ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಹದಿನೆಂಟು ಸೆಪ್ಟಂಬರ್ ಬುಧವಾರದಂದು ಬೀಜೋಪಚಾರ ಆಂದೋಲನ ಹಾಗೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಸನ್ನ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಅರಕಲಗೂಡು, ಡಾ.ಶಿವಶಂಕರ್ ಕೃಷಿ ವಿಜ್ಞಾನ ಕೇಂದ್ರ ಕಂದಲಿ, ಡಾ.ಪ್ರಮೋದ್ ಜಿ ಸಹಾಯಕ ಪ್ರಾಧ್ಯಾಪಕರು ಬೇಸಾಯ ಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ,ಡಾ.ಸುನಿತಾ ಟಿ ಆರ್ ಸಹಾಯಕ ಪ್ರಾಧ್ಯಾಪಕರು ಕೀಟಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ, ಮೋಹನ್ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ದುದ್ದ ಆಗಮಿಸಿದ್ದರು.

ಬೀಜೋಪಚಾರ ಮಾಡುವುದು ಹೇಗೆ,ಅದರಿಂದಾಗುವ ಉಪಯೋಗಗಳೇನು, ಅದರ ವಿಧಾನದ ಬಗ್ಗೆ ಡಾ.ಪ್ರಮೋದ್ ಜಿ ಸಹಾಯಕ ಪ್ರಾಧ್ಯಾಪಕರು ಬೇಸಾಯ ಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಇವರು ವಿವರಣೆ ನೀಡಿದರು.

ಹಾಗೂ ಡಾ.ಸುನಿತಾ ಟಿ ಆರ್ ಸಹಾಯಕ ಪ್ರಾಧ್ಯಾಪಕರು ಕೀಟಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಇವರು ಕೀಟನಾಶಕಗಳನ್ನು ಸಿಂಪರಣೆ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಸ್ತಾರವಾಗಿ ಗ್ರಾಮಸ್ತರಿಗೆ ಮನಮುಟ್ಟುವ ಹಾಗೆ ಅರ್ಥೈಸಿದರು.

ಹಾಗೂ ವರುಣ್ ಕುಮಾರ್ ಬಿ ಎ ಎಸ್ ಎಫ್ ಕಂಪನಿಯವರು ಹೊಲಗಳಲ್ಲಿ ಕೀಟನಾಶಕಗಳ ಸಿಂಪರಣೆ ಮಾಡುವಾಗ ಧರಿಸಬೇಕಾದ ವಸ್ತ್ರಗಳನ್ನು ತೋರಿಸಿಕೊಟ್ಟರು.

ನಂತರದಲ್ಲಿ ಡಾ.ಶಿವಶಂಕರ್ ಕೃಷಿ ವಿಜ್ಞಾನ ಕೇಂದ್ರ ,ಕಂದಲಿ ಇವರು ಕೆ.ಹೊಸಹಳ್ಳಿ ದತ್ತು ಗ್ರಾಮವಾಗಿದ್ದು ಈ ಊರಿನ ರೈತರಿಗೆ ರಾಗಿ,ಉರುಳಿಕಾಳು,ತೊಗರಿ ಹಾಗೂ ಅಲಸಂದೆ ಬೀಜಗಳನ್ನು ವಿತರಿಸಿ ಬೆಳೆಗಳನ್ನು ಉತ್ತಮವಾದ ಇಳುವರಿಯನ್ನು ತೆಗೆದುಕೊಳ್ಳಬೇಕು ಎಂಬುದು ಇವರ ಉದ್ದೇಶವಾಗಿತ್ತು. ಹಾಗೂ ಈ ಕಾರ್ಯಕ್ರಮದಲ್ಲಿ ಕೃಷಿ ಸಖಿಯರಿಬ್ಬರು ಬೀಜೋಪಚಾರ ಪದ್ದತಿ ಪ್ರಾತ್ಯಕ್ಷಿಕೆಯನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.

ದತ್ತು ಗ್ರಾಮವಾದ ಕೆ.ಹೊಸಹಳ್ಳಿ ಉದ್ಧಾರವೇ ಇವರೆಲ್ಲರ ಉದ್ದೇಶವಾಗಿದ್ದು ,ಇವರೆಲ್ಲರ ಸಮ್ಮುಖದಲ್ಲಿ ಹಾಗೂ ಊರಿನ ಎಲ್ಲಾ ರೈತರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *