ಸಕಲೇಶಪುರ :- ಯಸಳೂರು ಹೋಬಳಿ ಬೆಳೆಗಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರಾದ ಡಾ.ಎಂ. ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಯಸಳೂರು ಶ್ರೀ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜಿ ದಿನೇಶ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ” ಕಾಫಿಗೆ ಬೆಲೆ ಬಂದಿದೆ ಅದನ್ನು ಉಳಿಸಿಕೊಂಡು ಹೋಗುವ ಜೊತೆಗೆ ಆರ್ಥಿಕವಾಗಿ ಸದೃಢವಾಗುವ ಜವಾಬ್ದಾರಿ ಕಾಫಿ ಬೆಳೆಗಾರರ ನಮ್ಮೆಲ್ಲರ ಮೇಲಿದೆ.
ಈ ಭಾಗದ ಬೆಳೆಗಾರರು ಪ್ರಕೃತಿ ವಿಕೋಪಗಳಿಂದ ಹಿಡಿದು ಕಾಡು ಪ್ರಾಣಿಗಳು, ಕಾರ್ಮಿಕರು ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕೂಡ ದೇಶದ ಆದಾಯಕ್ಕೆ ದೊಡ್ಡ ಮಟ್ಟದ ಕೊಡಗೆಯನ್ನು ಕೊಟ್ಟಿದ್ದಿವಿ.
ಬೆಳೆಗಾರರು ಕಾಫಿ ಕುಷಿಯಲ್ಲಿ ಅಧಿಕ ಆದಾಯ ತರುವ ನಿಟ್ಟಿನಲ್ಲಿ ಮಣ್ಣು ಪರೀಕ್ಷೆ ಸೇರಿದಂತೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು. ಎಂದು ಹೇಳಿದರು.
ಕರ್ನಾಟಕ ಗ್ರೋವರ್ಸ್ ಫೆಡರೇಷನ್ (ರಿ ) ಅಧ್ಯಕ್ಷರಾದ ಎಚ್. ಟಿ ಮೋಹನ್ ಕುಮಾರ್ ಮಾತನಾಡುತ್ತಾ “ಕಾಫಿ ಬೆಳಗಾರರ ಸಂಘಗಳ ಹೋರಾಟದಿಂದ ಬೆಳೆಗಾರರಿಗೆ ಆಗುವ ಅನುಕೂಲತೆಗಳ ಬಗ್ಗೆ ಮತ್ತು ಒತ್ತುವರಿ ಭೂಮಿಯನ್ನು ಸಾಗುವಳಿ ಮಾಡಲು ಸರ್ಕಾರದಿಂದ ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳುವ ಬಗ್ಗೆ ವಿವರಣೆ ನೀಡಿದರು.ಹಾಗೂ ಬೆಳೆಗಾರರಿಗೆ ಸರ್ಕಾರದ ಮಟ್ಟದಲ್ಲಿ ಸಿಗುವ ಸೌಲಭ್ಯ ಸವಲತ್ತುಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಬೆಳೆಗಾರರ ಸಂಘವು ಕೆಲಸ ಮಾಡುತಿದೆ ಮಾಡುತ್ತೀದೆ. ಬೆಳೆಗಾರರ ಸಂಘದ ಬಲಿಷ್ಠವಾದಂತೆ ಬೆಳೆಗಾರರಿಗೆ ಏನೆಲ್ಲ ಪ್ರಯೋಜನಗಳು ಸಿಗುತ್ತವೆ ಎಂಬಲ್ಲ ಮಾಹಿತಿಯನ್ನು ಸಮಗ್ರವಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಾಸನ ಜಿಲ್ಲಾ ಪ್ಲಾಂಟರ್ಸ ಸಂಘದ ಮಾಜಿ ಅಧ್ಯಕ್ಷರಾದ ಕೆ. ಏನ್ ಸುಬ್ರಮಣ್ಯ ಮಾತನಾಡುತ್ತಾ ” ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಅಡಿಯಲ್ಲಿ ಬರುವ ಎಲ್ಲಾ ಸಂಘಗಳು ಎರಡು ವರ್ಷದಲ್ಲಿ ಮಾಸಿಕ ಸಭೆಗಳು ಹಾಗೂ ಸಾಮಾನ್ಯ ಸಭೆಗಳನ್ನು ಮಾಡಬೇಕು ಇದರಿಂದ ಸಂಘವು ಬಲಿಷ್ಠವಾಗಿ ಬೆಳೆಯುತ್ತದೆ. ಸಂಘದಲ್ಲಿ ಶಿಸ್ತು ಮುಖ್ಯವಾಗಿರಬೇಕು. ಬೆಳೆಗಾರರ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಳ್ಳುವುದರ ಜೊತೆಗೆ ಸಂಘವನ್ನು ಬಲಿಷ್ಠ ಮಾಡಬೇಕು. ಅಲ್ಲದೆ ಸಂಘದ ಹಿತ ದೃಷ್ಟಿಯಿಂದ ಸಂಘದವರು ಧನ ಸಹಾಯ ಕೇಳಿದಾಗ ಹಿಂದೆ ಮುಂದೆ ಯೋಚಿಸದೆ ದಾನಿಗಳೇನಿಸಿಕೊಳ್ಳಬೇಕು. ಕಾರಣ ಈ ಬೆಳೆಗಾರರ ಸಂಘ ಇರುವುದು ಬೆಳೆಗಾರರ ಹಿತದೃಷ್ಟಿಗೋಸ್ಕರ ಎಂದು ಕರೆ ನೀಡಿದರು.
ನಂತರ ಮಾತನಾಡಿದ ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಅಧ್ಯಕ್ಷರಾದ ಎ. ಎಸ್ ಪರಮೇಶ್ ” ಹಾಸನ ಜಿಲ್ಲಾ ಬೆಳೆಗಾರರ ಸಂಘ ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲಿ ಯಸಳೂರು ಬೆಳಗಾರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕೊಡಗೆ ಅಪಾರವಾಗಿದ್ದು. ಇದೇ ರೀತಿ ಮುಂದು ಕೂಡ ಸಂಘದ ಬೆಂಬಲವಿರಲಿ ಎಂದರು.
ಪ್ರಸ್ತಾವಿಕ ನುಡಿಯನ್ನಡಿದ ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾಕ್ಟರ್ ಎಂ ಎಸ್ ರಾಮಚಂದ್ರ ಯಸಳೂರು ಹೋಬಳಿ ಬೆಳೆಗಾರರ ಸಂಘ ಇಷ್ಟೊಂದು ಸದೃಢವಾಗಿ ಬೆಳೆಯಲು ಹೋಬಳಿಯ ಎಲ್ಲಾ ಬೆಳೆಗಾರರ ಸಹಕಾರ ಅಪಾರವಾಗಿದೆ.ಸಂಘದ ಕಾರ್ಯಗಳಿಗೆ ಪ್ರೋತ್ಸಾಹ ಕೊಟ್ಟ ಎಲ್ಲಾ ಸದಸ್ಯರಿಗೆ ಹಾಗೂ ಬೆಳೆಗಾರರಿಗೆ ಧನ್ಯವಾದಗಳು ತಿಳಿಸಿದರು. ನಂತರ ಸಾಮಾನ್ಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಗಂಗಾಧರರನ್ನು ಅಧ್ಯಕ್ಷರಾಗಿ ಮಾಡಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಬಿ.ಎಂ ನಾಗರಾಜ್, ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಮಾಜಿ ಕಾರ್ಯದರ್ಶಿಗಳಾದ ರಾಜೀವ್, ಯಸಳೂರು ಹೋಬಳಿ ಬೆಳಗಾರರ ಸಂಘದ ಗೌರವ ಕಾರ್ಯದರ್ಶಿ ಎಸ್ಎಸ್ ಪ್ರಸಾದ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಬೆಳೆಗಾರರು ಹಾಜರಿದ್ದರು.