ಹಾಸನ: ತಾಲೂಕಿನ ಸಾವಂತನಹಳ್ಳಿ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡಲಾಗುತ್ತಿದ್ದು, ಆದರೇ ಕಾನೂನು ಬಾಹಿರವಾಗಿ ಹೆಚ್.ಆರ್.ಪಿ. ಹೆಸರಿನಲ್ಲಿ ಬೇರೆಯವರಿಗೆ ಮಂಜೂರು ಮಾಡಲು ಮುಂದಾಗಿದ್ದು, ನಮ್ಮ ನಮಗೆ ವಾಪಸ್ ಕೊಡಿ ಎಂದು ಗ್ರಾಮಸ್ಥರು ಗ್ರಾಮದ ಗೋಮಾಳ ಜಾಗದಲ್ಲಿ ರಸ್ತೆ ಮೇಲೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತ ಆದೇಶದಂತೆ ಹೆಚ್.ಆರ್.ಪಿ. ಸಂತ್ರಸ್ತರಿಗೆ ಭೂಮಿ ಬಿಡಿಸಿಕೊಡಲು ಹಾಸನ ತಹಸೀಲ್ದಾರ್ ಶ್ವೇತಾ ನೇತೃತ್ವದಲ್ಲಿ ಪೊಲೀಸರ ತಂಡವು ಸಾವಂತನಹಳ್ಳಿ ಗ್ರಾಮಕ್ಕೆ ತೆರಳಿದ್ದು, ಮುಳುಗಡೆ ಸಂತ್ರಸ್ತರಿಗೆ ಜಾಗ ಬಿಟ್ಟು ಕೊಡುವಂತೆ ರೈತರ ಮನ ಹೋಲಿಸಲು ಮುಂದಾದಾಗ ಗ್ರಾಮದ ರೈತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಜಾಗ ಬಿಟ್ಟು ಕೊಡುವುದಿಲ್ಲ ಎಂದು ವಾಗ್ವಾದ ನಡೆಸಿ ಘೋಷಣೆ ಕೂಗಿದರು.
ಹಿರಿಯ ವಕೀಲ ಗೋಪಾಲ್ ಮಾಧ್ಯಮದೊಂದಿಗೆ ಮಾತನಾಡಿ, ಸಾವಂತನಹಳ್ಳಿ ಗ್ರಾಮದ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ಕಳೆದ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಗ್ರಾಮದ ಸುಮಾರು ೧೨೦ಕ್ಕೂ ಹೆಚ್ಚು ಕುಟುಂಬಗಳು ಕಳೆದ ೫೦ ವರ್ಷಗಳಿಂದಲೂ ಈ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಈಗ ಹಾಸನ ತಹಶೀಲ್ದಾರ್ ಅವರು ಎಚ್.ಅರ್.ಪಿ ಸಂತ್ರಸ್ತರಿಗೆ ಜಾಗ ಬಿದಿಸಿಕೊಡಲು ಮುಂದಾಗಿದ್ದಾರೆ. ಇದರ ಹಿಂದೆ ಅಧಿಕಾರಿಗಳ ಅಕ್ರಮ ಭೂ ಮಂಜೂರಾತಿ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದು, ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಹತ್ತಾರು ವರ್ಷಗಳ ಹಿಂದಿನ ಕಾಲದಿಂದಲೂ ಸಾಗುವಳಿಯಲ್ಲಿ ಇರುವ ನೂರಾರು ಸಂಖೆಯ ರೈತರಿಗಿಂತ, ಯಾರೋ ಅಕ್ರಮವಾಗಿ ಪ್ರವೇಶ ಮಾಡಿರವವರೆ ಹೆಚ್ಚಾಗಿದ್ದಾರೆ, ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ನಿಜವಾದ ಭೂ ಮಾಲೀಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು. ಈಗಲೇ ಈ ವಿಚಾರವಾಗಿ ಉಚ್ಚ ನ್ಯಾಯಾಲಯಕ್ಕೆ ರಿಟ್ ಪೇಟಿಷಿಯನ್ ಹಾಕಿದ್ದು, ಆದಾಗ್ಯೂ ಜಾಗ ಬಿಡಿಸಲು ಅಧಿಕಾರಿಗಳು ಮುಂದಾಗಿರುವುದು ಕಾನೂನಿಗೆ ವಿರುದ್ದವಾದ ಚಟುವಟಿಕೆಯಗಿದೆ ಎಂದು ಆರೋಪಿಸಿ ಕೂಡಲೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಈ ನಿರ್ಧಾರ ವಾಪಸ್ ಪಡೆದು. ರೈತರಿಗೆ ಭೂಮಿ ಉಳಿಸಿ ಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ಗ್ರಾಮದಲ್ಲಿನ ೭೦ ಎಕರೆ ಜಮೀನನ್ನು ೧೨೦ಕ್ಕೂ ಹೆಚ್ಚು ಕುಟುಂಬಗಳು ತಲಾ ಅರ್ಧ ಎಕರೆ ಹಂಚಿಕೊಂಡು ಜೀವನ ನಡೆಸಿಕೊಂಡು ಬಂದಿದ್ದಾರೆ. ಆದರೆ ಇದೀಗ ಯಾರೂ ಅಪರಿಚಿತರು ಬೋಗಸ್ ದಾಖಲೆ ತಂದು ಜಾಗ ಬಿಟ್ಟು ಕೊಡುವಂತೆ ಒತ್ತಡ ಹಾಕುತ್ತಿರುವುದು ಖಂಡನೀಯ ಎಂದರು.
