ಸಕಲೇಶಪುರ : ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಬಾಂಗ್ಲಾ ದೇಶದ ಮುಸ್ಲಿಮರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟಿರುವ ಅನುಶ್ರೀ ಮೇಲೆ ದೇಶದ್ರೋಹದ ಕೇಸ್ ದಾಖಲಿಸಬೇಕು ಮತ್ತು ಹಾಸನ ಜಿಲ್ಲೆಯ ವಕೀಲ ಸಂಘದವರಲ್ಲಿ ಮನವಿ ಯಾವ ಕಾರಣಕ್ಕೂ ಅನುಶ್ರೀ ಪರ ವಕಾಲತ್ತು ವಹಿಸಬಾರದು ಎಂದು ವಿನಂತಿಮಾಡುತ್ತ ಅಕ್ರಮವನ್ನು NIA ತನಿಖೆಗೆ ವಹಿಸಬೇಕು ಎಂದು ರಘು ಸಕಲೇಶಪುರ ವಿಶ್ವ ಹಿಂದೂ ಪರಿಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಆಗ್ರಹಿಸಿದ್ದಾರೆ.
ಹಾಸನ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಅಕ್ರಮವಾಗಿ ಬಾಂಗ್ಲಾ ಮುಸ್ಲಿಮರಿಗೆ ಆಧಾರ್ ಕಾರ್ಡ್ ಮಾಡಿ ಕೊಟ್ಟಿರುವ ಸುದ್ದಿ ಭಾರಿ ಆಘಾತಕಾರಿ ಸಂಗತಿಯಾಗಿದೆ.
ಕೇವಲ 2 ಸಾವಿರ 5 ಸಾವಿರ ರೂಪಾಯಿಗಳಿಗೆ ಯಾವದೇ ದಾಖಲೆ ಪಡಿಯದೇ ಬಾಂಗ್ಲಾ ಮುಸ್ಲಿಮರಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟಿರುವ ಅನುಶ್ರೀ ದೇಶದ್ರೋಹಿ ಆಗಿದ್ದು.ಇವಳ ಹಿಂದೆ ಯಾವ ಭಯೋತ್ಪದಕ ಹಿನ್ನಲೆ ಉಳ್ಳವರು ಇದ್ದಾರೆ. ಎಂಬುದಾಗಿ ತನಿಖೆಗೆ ಆದೇಶಿಸಬೇಕು.
ಹಾಸನ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣ ಅಕ್ರಮ ಆಧಾರ್ ಕಾರ್ಡ್ ದಂಧೆಯಲ್ಲಿ ತೊಡಗಿದ್ದ ಅನುಶ್ರೀ ಮಾಡಿರುವ ಎಲ್ಲ ಆಧಾರ್ ಕಾರ್ಡ್ ಪರಿಶೀಲಿಸಿ ಎಲ್ಲಾ ಅಕ್ರಮ ಬಾಂಗ್ಲಾ ನುಸುಳುಕೋರರನ್ನ ಪತ್ತೆಹಚ್ಚಿ ಬಾಂಗ್ಲಾಕ್ಕೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ವಕೀಲ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಮತ್ತು ವಕೀಲರಿಗೆ ಮನವಿ ಮಾಡುತ್ತ ದೇಶದ್ರೋಹಿ ಅನುಶ್ರೀ ಪರವಾಗಿ ವಕಾಲತ್ತು ವಹಿಸಬಾರದು ಎಂದು ರಘು ಸಕಲೇಶಪುರ ವಿನಂತಿ ಮಾಡಿದ್ದಾರೆ.
ಅಕ್ರಮ ಆಧಾರ್ ಕಾರ್ಡ್ ಮಾಡಿ ಬಾಂಗ್ಲಾದಿಂದ ಒಳನುಸುಳಿರುವ ಮುಸ್ಲಿಮರಿಗೆ ಬಾಂಗ್ಲಾದಲ್ಲಿ ಆಗಿರುವ ಅರಾಜುಕಥೆಯ ನಡೆವೆಯೂ ಆಧಾರ್ ಕಾರ್ಡ್ ಮಾಡಿಕೊಟ್ಟಿರುವ ಹಿಂದೆ ಆಧಾರ್ ಕಾರ್ಡ್ ಜಿಹಾದ್ ಕೈವಾಡವಿದ್ದು ಇದರ ಬಗ್ಗೆ ವ್ಯಾಪಕವಾದ ತನಿಖೆ ಆಗಬೇಕಿದ್ದು ಸಂಪೂರ್ಣ ತನಿಖೆಯನ್ನ NIA ಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಕಲೇಶಪುರದಲ್ಲಿ ಇರುವ ಅಕ್ರಮ ಬಾಂಗ್ಲಾ ಮುಸ್ಲಿಮರನ್ನ ತಕ್ಷಣ ಬಾಂಗ್ಲಾಕ್ಕೆ ಗಡಿಪಾರು ಮಾಡಬೇಕು ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡುತ್ತೇವೆ.
ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದ್ದಿಗಳಿಗೆ ಪ್ರಮುಖ ಆಯಕಟ್ಟಿನ ಹುದ್ದೆ ನೀಡಬಾರದು ಎಂದು ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.