ಕೆಸಗುಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಹಂಚುಗಳು ಸೋರಿದ್ದರಿಂದ ಕೊಠಡಿಯಲ್ಲಿ ಮಳೆ ನೀರು ಇದ್ದ ಕಾರಣ ಕೆಲ ಕಾಲ ವಿದ್ಯಾರ್ಥಿಗಳನ್ನು ಶಾಲೆಯ ಹೊರಗೆ ನಿಲ್ಲಿಸಿ SDMC ಅಧ್ಯಕ್ಷರಾದ ನಿಂಗರಾಜು ಹಾಗೂ ಉಪಾಧ್ಯಕ್ಷರಾದ ಪುನೀತ್ ರವರ ಸಹಾಯದಿಂದ ಹೊಸ ಹೆಂಚುಗಳನ್ನು ಜೋಡಿಸಿ ತರಗತಿಯನ್ನು ಪುನಃ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೆಡಿಎಸ್ ಮುಖಂಡರಾದ ದಿಲೀಪ್ ಕೆಸಗುಲಿ ರವರು ಮುಂದಿನ ದಿನಗಳಲ್ಲಿ ಶಾಲೆಯ ಕಟ್ಟಡ ರಿಪೇರಿ ಮಾಡದಿದ್ದಲ್ಲಿ ಮುಂದೆ ಸಂಭವಿಸುವ ಅನಾವುಥಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ, ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಈ ಶಾಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಶಾಲೆಯ ಕಟ್ಟಡ ನಿರ್ಮಾಣದ ಕಡೆ ಗಮನಹರಿಸಬೇಕೆಂದು ಮನವಿ ಮಾಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಮಮತಾ ರವರು ಹಾಗೂ ಸಹ ಶಿಕ್ಷಕರಾದ ರಘು ಮತ್ತು ರಮೇಶ್ ಅವರು ಉಪಸ್ಥಿತರಿದ್ದರು.