ಸಕಲೇಶಪುರ : ಕರ್ನಾಟಕ ರಾಜ್ಯದ ವಕ್ಫ್ ಅಲ್ಪಸಂಖ್ಯಾತ ಹಾಗು ವಸತಿ ಸಚಿವರಾದ ಝಮೀರ್ ಅಹಮದ್ ಅವರು ಹುಬ್ಬಳ್ಳಿಯಲ್ಲಿ ಸರ್ಕಾರಿ ವಕ್ಫ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಿಂತು ಭಾಷಣ ಮಾಡುತ್ತಿರುವಾಗ ಉರ್ದು ಭಾಷೆಯಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡುತ್ತ ದೇವರಾದ ಅಲ್ಲಹ ನಮಗೆ ನೀಡಿರುವ ಜಮೀನನ್ನು ಹಸಿರು ಬಣ್ಣವನ್ನು ಬಳಿದು ಶೈತಾನಗಳು ಬರಲು ಹೆದರಬೇಕು ಎಂದು ಹಿಂದೂಗಳನ್ನ ಅತ್ಯಂತ ಕೀಳಾಗಿ ಮಾತನಾಡಿ ಹಿಂದೂಗಳ ಭಾವನೆಗೆ ಧಕ್ಕೆ ತಂದು ರೈತರ ಜಮೀನನ್ನು ವಕ್ಫ್ ಬೋರ್ಡ್ ಗೆ ಸೇರಿದ್ದು, ಎಂದು ನಮೂದಿಸಿದ್ದು ಆತಂಕಕಾರಿ ಬೆಳವಣಿಗೆ ಎಂದು ದೂರು ನೀಡಿದ್ದಾರೆ.
ಜಮೀರ್ ಅಹಮದ್ ಕರ್ನಾಟಕ ಸರ್ಕಾರದ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಪ್ರಾಮಾಣಿಕವಾಗಿ, ಪಾರದರ್ಶಕತೆ ಹಾಗು ಯಾವುದೇ ದ್ವೇಷ ಭಾವನೆಯಿಂದ ಕರ್ತವ್ಯ ನಿರ್ವಹಿಸುವುದಿಲ್ಲ ಎಂದು ಪ್ರಮಾಣ ಮಾಡಿ ವಕ್ಫ್ ಅಸ್ತಿ ವಿಚಾರ ಬಂದಾಗ ಹಿಂದೂಗಳ ವಿರುದ್ಧ ಅತ್ಯಂತ ಕೀಳಾಗಿ ಮತ್ತು ಕೋಪದಿಂದ ಹಲ್ಲು ಕಡಿದುಕೊಂಡು ಮಾತನಾಡಿ ಅಲ್ಲಾನಿಗೆ ನಾವು ಲೆಕ್ಕ ಕೊಡಬೇಕು ಹಾಗಾಗಿ ವಕ್ಫ್ ಅಸ್ತಿ ಎಂದು ಪಹಣಿಯಲ್ಲಿ ನಮೂದಾಗಿರುವ ಯಾವ ಜಮೀನನ್ನು ಬಿಡಬಾರದು ಎಂದು ಸಮಾಜದ ಸ್ವಾಸ್ಥ್ಯ ಕದಡುವ ರೀತಿ ಮಾತನಾಡಿ ಶಾಂತಿ ಬಂಗ ಮಾಡಲು ಪ್ರಚೋದನೆ ನೀಡಿರುವ ಮಂತ್ರಿ ಮೇಲೆ ದೂರು ದಾಖಲಿಸಿದ್ದಾರೆ.
ಬಡ ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿರುವ ಜಮೀರ್ ಅಹಮದ್ ಖಾನ್ ಝಮೀರ್ ಅಹಮದ್ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಪ್ರಚೋದನೆ ಮಾಡಿದಲ್ಲದೆ ಅಮಾಯಕ ರೈತರ ಹೆಸರಿನಲ್ಲಿ ನೂರಾರು ವರ್ಷದಿಂದ ಇರುವ ಜಮೀನನ್ನು ವಕ್ಫ್ ಸಂಸ್ಥೆಗೆ ಸೇರಿದೆ ಎಂದು ಪಹಣಿಯ ಕಲಾಂ 11 ರಲ್ಲಿ ಝಮೀರ್ ಅಹಮದ್ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಕ್ಫ್ ಎಂದು ನಮೂದಿಸುವಂತೆ ಬೆದರಿಕೆ ಹಾಕಿರೋದು ಅಧಿಕಾರಿಗಳು ರೈತರ ಜಮೀನನ್ನು ವಕ್ಫ್ ಸಂಸ್ಥೆಗೆ ಸೇರಿಸಿರೋದು ಆತಂಕಕಾರಿ ಬೆಳವಣಿಗೆಯಾಗಿದ್ದು ರೈತರು ಭಯದ ವಾತಾವರಣದಲ್ಲಿ ಬದುಕಿ ಕಣ್ಣೀರಲ್ಲಿ ಬದುಕು ದೂಡುವ ರೀತಿ ಹೈರಾಣು ಮಾಡಿದ್ದಾರೆ ಝಮೀರ್ ಅಹಮದ್
ಝಮೀರ್ ಅಹಮದ್ ತಾನೊಬ್ಬ ರಾಜ್ಯದ ಮಂತ್ರಿ ಎಂಬುದನ್ನ ಮರೆತು ಒಂದು ಕೋಮಿಗೆ ಸಂಬಂಧಪಟ್ಟ ಮುಸ್ಲಿಂ ಮುಖಂಡನ ರೀತಿ ವರ್ತನೆ ಮಾಡಿ ದೇವರು ಅಲ್ಲಾಗೆ ಲೆಕ್ಕ ಕೊಡಬೇಕು ನೀನು ವಕ್ಫ್ ಬೋರ್ಡ್ ಗೆ ಎಷ್ಟು ಅಸ್ತಿ ಮಾಡಿ ಕೊಟ್ಟಿದ್ದೀಯ ಎಂದು ಹಾಗಾಗಿ ಸಿಕ್ಕ ಸಿಕ್ಕ ಅಸ್ತಿ,ಮಠಗಳು, ದೇವಸ್ಥಾನಗಳು, ಶಾಲೆಗಳು, ಸಂರಕ್ಷಿತ ಪುರಾತತ್ವ ಇಲಾಖೆ ಆಸ್ತಿಗಳನ್ನ ಮುಸ್ಲಿಮರು ವಕ್ಫ್ ಬೋರ್ಡ್ ಗೆ ಸೇರಿದೆ ಎಂದು ವಾದ ಮಾಡಿ ದಾಖಲೆ ಬದಲಾಯಿಸುತ್ತಿರೋದು ಕೋಮು ಪ್ರಚೋದನೆಗೆ ಕಾರಣವಾಗುತ್ತಿದೆ ಝಮೀರ್ ಅಹಮದ್ ಹೇಳಿಕೆಯಿಂದ ಕೋಮುಗಲಭೆ ಆಗುವ ಎಲ್ಲ ಸಾಧ್ಯತೆಗಳಿದ್ದು ಆದ್ದರಿಂದ ಪ್ರಚೋದನಕಾರಿ ಹೇಳಿಕೆ ಮತ್ತು ಭಾಷಣ ಮಾಡಿರುವ ಝಮೀರ್ ಅಹಮದ್ ಮಾನ್ಯ ವಕ್ಫ್ ಮಂತ್ರಿ ಕರ್ನಾಟಕ ರಾಜ್ಯ ಇವರ ವಿರುದ್ಧ FIR ದಾಖಲಿಸಿ ಬಂಧನ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಂಡು ನನಗೆ ಮತ್ತು ಹಿಂದೂ ಸಮಾಜಕ್ಕೆ ರೈತರಿಗೆ ನ್ಯಾಯ ಒದಗಿಸಿ ನಮಗೆ ಆಗಿರುವ ನೋವನ್ನು ಕಡಿಮೆ ಮಾಡಬೇಕು ಎಂದು ದೂರನ್ನು ಹಿಂದೂ ಮುಖಂಡ ರಘು ಸಕಲೇಶಪುರ ನೀಡಿದ್ದಾರೆ.