ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನೇತೃತ್ವದಲ್ಲಿ ಇಂದು 9ನೇ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಸಕಲೇಶಪುರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಜೊತೆಗೆ ತಾಲೂಕು ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರ ಸಂಘದ ಅಧ್ಯಕ್ಷರು,ಸದಸ್ಯರು, ಪದಾಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು.
ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಅವರ ಕಾಫಿಗೆ ಸಂಬಂಧಪಟ್ಟಂತೆ ರಚಿಸಿದ ಹಾಡು ನೆರೆದಿದ್ದವರನ್ನು ಕುಣಿಯುವಂತೆ ಮಾಡಿತು.
ಚಂದನ್ ಶೆಟ್ಟಿ ಅವರ ಹಾಡಿಗೆ ನೆರೆದಿದ್ದವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುವುದರೊಂದಿಗೆ ಸಂಭ್ರಮ ಆಚರಿಸಿದರು. ಕಾರ್ಯಕ್ರಮದಲ್ಲಿ ಬೆಳೆಗಾರರ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೋಲಾಟ, ಮಲೆನಾಡು ಸುಗ್ಗಿ ಕುಣಿತ, ಡೊಳ್ಳುಗೊಂಬೆ ಕುಣಿತ , ಜನಪದ ಶೈಲಿಯ ಗೀತೆಗಳು ನೆರೆದಿದ್ದವರನ್ನು ಖುಷಿಯ ಕಡಲಿನಲ್ಲಿ ತೇಲಿಸಿತು.ಹಾಗೂ ಶಾಲಾ ಮಕ್ಕಳಿಂದ ಕಾಫಿ ಮಾಡಲ್ ಮಾಡುವ ಮೂಲಕ ಅವರಿಗೆ ಮೆಚ್ಚುಗೆಯ ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸಂದೇಶ ಅವರು ಕಾಫಿ ಬೆಳೆಗಾರರ ಬದುಕು ಹಸನಾಗಲು ಅವರು ಯಾವ ರೀತಿ ಸಂಘಟನೆಯಾಗಬೇಕು ಎಂಬುದು ಬೆಳೆಗಾರರಿಗೆ ಕಿವಿ ಮಾತಾಗಿತ್ತು.
ಒಟ್ಟಾರೆ ಹಾಸನ ಜಿಲ್ಲಾ ಬೆಳೆಗಾರರ ಸಂಘದಿಂದ ಆಯೋಜಿಸಲ್ಪಟ್ಟಿದ್ದ ಒಂಬತ್ತನೇ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ಸಂದೇಶ,ಕರ್ನಾಟಕ ಪ್ಲಾಂಟರ್ ಸಂಘದ ಅಧ್ಯಕ್ಷರಾದ ಮೋಹನ್ ಕುಮಾರ್, ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಅಧ್ಯಕ್ಷರಾದ ಕ್ಯಾನಹಳ್ಳಿ ಸುಬ್ರಹ್ಮಣ್ಯ, ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ, ಕಿರುತೆರೆ ನಟರಾದ ಚಂದನ್ ಹಾಗೂ ಶ್ರೀ ಮತಿ ನೇಹ ಚಂದನ್ ಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಬಳೆಗಾರರು ಭಾಗಿಯಾಗಿದ್ದರು.