ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಹಬ್ಬಿದ ಬೆಂಕಿ: ಅಗ್ನಿಶಾಮಕ ದಳ ಹಾಗೂ ನೀಕನಹಳ್ಳಿ ಗ್ರಾಮಸ್ಥರ ಕಾರ್ಯಾಚರಣೆಯಿಂದ ನಂದ ಬೆಂಕಿ
ಸಕಲೇಶಪುರ: ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಬಿದ್ದ ಬೆಂಕಿಯನ್ನು ಅಗ್ನಿಶಾಮಕದಳದವರು ನೀಕನಹಳ್ಳಿ ಗ್ರಾಮಸ್ಥರ ನೆರವಿನಿಂದ ಸೋಮವಾರ ನಂದಿಸಿದ್ದಾರೆ.
ತಾಲೂಕಿನ ಹಾನುಬಾಳ್ ಹೋಬಳಿಯ ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ನೀಕನಹಳ್ಳಿ ಸಮೀಪದ ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 20 ಎಕರೆ ಸುಟ್ಟು ಕರಕಲಾಗಿದ್ದು , ಗ್ರಾಮದ ಯುವಕರು ತಮ್ಮ ಜೀವದ ಹಂಗು ತೊರೆದು ತೋರಿದ ಸಮಯಪ್ರಜ್ಞೆಯಿಂದ ಅಕ್ಕಪಕ್ಕದ ತೋಟಗಳಿಗೆ ಬೆಂಕಿ ಹಬ್ಬುವುದು ತಪ್ಪಿದೆ. ನಂತರ ಸಕಲೇಶಪುರ ಪಟ್ಟಣದಿಂದ ಆಗಮಿಸಿದ ಅಗ್ನಿಶಾಮಕದಳದವರು ಗ್ರಾಮಸ್ಥರ ನೆರವಿನಿಂದ ಬೆಂಕಿ ನಂದಿಸಿದ್ದಾರೆ. ಈ ಸಂ‘ರ್‘ದಲ್ಲಿ ಗ್ರಾಮದ ಯುವಕರುಗಳಾದ ರಾಜಶೇಖರ್, ಅನಿಲ್ ಸಂಪಗೂಡು, ಚೇತನ್, ಸುರೇಶ್, ಪ್ರಸನ್ನ, ವಿಶ್ವನಾಥ್ ಸೇರಿದಂತೆ ಮುಂತಾದವರು ಕಾರ್ಯಾಚರಣೆಯಲ್ಲಿ ‘ಾಗಿಯಾಗಿದ್ದರು.
20ಎಸ್.ಕೆ.ಪಿ.ಪಿ 5 ಸಕಲೇಶಪುರ ತಾಲೂಕಿನ ನೀಕನಹಳ್ಳಿ ಸಮೀಪದ ದೇವಿರ ಗುಡ್ಡಕ್ಕೆ ಬಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಪಡೆ ಹಾಗೂ ಗ್ರಾಮಸ್ಥರು ನಂದಿಸಿದರು.
20 ಎಸ್.ಕೆ.ಪಿ.ಪಿ 5-1 ಸಕಲೇಶಪುರ ತಾಲೂಕಿನ ನೀಕನಹಳ್ಳಿ ಸಮೀಪದ ದೇವಿರಗುಡ್ಡಕ್ಕೆ ಬಿದ್ದ ಬೆಂಕಿ