ಸಕಲೇಶಪುರ :- ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾದ ರೇಖಾ ಗೋಪಿನಾಥ್ ಅವರ ನೇತೃತ್ವದಲ್ಲಿ ಇಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿ ಮಹೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಮತ್ತು ಸರಳವಾಗಿ ಪಂಚಾಯಿತಿ ಕಚೇರಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರೇಖಾ ಗೋಪಿನಾಥ ಅವರು ಮಾತನಾಡಿ ಗಾಂಧೀಜಿಯವರು ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ನಮ್ಮಗಳಿಗೆ ಸ್ವಾತಂತ್ರ ತಂದು ಕೊಡುವಲ್ಲಿ ಅಪಾರ ಶ್ರಮ ವಹಿಸಿದ್ದಾರೆ.ಅವರುಗಳ ಜನ್ಮದಿನವನ್ನು ಇಂದು ಆಚರಿಸಲು ನಮಗ ಸಂತೋಷವಾಗುತ್ತದೆ ಎಂದು ತಿಳಿಸಿದರು.

ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ ಅವರು ಮಾತನಾಡಿ ಗಾಂಧೀಜಿಯವರು ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಸ್ವಾಭಿಮಾನದಿಂದ ತಮ್ಮಗಳ ದಿನಗಳನ್ನು ಕಳೆದ ಮಹಾನುಭಾವರು, ಅವರು ನಡೆದು ಬಂದ ಹಾದಿಯಲ್ಲಿ ನಾವು ನಡೆದರೆ ಮಹಾನುಭಾವರು ಕಂಡ ಕನಸನ್ನು ನಾವು ಇಂದಿಗೂ ನನಸು ಮಾಡಬಹುದು ಅವರುಗಳ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.

ಇದೆ ವೇಳೆ ಬಾಗೆ ಸರ್ಕಲ್ ನಲ್ಲಿರುವ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀನಿವಾಸ್, ಸದಸ್ಯರುಗಳಾದ ಜೈ ಶಂಕರ್, ರಾಕೇಶ್, ಸತೀಶ್ , ಸವಿತಾ ಜಗದೀಶ್ , ಬಿಲ್ ಕಲೆಕ್ಟರ್ ವೀರಭದ್ರ , ಅಂಗನವಾಡಿ ಕಾರ್ಯಕರ್ತೆಯರು, ವಿ ಆರ್ ಡಬ್ಲ್ಯೂ ಅರ್ಜುನ್ ಗೌಡ , ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *