ಸಕಲೇಶಪುರ : ಸಕಲೇಶಪುರ ಜೇನು ಪೋಷಕರ ಸಹಕಾರ ಸಂಘ 2023-24 ಸಾಲಿನಲ್ಲಿ ಒಟ್ಟು 3156425.00 ರೂಪಾಯಿಗಳ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಸಿ.ಸುರೇಂದ್ರ ತಿಳಿಸಿದರು.

ಸೆಪ್ಟೆಂಬರ್ 17 ರಂದು ಪಟ್ಟಣದ ಒಕ್ಕಲಿಗರ ಸಮುದಾಯಭವನದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ಈ ಸಾಧನೆಗೆ ಆಡಳಿತ ಮಂಡಳಿಯ,ಸದಸ್ಯರುಗಳ ಮತ್ತು ಸಿಬ್ಬಂದಿ ವರ್ಗದ ಸಹಕಾರವೇ ಕಾರಣ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವೆ ಎಂದರು.

ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಘದ ಇಂದಿನ ಸಾಧನೆಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ದಿ. ಎಸ್. ಬಿ. ಅಣ್ಣೆಗೌಡರವರ ಕೊಡುಗೆ ಎಂದಿಗೂ ಅವಿಸ್ಮರಣೀಯ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಂಘ ಸಾಗಿದೆ ಎಂದು ಶ್ಲಾಘಿಸಿದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಮಾತನಾಡಿ ಕೇಂದ್ರ ಸರ್ಕಾರ ಕಾಫಿ ಮಂಡಳಿಗೆ 307 ಕೋಟಿ ರೂಪಾಯಿ ಸಹಾಯಧನ ಬಿಡುಗಡೆ ಮಾಡಿದೆ. ಕಾಫಿ ಬೆಳೆಗಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಆಡಳಿತ ಮಂಡಳಿ ವಾರ್ಷಿಕ ವರದಿಯನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್. ಸತೀಶ್ ಸಭೆಯಲ್ಲಿ ಮಂಡಿಸಿದರು.

ಸಭೆಯಲ್ಲಿ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜೆ. ದಿನೇಶ್, ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್‌ನ ಸಾಗರಿಕ ಎಂ.ಪಿ. ಲಕ್ಷ್ಮಣ ಗೌಡ,ಪರಿಸರ ಪ್ರೇಮಿ ಇತಿಹಾಸ್ ಮತ್ತು ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿವಣ್ಣ ಅವರುಗಳನ್ನು ಸನ್ಮಾನಿಸಲಾಯಿತು.

ಮಾಜಿ ಅಧ್ಯಕ್ಷ ಜೈ ಮಾರುತಿ ದೇವರಾಜ್ ಸ್ವಾಗತಿಸಿದರು, ಎನ್.ಕೆ. ವಿಕ್ರಮ್ ವಂದನಾರ್ಪಣೆ ಮಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಎಸ್.ಬಿ. ಕೃಷ್ಣೆಗೌಡ, ನಿರ್ದೇಶಕರುಗಳಾದ ಶ್ರೀ ಎಂ.ಆರ್. ಪ್ರಮೋದ್ ಕುಮಾರ್, ಕೆ.ಪಿ. ಶಶಿಶೇಖರ್, ತುಳಸಿ ಪ್ರಸಾದ್, ಎಂ.ಎಲ್. ಬಸವರಾಜ್, ಜೆ.ಎಸ್. ಈರಯ್ಯ, ಯು.ಎಂ. ಜಯರಾಮ್, ಬಿ.ಬಿ. ಸುಂದರಮ್ಮ, ಶ್ರೀಮತಿ ಲತಾ ಬಸವರಾಜ್, ಎಂ. ಆರ್. ಉದಯ್ ಕುಮಾರ್, ಬಿ.ಎಲ್. ಉಪೇಂದ್ರ, ಬಿ.ಪಿ. ನಾಗೇಶ್ ರವರು ಉಪಸ್ಥಿತರಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *