ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಬಿಟೆಕ್ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ತೆಂಗಿನ ಮರದ ರೋಗಗಳ ನಿರ್ವಹಣೆ ಮತ್ತು ಜೈವಿಕ ಪೀಡೆನಾಶಕಗಳ ಮಹತ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಚೆನ್ನಕೇಶವ ಸಿ ಸಹಾಯಕ ಪ್ರಾಧ್ಯಾಪಕರು ಸಸ್ಯರೋಗ ಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ,ಹಾಸನ ಇವರು ಆಗಮಿಸಿದ್ದರು.ಹಾಗೂ ಡಾ.ಶಿವಶಂಕರ್ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ,ಕಂದಲಿ ಇವರು ಆಗಮಿಸಿದ್ದರು.
ಕೃಷಿ ವಿದ್ಯಾರ್ಥಿಗಳು ಮೊದಲಿಗೆ ತೆಂಗಿನ ಮರದಲ್ಲಿ ಕಂಡುಬರುವ ಪ್ರಮುಖ ರೋಗಗಳಾದ ಕಾಂಡ ಸೋರುವ ರೋಗ,ಅಣಬೆ ರೋಗ ಮತ್ತು ಎಲೆಚುಕ್ಕಿ ರೋಗ ಇವುಗಳು ಯಾವ ರೀತಿಯಾಗಿ ಹರಡುತ್ತವೆ,ಮತ್ತು ಏಕೆ ರೋಗಗಳು ಬರುತ್ತದೆ ಹಾಗೂ ಈ ರೋಗಗಳನ್ನು ನಿರ್ವಹಣೆ ಮಾಡುವುದರ ಬಗ್ಗೆ ತಿಳಿಸಿದರು.
ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ.ಚೆನ್ನಕೇಶವ ಸಿ ಇವರು ಕಾರ್ಯಕ್ರಮದ ಕುರಿತು ರೈತರಿಗೆ ಸುಲಭವಾಗಿ ಅರ್ಥೈಸಿದರು.
ಇವರು ರೈತರಿಗೆ ರೋಗಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳೇನು ಮತ್ತು ವಿಧಾನಗಳ ಬಗ್ಗೆ ತಿಳಿಸಿದರು.ನಂತರದಲ್ಲಿ ಜೈವಿಕ ಪೀಡೆನಾಶಕಗಳ ಮಹತ್ವದ ಕುರಿತು ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ರೈತರಿಗೆ ತಿಳಿಸಿದರು .ಹಾಗೂ ಜೈವಿಕ ಪೀಡೆನಾಶಕಗಳ ಉಪಯೋಗಗಳು ಮತ್ತು ರಾಸಾಯನಿಕಗಳಿಂದ ಇವುಗಳು ಯಾವ ರೀತಿಯಾಗಿ ಲಾಭದಾಯಕವಾಗಿವೆ ಎಂಬುದನ್ನು ವ್ಯತ್ಯಾಸದ ರೂಪದಲ್ಲಿ ತಿಳಿಸಿದರು.
ಮತ್ತು ಜೈವಿಕ ಪೀಡೆನಾಶಕಗಳ ಬಳಕೆಯ ಕ್ರಮಗಳು,ಪರಿಣಾಮಗಳು,ಮತ್ತು ನಿಯಮಗಳ ಬಗ್ಗೆ ತಿಳಿಸಿದರು.ನಂತರದಲ್ಲಿ ಡಾ.ಶಿವಶಂಕರ್ ಇವರು ರೈತಮಹಿಳೆಯರಿಗೆ ತರಕಾರಿ ಬೀಜಗಳನ್ನು ಪೌಷ್ಟಿಕ ಕೈ ತೋಟ ಮಾಡಲು ನೀಡಿ ಪ್ರೋತ್ಸಾಹ ಮಾಡಿದರು .
ಈ ಕಾರ್ಯಕ್ರಮವು ಎಲ್ಲರ ಸಮ್ಮುಖದಲ್ಲಿ ಯಶಸ್ವಿಯಾಯಿತು.