ಬ್ಯಾಂಕುಗಳಲ್ಲಿ 2,000 ರೂಪಾಯಿ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವ ಕೊನೆಯ ದಿನಾಂಕವನ್ನ ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆರ್‍ಬಿಐ, 2000 ನೋಟು ವಿನಿಮಯಕ್ಕೆ ಇಂದು ಕಡೆಯ ದಿನಾವಾಗಿತ್ತು.ಆದ್ರೆ, ಈ ಗಡುವನ್ನ ಅಕ್ಟೋಬರ್ 7ರವರೆಗೆ ವಿಸ್ತರಿಸಲಾಗಿದೆ.
ಹೀಗಾಗಿ ₹2,000 ನೋಟು ಮಾನ್ಯವಾಗಿರುತ್ತದೆ ಎಂದು ಆರ್ಬಿಐ ಹೇಳಿದೆ.ಇನ್ನು ಅಕ್ಟೋಬರ್ 8 ರಿಂದ ಬ್ಯಾಂಕುಗಳು 2,000 ರೂಪಾಯಿ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವುದನ್ನ ನಿಲ್ಲಿಸುತ್ತವೆ.
ಆದಾಗ್ಯೂ, ಜನರು ಆರ್ಬಿಐನ 19 ಕಚೇರಿಗಳಲ್ಲಿ 2,000 ರೂ.ಗಳ ನೋಟುಗಳನ್ನ ವಿನಿಮಯ ಮಾಡಿಕೊಳ್ಳಬಹುದು.
ನೋಟುಗಳನ್ನು ಇಂಡಿಯಾ ಪೋಸ್ಟ್ ಮೂಲಕ ಆರ್ಬಿಐನ “ವಿತರಣಾ ಕಚೇರಿಗಳಿಗೆ” ಅಂಚೆ ಮೂಲಕ ಕಳುಹಿಸಬಹುದು ಎಂದು ಆರ್ ಬಿ ಐ ಹೇಳಿದೆ.