ಸಕಲೇಶಪುರ:- ಸಕಲೇಶಪುರ ತಾಲೂಕು ವ್ಯಾಕರವಳ್ಳಿ ಗ್ರಾಮ ಪಂಚಾಯಿತಿಯ ಸುಳ್ಳಕ್ಕಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ಜನರು ಪ್ರತಿನಿತ್ಯ ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು ಈಗ ಇದು ವಿಕೋಪಕ್ಕೆ ಹೋಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುವಂತೆ ಆಗಿದೆ.

ಸುಳ್ಳಕ್ಕಿ ಗ್ರಾಮವು ಸುಮಾರು 400 ರಿಂದ 500 ಜನಸಂಖ್ಯೆ ಇರುವ ಗ್ರಾಮವಾದಿದ್ದು ಈ ಊರಿಗೆ ಅಕ್ಕಪಕ್ಕದ ಗ್ರಾಮಗಳಿಂದ ಒಂದರಿಂದ ಏಳನೇ ತರಗತಿ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿದ್ದು ಈಗ ಈ ವಿದ್ಯಾರ್ಥಿಗಳಿಗೂ ಸಮಸ್ಯೆ ಎದುರಾಗಿದೆ.

ಈ ಗ್ರಾಮವು ಕಾಡಾನೆಗಳ ಸಮಸ್ಯೆಯಿಂದ ಪೀಡಿತವಾಗಿದ್ದು ಪ್ರತಿದಿನ ಗ್ರಾಮದ ಜನರು ಭಯ ಬೀತದಿಂದ ಜೀವನ ಅಲ್ಲದೆ ಸರಿಯಾದ ರಸ್ತೆ ಇಲ್ಲದೆ ಈಗ ವಿದ್ಯಾರ್ಥಿಗಳು ಕೂಡ ಮಣ್ಣಿನ ರಸ್ತೆಯಲ್ಲಿ ಕೆಸರು ತುಂಬಿದ ಗುಂಡಿಗಳನ್ನು ದಾಟಿಕೊಂಡು ಕಾಡಾನೆಯ ಭಯದಿಂದಲೇ ಶಾಲೆಗೆ ಬರುವಂತಹ ಪರಿಸ್ಥಿತಿ ಅಲ್ಲದೆ ಈ ಊರು ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಒಂದು ವರ್ಷದಿಂದ ಈ ಊರಿಗೆ ಬರುತ್ತಿದ್ದ ಸರ್ಕಾರಿ ಬಸ್ಸು ಕೂಡ ಬರುತ್ತಿಲ್ಲ.

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಶಾಸಕರಾದ ಸಿಮೆಂಟ್ ಮಂಜುರವರು ಈ ಗ್ರಾಮಕ್ಕೆ ಭೇಟಿ ನೀಡಿ ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಕೂಡ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸುಳ್ಳಕ್ಕಿ ಗ್ರಾಮಸ್ಥರು ಇದೀಗ ಮೂಲಭೂತ ಸೌಕರ್ಯಗಳಿಗಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಶಾಸಕರು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಮಸ್ಯೆಯನ್ನು ಆಲಿಸಬೇಕೆಂದು ಒತ್ತಾಯಿಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed