ಹಾಸನ: ಸೆ,19:ಡ್ರಗ್ಸ್ ದಂಧೆ ಬಹಳ ಪ್ರಭಲವಾಗಿ ನಡೆಯುತ್ತಿರುವ ಸಕಲೇಶಪುರದಲ್ಲಿ ಕೆಲವು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ರವರಿಗೆ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ನಿಯೋಗ ಮನವಿಸಲ್ಲಿಸಿದರು.

ಅಮಲು ಮುಕ್ತ ಭಾರತದ ಆಂದೋಲನ ದೇಶಧ್ಯಾಂತ ನಡೆಯುತ್ತಿದ್ದು ಇದಕ್ಕೆ ಪೂರಕವಾಗಿ ಸಕಲೇಶಪುರದಲ್ಲಿ ಚಾಲನೆ ನೀಡಲಾಗಿದ್ದು ಹಲವಾರು ಕಾರ್ಯಕ್ರಮಗಳನ್ನ ಈಗಾಗಲೇ ಹಮ್ಮಿಕೊಳ್ಳಲಾಗಿದೆ.

ಸಕಲೇಶಪುರದಲ್ಲಿ ಡ್ರಗ್ಸ್ ದಂಧೆ ಬಹಳ ಪ್ರಭಲವಾಗಿ ನಡೆಯುತ್ತಿದೆ, ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯ ಸಹಕಾರ ನಿಡುತ್ತಿದೆ ಅನೇಕ ಪ್ರಕರಣ ದಾಖಲಿಸಿದ್ದಾರೆ ಇನ್ನಷ್ಟು ಕ್ರಮದ ಅಗತ್ಯವಾಗಿದೆ.

ಸಕಲೇಶಪುರ ತಾಲೂಕಿಗೆ ಸಂಬಂಧಿಸಿಂತೆ ಡ್ರಗ್ಸ್ ದಂದೆ ವಿರುದ್ಧ ದಿನದ 24 ಗಂಟೆ ಕಾರ್ಯನಿರ್ವಹಿಸಲು ವಿಶೇಷ ಪಡೆಯನ್ನು ರಚಿಸಬೇಕಾಗಿ, ಜೊತೆಗೆ ಡ್ರಗ್ಸ್ ದಂದೆಕೋರರ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಣೆಗೆ ಸಹಾಯವಾಣಿ ತೆರಯುವುದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಕರು ಡ್ರಗ್ಸ್ ದಂದೆಗೆ ಸಂಬಂಧದ ಮಾಹಿತಿ ನೀಡಿದ ವ್ಯಕ್ತಿಗಳ ವಿಚಾರಣೆಯನ್ನು ನಡೆಸಬೇಕಾಗಿ ಮನವಿ ಮಾಡಿದರು

ಸಕಲೇಶಪುರ ಅಲೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ನೇತೃತ್ವದ ನಿಯೋಗದಲ್ಲಿ ಹಿರಿಯ ಹೋರಾಟಗಾರ ನಾರಾಯಣ ಆಡುವ ನಾಗರಿಕ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಹಿರಿಯ ಪತ್ರಕರ್ತರಾದ ಸಾ ಸು ವಿಶ್ವನಾಥ್, ಮಲ್ನಾಡ್ ಮೆಹಬೂಬ್ ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *