ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ (ರಿ ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ 10ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹೆತ್ತೂರಿನ ಕಾಫಿ ಬೆಳಗಾರರದ ಹೆಚ್.ಈ ಕೃಷ್ಣಮೂರ್ತಿ (ಗೋಪಾಲಣ್ಣ ) ಹಾಗೂ ರತ್ನಮ್ಮ ದಂಪತಿಯ ಮಗನಾದ ಆದರ್ಶ ಅವರಿಗೆ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ್ದರಿಂದ ಇವರ ಸೇವೆಯನ್ನು ಗುರುತಿಸಿ ವೇದಿಕೆಯಲ್ಲಿ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಸನ್ಮಾನಿಸಲಾಯಿತು.
ಆದರ್ಶ ಅವರು ತಮ್ಮ ಬಿಕಾಂ ವಿದ್ಯಾಭ್ಯಾಸವನ್ನು ಮುಗಿಸಿ ಮೈಸೂರಿನ ಲ್ಯಾಂಡ್ ಮಾರ್ಕ್ ವೆಚ್ಚರ್ಸ್ ಕಂಪನಿಯಲ್ಲಿ ಸಿವಿಲ್ ಕಂಟ್ರಕ್ಷನ್ ನಲ್ಲಿ ಉದ್ಯೋಗ ಮಾಡುತ್ತಿದ್ದು, ಮೈಸೂರಿನಲ್ಲಿ ನಡೆದ 10ನೇ ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಾಮಿಯಾನ , 500 ಲೀಟರ್ ಹಾಲು 1500 ಕಾಫಿ ಸೇರಿದಂತೆ ಕಾರ್ಯಕ್ರಮಕ್ಕೆ ಬಂದ ಬೆಳೆಗಾರರಿಗೆ ಊಟದ ವ್ಯವಸ್ಥೆಯನ್ನು ಹಾಗೂ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ಹಣ ಸಹಾಯವನ್ನು ಮಾಡುವವರನ್ನು ಗುರುತಿಸಿ ಕಾರ್ಯಕ್ರಮಕ್ಕೆ ಹಣ ಸಂಗ್ರಹ ಮಾಡುವ ನೆಟ್ಟಿನಲ್ಲಿ ಉತ್ತಮ ನಿಸ್ವಾರ್ಥ ಸೇವೆಯನ್ನು ಮಾಡಿದ್ದರು.
ಇವರನ್ನು ಗುರುತಿಸಿ ಸನ್ಮಾನ ಮಾಡಿದ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘಕ್ಕೆ ಈ ಸಂದರ್ಭದಲ್ಲಿ ಆದರ್ಶ ಅವರು ಧನ್ಯವಾದ ತಿಳಿಸಿದರು.