ಹಾಸನ : ಶೈಕ್ಷಣಿಕ ಕಾರ್ಯಾಗಾರದ ಮೂಲಕ ಉಪನ್ಯಾಸಕರು ಹೆಚ್ಚಿನ ಜ್ಞಾನ ಪಡೆದು ಅವರ ಪರಿಶ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನದಲ್ಲಿ ಜಿಲ್ಲೆಗೆ ಉತ್ತಮ ಪಲಿತಾಂಶ ತರುತ್ತಿದ್ದಾರೆ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಕರೆ ನೀಡಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಿತ ಶಾಸ್ತ್ರ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ೨೦೨೩-೨೪ನೇ ಸಾಲಿನ ಶೈಕ್ಷಣಿಕ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಬೇಡಿಕೆಗಳೇನಿದೆ ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡಿ ಗಮನಸೆಳೆಯುತ್ತೇನೆ.

ಪ್ರಸ್ತುದಲ್ಲಿ ಗಣಿತ ಎಂಬುದು ಎಲ್ಲಾ ಸಂದರ್ಭದಲ್ಲೂ ಮುಖ್ಯವಾಗಿದೆ. ಈ ಗಣಿತ ವಿಭಾಗದಲ್ಲಿ ಆಸಕ್ತಿವಹಿಸಿ ಕಲಿಯಬೇಕು. ಶಿಕ್ಷಕರು ಕೂಡ ಕಾಲಕ್ಕೆ ಅನುಗುಣವಾಗಿ ತಿಳಿಯಬೇಕಾಗಿದೆ. ಇಂತಹ ಕಾರ್ಯಗಾರಗಳು ಹೆಚ್ಚಿನ ವಿಚಾರವನ್ನು ತಿಳಿದುಕೊಳ್ಳಲು ಅನುಕೂಲವಾಗಿದೆ. ಗ್ರಾಮೀಣ ಭಾಗದಲ್ಲೂ ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ ಮಾತನಾಡಿ, ಕೊರೋನಾ ವೇಳೆ ವಿದ್ಯಾರ್ಥಿಗಳೂ ಆನ್ಲೈನ್ ಪಾಠ ಕಲಿತು ಪರೀಕ್ಷೆ ಎದುರಿಸುವ ಸಂದರ್ಭ ಬಂದಿತ್ತು. ಈ ವೇಳೆ ತರಗತಿಯಲ್ಲಿ ಪಾಠ ಕೇಳದೇ ಉತ್ತರ ಬರೆಯುವ ಕಾಲ ಇತ್ತು. ವಿಜ್ಞಾನ ಇತರೆ ಎಲ್ಲಾ ಭಾಷೆ ನೀಡಿದರೂ ಗಣಿತ ಸಬ್ಜೆಕ್ಟ್ ಮಾತ್ರ ಸಮಸ್ಯೆ ಆಗಿತ್ತು.

ಈ ವೇಳೆ ಒಂದು ಕೈಪಿಡಿ ಮಾಡಲು ಮೂಂದಾದೆವು. ಕೇವಲ ಒಂದು ವಾರದಲ್ಲಿ ಕೈಫಿಡಿ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡಲಾಯಿತು ಎಂದರು. ಜಿಲ್ಲೆಯಲ್ಲಿ ಪರೀಕ್ಷಾ ಪಲಿತಾಂಶದಲ್ಲಿ ೧೩ನೇ ಪ್ಲೇಸ್ನಲ್ಲಿ ಇದ್ದುದು ೭ನೇ ಸ್ಥಾನಕ್ಕೆ ಬಂದಿದ್ದೇವೆ. ವಿಜ್ಞಾನ ವಿಭಾಗದಲ್ಲಿ ಹೆಚ್ಚು ಪಲಿತಾಂಶ ಬಂದಿದ್ದು, ಉಪನ್ಯಾಸಕರ ಪರಿಶ್ರಮದಿಂದಲೇ ಜಿಲ್ಲೆಯಲ್ಲಿ ಹೆಚಚಿನ ಮಟ್ಟದಲ್ಲಿ ಉತ್ತಮ ಪಲಿತಾಂಶ ಬಂದಿದೆ ಎಂದು ಶ್ಲಾಘಿಸಿದರು.

