ಹಾಸನ : ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಅತಿಯಾದ ಮಳೆ, ಬಿರುಗಾಳಿ,ಶೀತ ವಾತಾವರಣದಿಂದ ಕಾಫಿ, ಕಾಳು ಮೆಣಸು ಅಡಿಕೆ ಮತ್ತು ಭತ್ತದ ಬೆಳೆಗಳಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸುತ್ತಿದ್ದು, ನಷ್ಟಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂದು ರಾತ್ರಿ 9 :30ಗಂಟೆಗೆ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಹಾಸನದ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಯಿತು.
ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾನ್ಯ ಜಿಲ್ಲಾಧಿಕಾರಿಗಳು ಕ್ರಮ ವಹಿಸುವುದಾಗಿ ತಿಳಿಸಿರುತ್ತಾರೆ. ಭೇಟಿಯಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಅಧ್ಯಕ್ಷರಾದ ಎ.ಎಸ್ ಪರಮೇಶ್ ರವರು , ಗೌರವ ಕಾರ್ಯದರ್ಶಿ ಕೆ ಬಿ ಲೋಹಿತ್ ರವರು, ಉಪಾಧ್ಯಕ್ಷರಾದ ಮಂಜುನಾಥ ಶೆಟ್ಟಿ ರವರು ಖಜಾಂಚಿಗಳಾದ ಎಂ ಜೆ ಸಚಿನ್ ರವರು, ನಿರ್ದೇಶಕರಾದ ಬಿಕ್ಕೋಡು ಚಂದ್ರಶೇಖರ್ ರವರು ಹೆಚ್ ಡಿ ಪಿ ಎ ಪಿ ಆರ್ ಎಫ್ ನ ಅಧ್ಯಕ್ಷರಾದ ಕೃಷ್ಣಮೂರ್ತಿಖಂಡಿಗೆ ರವರು, ಕಸಬಾ ಹೋಬಳಿ ಬೆಳೆಗಾರರ ಸಂಘದ ಖಜಾಂಚಿಗಳಾದ ಎನ್ ಡಿ ರಾಕೇಶ್ ರವರು, ಬೇಲೂರು ತಾಲೂಕು ಬೆಳಗಾರರ ಸಂಘದ ಅಧ್ಯಕ್ಷರಾದ ಅದ್ದೂರಿ ಎಂ ಕುಮಾರ್ ರವರು, ಹೆತ್ತೂರು ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷರಾದ ದೇವರಾಜ್ ರವರು, ಉಪಾಧ್ಯಕ್ಷರಾದ ಮಲ್ಲಪ್ಪ ರವರು, ಗೌರವ ಕಾರ್ಯದರ್ಶಿಗಳಾದ ಉದಯ್ ರವರು, ಖಜಾಂಚಿ ಮಧುರವರು ಹಾಜರಿದ್ದರು.