ಕಳೆದ ೪೦ ವರ್ಷಗಳಿಂದ ಗ್ರಾಮದ ರೈತರು ಸ್ವಾಧೀನದಲ್ಲಿ ಇರುವ ಬಗ್ಗೆ ಕಂದಾಯ ಇಲಾಕೆಯಲ್ಲೆ ಮಾಹಿತಿ ಇದೆ ಆದರೆ, ಈಗ ತಾಲೂಕು ಆಡಳಿತ ನಿಜವಾದ ದಾಖಲೆಗಳು ಇವೆ ಕೂಡಲೇ ಜಾಗ ಬಿಟ್ಟು ಕೊಡುವಂತೆ ತಾಕೀತು ಮಾಡುತ್ತಿದೆ ಇದನ್ನು ರೈತರು ಸಹಿಸುವುದಿಲ್ಲ ಇಂತಹ ನಿರ್ಧಾರದಿಂದ ತಾಲೂಕು ಹಾಗೂ ಜಿಲ್ಲಾಡಳಿ ಹಿಂಪಡೆಯಬೇಕು ಎಂದರು.
ಆದಾಗ್ಯೂ ಜಾಗ ಬಿಟ್ಟು ಕೊಡಬೇಕು ಎಂದು ತಾಲೂಕು ಆಡಳಿತ ಒತ್ತಡ ಹಾಕಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಜನ ಜಾನುವಾರುಗಳ ಜೊತೆ ತೆರಳಿ ಅಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಶ್ವೇತಾ ಅವರು ಮಾಧ್ಯಮದೊಂದಿಗೆ ಮಾತನಾಡಿ, ಭೂಮಿ ಬೇಕೆಂದು ರೈತರು ಹೈಕೋರ್ಟ್‌ಗೆ ಹೋಗಿದ್ದು, ಇನ್ನು ನ್ಯಾಯಾಲಯದಿಂದ ಆದೇಶ ಬಂದಿರುವುದಿಲ್ಲ. ಕೋರ್ಟ್‌ಗೆ ಬದ್ಧರಾಗಿ ನಾವು ಕಾನೂನು ಪಾಲನೆ ಮಾಡಿದ್ದೇವೆ. ಕಳೆದ ಹಲವಾರು ವರ್ಷಗಳಿಂದಲೂ ಈ ಜಾಗಕ್ಕೆ ತಹಸೀಲ್ದಾರ್ ಹೋಗಿ ಬರುತ್ತಿದ್ದು, ನಾವು ಕೂಡ ಎರಡು ಬಾರಿ ಹೋಗಿದ್ದು ಅವಕಾಶ ಕೊಟ್ಟಿರುವುದಿಲ್ಲ ಎಂದರು.
ಹೆಚ್.ಆರ್.ಪಿ. ಭೂಮಿ ಬಗ್ಗೆ ಕಂಡಿಶೇನ್ ಹೇಳಿದ್ದು, ಹೈಕೋರ್ಟ್ ತೀರ್ಪು ಬಂದ ಮೇಲೆ ನಾವು ಅದಕ್ಕೆ ಬದ್ಧರಾಗಿರುತ್ತೇವೆ. ೬೬ ಎಕರೆ ೭೭ ಗುಂಟೆ ಗೋಮಾಳ ಜಮೀನು ಆಗಿದ್ದು, ಹೆಚ್.ಆರ್.ಪಿ.ಗೆ ರಿಸರ್ವ್ ಮಾಡಲಾಗಿದೆ. ಕಳೆದ ೪೦ ವರ್ಷಗಳಿಂದಲೂ ಅಲ್ಲಿನ ಜನರು ಅನುಭವದಲ್ಲಿದ್ದಾರೆ. ಲೋಕಾಯುಕ್ತ ಮತ್ತು ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಾನು ಸ್ಥಳಕ್ಕೆ ಹೋಗಿರುವುದಾಗಿ ಹೇಳಿದರು.