ಸಕಲೇಶಪುರ : ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದ ಏರಿ ಒಡೆದು ಹಾನುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆಕಾಡು ಗ್ರಾಮದಲ್ಲಿ ಕಳೆದ ವಾರವಷ್ಟೇ ನಾಟಿ ಮಾಡಿದ್ದ ರೈತರ ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು ಸುಮಾರು 40 ಎಕರೆಗಳಿಗೂ ಹೆಚ್ಚು ನಾಶವಾಗಿರುತ್ತದೆ
ಈ ಬಗ್ಗೆ ಮಾತನಾಡಿದ ನಾನು ಬಾಳು ಗ್ರಾಮ ಪಂಚಾಯಿತಿಯ ಸದಸ್ಯರು ಇದೇ ಗ್ರಾಮದ ರೈತರಾದ, ಗಿರೀಶ್ ಅವರೆಕಾಡು ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಬೆಲೆ ಲಭಿಸದೆ ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ ನಿರಂತರವಾಗಿ ಬೀಳುತ್ತಿರುವ ಅತಿಯಾದ ಮಳೆಯಿಂದ ಆಗುತ್ತಿರುವ ಅತಿವೃಷ್ಟಿಯು ರೈತರ ಆತ್ಮಸ್ಥೈರ್ಯವನ್ನು ಮತ್ತಷ್ಟು ಕುಗ್ಗಿಸಿದೆ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಿದ್ದಾರೆ
ರೈತರ ಜಮೀನಿಗೆ ಆಗುತ್ತಿದ್ದ ಹಾನಿಯನ್ನು ಸ್ವಲ್ಪಮಟ್ಟಿಗೆ ತಡೆಯಬಹುದಿತ್ತು ತಡೆಗೋಡೆ ನಿರ್ಮಿಸಲು ಕಳೆದ ಹಲವು ವರ್ಷಗಳಿಂದ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು ರೈತರ ಮನವಿಗೆ ಸ್ಪಂದಿಸಿರುವುದಿಲ್ಲ ಆದ್ದರಿಂದ ಈ ಕೂಡಲೇ ತಾಲೂಕು ಆಡಳಿತ ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ಗಮನ ಹರಿಸಿ ತಡೆಗೋಡೆ ನಿರ್ಮಾಣ ಮಾಡುವುದು ಹಾಗೂ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಹಣವನ್ನು ಕೊಡಬೇಕಾಗಿ ಮನವಿ ಮಾಡಿದರು
ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ಕೃಷ್ಣರವರು ಮಾತನಾಡಿ ಎರಡು ದಿನಗಳ ಹಿಂದೆ ನಾಟಿ ಬಿದ್ದವು ಅತಿಯಾದ ಮಳೆಯಿಂದಾಗಿ ಹಳ್ಳದ ನೀರು ನುಗ್ಗಿದ ಪರಿಣಾಮ ಭತ್ತದ ಬೆಳೆಯ ಜೊತೆಗೆ ಜಮೀನಿನ ಮೂಲ ಸ್ವರೂಪವು ಹಾಳಾಗಿದ್ದು ಅದುಗಳು ಒಡೆದು ಹಾಳಾಗಿದ್ದು ಜೊತೆಗೆ ಮರಳು ಮಣ್ಣು ಬಂದು ಶೇಖರಣೆಯಾಗಿರುವುದರಿಂದ ಜಮೀನನ್ನು ಮೂಲ ಸ್ವರೂಪಕ್ಕೆ ತರಲು ರೈತರು ಸಾಕಷ್ಟು ಹಣ ಮತ್ತು ಶ್ರಮವನ್ನು ಹಾಕಬೇಕಾಗಿರುವುದರಿಂದ ಸರ್ಕಾರ ರೈತರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದರು
ಹಾನುಬಾಳು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿಯಾದ ಯಶೋದಮ್ಮ ರವರು ಮಾತನಾಡಿ ಸುಮಾರು ಮೂರು ಎಕರೆ ನಾಟಿ ಮಾಡಿದ್ದು ನಾಟಿ ಮಾಡಿದ ಕಾರ್ಮಿಕರಿಗೆ ಇನ್ನು ಕೂಲಿ ಸಹ ಕೊಟ್ಟಿಲ್ಲ ಆಗಲೇ ಬೆಳೆ ಕೊಚ್ಚಿಹೋಗಿದೆ ಪ್ರತಿ ವರ್ಷವೂ ರೈತರ ಬದುಕು ಹೀಗಾಗುತ್ತಿದ್ದರು ಜಿಲ್ಲಾಡಳಿತ ತಾಲೂಕು ಆಡಳಿತ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಆದ್ದರಿಂದ ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಂಡು ರೈತರ ಬದುಕನ್ನು ಉಳಿಸಬೇಕಾಗಿ ಮನವಿ ಮಾಡಿದರು
ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಆಡಳಿತಕ್ಕೆ ವರದಿ ಸಲ್ಲಿಸಿರುತ್ತಾರೆ.