ನಮ್ಮ ವಿದ್ಯಾರ್ಥಿಗಳೂಳ ಬೇರೆ ಜಿಲ್ಲೆಗೆ ವಲಸೆ ಹೋಗಬಾರದು ಎನ್ನುವ ದೃಷ್ಠಿಯಲ್ಲಿ ಅನೇಕ ಕ್ರಮಕೈಗೊಳ್ಳಲಾಗಿದೆ. ಸಕ್ರಿಯವಾಗಿ ಕೆಲಸ ಮಾಡುವ ಕಾಲೇಜುಗಳಿದ್ದು, ವರ್ಷಕ್ಕೆ ೫ ಲಕ್ಷ ಕೊಟ್ಟು ಪಿಯು ಶಿಕ್ಷಣ ಕೊಡಿಸುವ ಪೋಷಕರು ಇದ್ದಾರೆ. ನಮ್ಮ ಹಾಸನ ಜಿಲ್ಲೆಯಲ್ಲೆ ಉತ್ತಮವಾದ ಕಾಲೇಜುಗಳಿದ್ದು, ನೀಟ್ ಮತ್ತು ಸಿಇಟಿ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಬಹಳಷ್ಟು ಕ್ರಮಗಳ ಕೈಗೊಳ್ಳಲಾಗಿದೆ. ನಾವು ಪಲಿತಾಂಶದಲ್ಲಿ ಬಹಳ ಮುಂದೆ ಇದ್ದೇವೆ.

ಈಗ ಏಳನೆ ಸ್ಥಾನದಲ್ಲಿ ಇದ್ದೇವೆ ಎಂದರೇ ಮುಂದಿನ ಪಲಿತಾಂಶದಲ್ಲಿ ಇನ್ನು ಕೂಡ ಮೇಲಿನ ಸ್ಥಾನಕ್ಕೆ ಅಂದ್ರೆ ಮೊದಲನೇ ಇಲ್ಲವೇ ಎರಡನೇ ಸ್ಥಾನಕ್ಕೆ ಹೋಗಬೇಕು ಎನ್ನುವ ನಮ್ಮ ಪಯ್ರತ್ನ ಇದೆ ಎಂದು ಕಿವಿಮಾತು ಹೇಳಿದರು. ಈ ನಿಟ್ಟಿನಲ್ಲಿ ಉಪನ್ಯಾಸಕರಿಗೆ ಇಂತಹ ಕಾರ್ಯಾಗಾರ ನಡೆಸಿ ಅವರಿಗೆ ಜ್ಞಾನ ತುಂಬಿ ನಂತರ ಸೂಚನೆ ನೀಡಿದಂತೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ತುಂಬುವ ಕೆಲಸ ಮಾಡಲಾಗುತ್ತಿದ್ದು, ಇದರಿಂದ ಮುಂದಿನ ಶೈಕ್ಷಣಿಕ ಪಲಿತಾಂಶದಲ್ಲಿ ಮೊದಲ ಸ್ಥಾನಕ್ಕೆ ಹಾಸನ ಜಿಲ್ಲೆ ಬರಲೆಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಮತ್ತು ಹಿರಿಯ ಉಪನ್ಯಾಸಕರಿಗೆ ಸನ್ಮಾನಿಸಿದರು. ನಂತರ ಪ್ರತಿಭಾ ಪುರಸ್ಕಾರದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದರು.

ಇದೆ ವೇಳೆ ಗಣಿತ ವಿಭಾಗಕ್ಕೆ ಸಂಬಂಧಿಸಿದ ಪುಸ್ತಕ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಹಾಸನ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಿತ ಶಾಸ್ತ್ರ ವೇದಿಕೆಯ ಅಧ್ಯಕ್ಷ ಡಿ.ವಿ. ಸುರೇಶ್, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ಅಧ್ಯಕ್ಷ ಸುರೇಂದ್ರ ಕುಮಾರ್, ವೇದಿಕೆಯ ಸಂಪನ್ಮೂಲವ್ಯಕ್ತಿ ಹೆಚ್.ವಿ. ಸುರೇಶ್, ಮಹಾ ಪೋಷಕರಾದ ಎಸ್. ಲೋಕೇಶ್, ಮಹಾಪೋಷಕರು ನಂದಿನಿ, ಕಾರ್ಯದರ್ಶಿ ಡಿ. ಶೋಭಾ, ಅನಂತಪದ್ಮನಾಭ ಸ್ವಾಮಿ, ಇತರರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed