ಸಕಲೇಶಪುರ : ಶುಕ್ರವಾರ ರಾತ್ರಿಯಿಂದಲೇ ಕಾಂತಿ ಎಂಬ.ಹೆಣ್ಣಾನೆಯೊಂದು ಅನಾರೋಗ್ಯದಿಂದ ಬಳಲುತ್ತಿತ್ತು, ಬೆಳಗ್ಗೆಯಿಂದ ಒಂದೇ ಜಾಗದಲ್ಲಿ ಕ್ಯಾಪ್ಟನ್ ಕಾಂತಿ ಮಲಗಿದೆ. ನಿತ್ರಾಣಗೊಂಡು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗಿದೆ ಎಂದು ಹೇಳಲಾಗಿತ್ತು,
ಜ್ವರ ಅಥವಾ ಯಾವುದೋ ಅನಾರೋಗ್ಯದಿಂದ ಕ್ಯಾಪ್ಟನ್ ಕಾಂತಿ ಬಳಲುತ್ತಿದೆ ಎಂದು ಹೇಳಲಾಗುತ್ತಿತ್ತು ಅರಣ್ಯ ಇಲಾಖೆಯವರು ಕಾಯಿಲೆಯಿಂದ ಬಳಲುತ್ತಿದ್ದ ಕಾಂತಿಗೆ ವೈದ್ಯರ ತಂಡದಿಂದ ಚಿಕಿತ್ಸೆ ನೀಡಿದರೂ ಕೂಡ ಫಲಕಾರಿಯಾಗದೆ ಮೃತಪಟ್ಟಿದ್ದು ಇತ್ತೀಚೆಗಷ್ಟೆ ಕಾಂತಿಯು ಮರಿಗೆ ಜನ್ಮ ನೀಡಿತ್ತು ಎನ್ನಲಾಗಿದ್ದು ಆನೆ ಇರುವ ಸ್ಥಳಕ್ಕೆ ಹೋಗಲು ಹೆದರಿ ಅರಣ್ಯಾಧಿಕಾರಿಗಳು ದೂರದಲ್ಲೇ ಇತರ ಆನೆಗಳ ಚಲನ ವಲನಗಳನ್ನು ಗಮನಿಸಿ ನಂತರ
ವೈದ್ಯರ ತಂಡ ಬಂದ ಬಳಿಕ ಕಾಡಾನೆಗೆ ಚಿಕಿತ್ಸೆ ಕೊಡಿಸಿದರಾದರೂ ಸಹಿತ ಕಾಂತಿ ಬದುಕುಳಿಯಲಿಲ್ಲ ಎಂದು ಹೇಳಲಾಗಿದ್ದುಕಾಂತಿಯು ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡಿಗೆ ಕ್ಯಾಪ್ಟನ್ ಆಗಿತ್ತು ಎಂದು ತಿಳಿದು ಬಂದಿದೆ.